ನಿಮ್ಮ ಸುದ್ದಿ ಬೆಂಗಳೂರು
ನನಗೆ ವೈಯುಕ್ತಿವಾಗಿ ರಾಜಕೀಯ ರಂಗದಲ್ಲಿ ಮುಂದುವರೆಯುವ ಬಗ್ಗೆ ಆಸಕ್ತಿಯಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಮನದಾಳದ ಇಂಗಿತ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಮಾತನಾಡಿದ ಅವರು, ನಾನು ರಾಜಕೀಯದಿಂದ ನಿವೃತ್ತಿ ಹೊಂದಬೇಕು ಎಂದು ಮನಸ್ಸು ಮಾಡಿದ್ದೆ. ಆದರೆ ಜನರ ಪ್ರೀತಿ, ವಿಶ್ವಾಸಕ್ಕಾಗಿ ಶರಣಾಗಿ ನಿವೃತ್ತಿ ಪಡೆದರೆ ಅವರಿಗೆಲ್ಲ ಅನ್ಯಾಯವಾಗುತ್ತದೆ ಎಂಬ ಕಾರಣಕ್ಕೆ ಮುಂದುವರೆದಿದ್ದೇನೆ ಎಂದರು.
ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಸೇರಿ ನಮ್ಮ ಪುತ್ರ ನಿಖಿಲ್ ನನ್ನು ಸೋಲಿಸಿದ್ದನ್ನು ಇಂದಿಗೂ ಮರೆತಿಲ್ಲ. ಎಲ್ಲರೂ ಸೇರಿ ನಿಖಿಲ್ ನನ್ನು ಸೋಲಿಸಿದರು ಎಂದು ಭಾವುಕ ನುಡಿ ನುಡಿದರು.
ನಿಖಿಲ್ ಗೆ ಚುನಾವಣೆಗೆ ಸ್ಪರ್ಧಿಸುವುದು ಬೇಡ ಎಂದು ಕಿವಿ ಮಾತು ಹೇಳಿದ್ದೆ. ಆದರೆ ನಮ್ಮನ್ನು ಸೋಲಿಸಲೇಬೇಕು ಎಂಬ ಯೋಜನೆ ರೂಪಿಸಿಯೇ ನಿಲ್ಲಿಸಿದರು. ಕೊನೆಗೂ ಎಲ್ಲರೂ ಸೇರಿ ನಿಖಿಲ್ ನನ್ನು ಸೋಲಿಸಿದ್ದಾರೆ. ಆದರೂ ನಮ್ಮ ಕುಟುಂಬಕ್ಕೆ ಮಂಡ್ಯ ಜಿಲ್ಲೆಯ ಜನರ ಬಗ್ಗೆ ಬೇಸರವಿಲ್ಲ ಎಂದರು.