ನಿಮ್ಮ ಸುದ್ದಿ ಬಾಗಲಕೋಟೆ
ಅನುಕರಣೀಯ ಗುಣ, ದಕ್ಷ ಆಡಳಿತವಿದ್ದಲ್ಲಿ ಸಲಹೆ ಸೂಚನೆ ಅಗತ್ಯವಿಲ್ಲ, ಅಂತಹ ಆಡಳಿತ ಗಾಯತ್ರಿ ಬ್ಯಾಂಕ್ ಹೊಂದಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ತಿಳಿಸಿದರು.
ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಬಾವಿ ಗ್ರಾಮದ ಶಾಖಾಂಬರಿ ಕಲ್ಯಾಣ ಮಂಟದಲ್ಲಿ ಗಾಯತ್ರಿ ಪತ್ತಿನ ಸಹಕಾರ ಸಂಘದ ೨೫ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು. ಬ್ಯಾಂಕ್‌ನ ಶೇರ್ ಬಂಡವಾಳ, ನಿಗಳು, ಬ್ಯಾಂಕ್ ಶಿಲ್ಕು, ಸಾಲ ಹೀಗೆ ಬ್ಯಾಂಕ್ ಎಲ್ಲ ಹಂತದಲ್ಲೂ ಉತ್ತಮ ಪ್ರಗತಿ ತೋರಿದೆ ಎಂದರು.
ಸಂಘಕ್ಕೆ ಆದಂತಹ ಲಾಭ ಎಲ್ಲ ಶಾಖೆಗಳ ಪ್ರಯತ್ನವನ್ನು ತೋರಿಸುತ್ತದೆ. ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ದಕ್ಷತೆ ಎದ್ದು ಕಾಣುತ್ತಿದೆ. ಹಲವು ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ಮೂಲಕ ಬ್ಯಾಂಕ್ ಪ್ರಗತಿಯತ್ತ ಹೆಜ್ಜೆ ಹಾಕಿದೆ. ಒಂದು ನಾವಿನಲ್ಲಿ ಎಲ್ಲರನ್ನೂ ಸರಿದೂಗಿಸಿಕೊಂಡು ಹುಟ್ಟು ಹಾಕುತ್ತಿರುವ ಬ್ಯಾಂಕ್ ಅಧ್ಯಕ್ಷ ರವೀಂದ್ರ ಕಲಬುರ್ಗಿ ಅವರ ಕಾರ್ಯ ಶ್ಲಾಘನೀಯ ಎಂದರು.
ಬ್ಯಾಂಕ್ ಅಧ್ಯಕ್ಷ ರವೀಂದ್ರ ಕಲಬುರ್ಗಿ ಮಾತನಾಡಿ, ೨ ಕೋಟಿ ರೂ. ವೆಚ್ಚದಲ್ಲಿ ಕೇಂದ್ರ ಕಚೇರಿ ಕಟ್ಟಡ ಸಿದ್ಧಗೊಳ್ಳುತ್ತಿದೆ. ಇದಕ್ಕಾಗಿ ಈ ಬಾರಿಯ ೨೨ ಲಕ್ಷ ರೂ. ಡಿವಿಡೆಂಡ್‌ನ್ನು ಕಟ್ಟಡಕ್ಕೆ ಉಪಯೋಗಿಸಲು ಸದಸ್ಯರ ಒಪ್ಪಿಗೆ ಮೇಲೆ ನಿರ್ಧರಿಸಲಾಗಿದ್ದು ಅನುಮತಿ ನೀಡಬೇಕು ಎಂದು ವಿನಂತಿಸಿದರು. ಅಧ್ಯಕ್ಷರ ವಿನಂತಿಗೆ ಸಭೆ ಚಪ್ಪಾಳೆ ಮೂಲಕ ಅನುಮತಿ ನೀಡಿತು.
ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ಹೇಮಂತ ಧುತ್ತರಗಿ ವಾರ್ಷಿಕ ವರದಿ ವಾಚಿಸಿದರು. ಸಂಘದ ನಿರ್ದೇಶಕ ರವೀಂದ್ರ ರಾಮದುರ್ಗ, ಹಿತೈಸಿ ಕೆ.ಎಸ್.ರಾಮದುರ್ಗ ಮಾತನಾಡಿದರು. ಇದೇ ಸಂದರ್ಭದಲ್ಲಿ ಪಿಯುಸಿಯಲ್ಲಿ ಉನ್ನತ ಸಾಧನೆ ಮಾಡಿದ ಸಂಘದ ಸದಸ್ಯರ ಮಕ್ಕಳಿಗೆ ಉನ್ನತ ಶಿಕ್ಷಣಕ್ಕಾಗಿ ಪ್ರೋತ್ಸಾಹ ಧನ ವಿತರಿಸಲಾಯಿತು.
ಪಿಕೆಪಿಎಸ್ ಅಧ್ಯಕ್ಷ ಗದಿಗೆಯ್ಯ ನಂಜಯ್ಯನಮಠ, ಸಂಘದ ಉಪಾಧ್ಯಕ್ಷ ಸಂಗಪ್ಪ ಕರಡಿ, ನಿರ್ದೇಶಕರಾದ ಮಲ್ಲೇಶಪ್ಪ ಧೂಪದ, ಲುಮ್ಮಣ್ಣ ಕಣಗಿ, ಜಗನ್ನಾಥ ಗಾಡಿ, ಶಂಕ್ರಪ್ಪ ಜನಿವಾರದ, ದಾದೇಸಾ ಬುವಾಜಿ, ರೋಮಣ್ಣ ಧುತ್ತರಗಿ, ಹನಮಪ್ಪ ಕತ್ತಿ, ಸುಭಾಷ ಭಾಪ್ರಿ, ಹನಮಂತಪ್ಪ ಒಡ್ಡೋಡಗಿ, ಮಹೇಶ ಜೀರಗಿ, ಸಕ್ಕೂಬಾಯಿ ಇಜೇರಿ, ಲಕ್ಷಿö್ಮಬಾಯಿ ಹನಮಸಾಗರ, ರೋಮಣ್ಣ ಭಜಂತ್ರಿ, ನಾಗಪ್ಪ ವಾಲ್ಮೀಕಿ ಸೇರಿದಂತೆ ಸಂಘದ ನಾನಾ ಶಾಖೆಗಳ ಸಲಹಾ ಸಮಿತಿ ಸದಸ್ಯರು ಇದ್ದರು.