This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Politics News

ಮದುವೆ, ಬಸ್‌ನಿಲ್ದಾಣ ಸ್ಥಳದಲ್ಲಿ ಕೋವಿಡ್ ಕೌಂಟರ್

ನಿಮ್ಮ ಸುದ್ದಿ ಬಾಗಲಕೋಟೆ

ದೇಶ ವಿದೇಶಗಳಲ್ಲಿ ಕೊರೊನಾ ರೂಪಾಂತರಗೊಳ್ಳುತ್ತಿರುವ ಹಿನ್ನಲೆಯಲ್ಲಿ ಕೊರೊನಾ ಮಾದರಿಗಳ ಸಂಗ್ರಹವನ್ನು ಹೆಚ್ಚಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಶಿವಯೋಗಿ ಕಳಸ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ ಸಭಾಭವನದಲ್ಲಿಂದು ಕೋವಿಡ್, ಮತದಾರರ ಪರಷ್ಕರಣೆ, ಪ್ರವಾಹ ಹಾಗೂ ಅತೀವೃಷ್ಠಿ ಕುರಿತ ಪರಿಹಾರ ಸೇರಿದಂತೆ ಇತರೆ ವಿಷಯಗಳ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜನ ಹೆಚ್ಚಾಗಿ ಸೇರುವ ಬಸ್ ನಿಲ್ದಾಣ, ಮದುವೆ ಮಂಟಪ ಸೇರಿದಂತೆ ಇತರೆ ಸ್ಥಳಗಳಲ್ಲಿ ಕೊರೊನಾ ಸ್ಯಾಂಪಲ್ ಸಂಗ್ರಹ ಕೌಂಟರ್‌ಗಳನ್ನು ತೆರೆಯುವಂತೆ ಸೂಚಿಸಿದರು. ಕೋವಿಡ್ ಲಸಿಕೆ ಸದ್ಯದಲ್ಲಿಯೇ ಪರಿಚಯಿಸಲಿದ್ದು, ಮೊದಲ ಹಂತದ ಫಲಾನುಭವಿಗಳ ಮಾಹಿತಿಯನ್ನು ತಂತ್ರಾಂಶದಲ್ಲಿ ಅಳವಡಿಸಿದ ಬಗ್ಗೆ ಪರಿಶೀಲಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಮಾತನಾಡಿ ಅಮೇರಿಕಾದಿಂದ ಲಂಡನ ಮಾರ್ಗವಾಗಿ ಇಲಕಲ್ಲ ನಗರಕ್ಕೆ ೪ ಜನ ಬಂದಿದ್ದು, ಅವರೆಲ್ಲರನ್ನು ಪರೀಕ್ಷಿಸಿದಾಗ ನೆಗಟಿವ್ ವರದಿಯಾಗಿದೆ. ಆದರೆ ಅವರ ಮನೆಯಲ್ಲಿದ್ದ ಮಹಿಳೆಗೆ ಕೋವಿಡ್ ಪಾಜಿಟಿವ್ ದೃಡಪಟ್ಟಿದೆ. ಬ್ರಿಟನ್‌ನಿಂದ ಜಮಖಂಡಿಗೆ ಆಗಮಿಸಿದ ಮಹಿಳೆಯ ಕೋವಿಡ್ ವರದಿ ನೆಗಟಿವ್ ಬಂದಿದ್ದು, ಆದರೆ ಅವರ ಮನೆಯ ಓರ್ವ ಮಹಿಳೆಗೆ ಕೋವಿಡ್ ದೃಡಪಟ್ಟಿರುವುದಾಗಿ ತಿಳಿಸಿದರು. ಕೋವಿಡ್ ಲಸಿಕೆ ಸಂಗ್ರಹಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದರು.

ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ ಜಿಲ್ಲೆಯಲ್ಲಿ ಪ್ರವಾಹ ಮತ್ತು ಅತಿವೃಷ್ಟಿಯಿಂದ ಹಾನಿಗೊಳಗಾದ ಸಿ ಕೆಟಗರಿಯ ೪೩೬೭ ಮನೆಗಳಿಗೆ ತಲಾ ೫೦ ಸಾವಿರ ರೂ.ಗಳಂತೆ ಒಟ್ಟು ೨೧.೮೩ ಕೋಟಿ ರೂ.ಗಳನ್ನು ಪರಿಹಾರವನ್ನು ಪಾವತಿಸಲಾಗಿದೆ. ಕೈಮಗ್ಗ ಹಾನಿಗೊಳಗಾದ ೧೧೭ ಫಲಾನುಭವಿಗಳಿಗೆ ೭ ಲಕ್ಷ ರೂ.ಗಳ ಪರಿಹಾರ ಪಾವತಿಸಲಾಗಿದೆ. ಎ ಮತ್ತು ಬಿ ಮಾದರಿಯ ೯೬೦ ಮನೆಗಳನ್ನು ಆರ್‌ಜಿಎಚ್‌ಸಿಎಲ್ ನಿಗಮದಿಂದ ಪರಿಹಾರ ಪಾವತಿಗೆ ಕ್ರಮವಹಿಸಲಾಗುತ್ತಿದೆ. ಲೋಕೋಪಯೋಗಿ ಇಲಾಖೆಯಿಂದ ಹಾನಿಗೊಳಗಾದ ಕಾಮಗಾರಿ ದುರಸ್ಥಿಗೆ ೩೩ ಕೋಟಿ ಅನುದಾನ ಬಿಡುಗಡೆಯಾಗಿದ್ದು, ೩೨ ಕಾಗಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅದರಲ್ಲಿ ೨೨ ಪ್ರಗತಿಯಲ್ಲಿರುವುದಾಗಿ ತಿಳಿಸಿದರು.

ಬೆಳೆ ಹಾನಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ೫ ಹಂತದಲ್ಲಿ ಒಟ್ಟು ೬೧೭೫೭ ಫಲಾನುಭವಿಗಳಿಗೆ ೫೪.೬೧ ಕೋಟಿ ಇನ್‌ಪುಟ್ ಸಬ್ಸಿಡಿ ಜಮೆಯಾಗಿರುತ್ತದೆ. ಮೊದಲನೇ ಹಂತದಲ್ಲಿ ೭೩೭೩ ಫಲಾನುಭವಿಗಳಿಗೆ ೭.೨೮ ಕೋಟಿ, ೨ನೇ ಹಂತದ ೯೯೮೪ ಫಲಾನುಭವಿಗಳಿಗೆ ೧೧.೪೫ ಕೋಟಿ, ೩ನೇ ಹಂತದ ೨೩೨೭ ಫಲಾನುಭವಿಗಳಿಗೆ ೨.೨೪ ಕೋಟಿ, ೪ನೇ ಹಂತದ ೨೬೮೦೬ ಫಲಾನುಭವಿಗಳಿಗೆ ೨೩.೦೬ ಕೋಟಿ ಹಾಗೂ ೫ನೇ ಹಂತದ ೧೫೨೬೭ ಫಲಾನುಭವಿಗಳಿಗೆ ೧೦.೮೪ ಕೋಟಿ ರೂ.ಗಳ ಪರಿಹಾರ ಜಮಾ ಆಗಿರುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿ.ಪಂ ಸಿಇಓ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿ.ಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ, ಉಪವಿಭಾಗಾಧಿಕಾರಿಗಳಾದ ಎಂ.ಗಂಗಪ್ಪ, ಸಿದ್ದು ಹುಳ್ಳೊಳ್ಳಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ತಹಶೀಲ್ದಾರರು, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.

ಮತದಾರರ ಪಟ್ಟಿ ಪರೀಕ್ಷರಣೆ
ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ ವಿಲೇವಾರಿ ನಮೂನೆಗಳಾದ ೬, ೬ಎ, ಎ, ೮, ೮ಎ ಗಳ ಇ-ರೋಲ್‌ಗಳ ಬಗ್ಗೆ ಡಿಇಓ, ಇಆರ್‌ಓ, ಎಇಆರ್‌ಓ ಹಾಗೂ ಬಿಎಲ್‌ಓಗಳು ತಮಗೆ ನಿಗದಿತಪಡಿಸಿದ ಶೇಕಡಾವಾರು ಪರಿಶೀಲನೆ, ಜಿಲ್ಲೆಯಲ್ಲಿ ನವೆಂಬರ ೨೨, ೨೯, ಡಿಸೆಂಬರ ೬ ಮತ್ತು ೧೩ ರಂದು ನಡೆಸಿದ ಮಿಂಚಿನಿ ನೊಂದಣಿ ಕಾರ್ಯಕ್ರಮದಿಂದ ಒಟ್ಟು ೧೪೯೮೦ ಅರ್ಜಿಗಳು ಬಂದಿವೆ. ಈ ಕಾರ್ಯಕ್ರಮದಿಂದ ಬಾದಮಿ ತಾಲೂಕಿನಲ್ಲಿ ಹೆಚ್ಚಿನ ಅರ್ಜಿಗಳು ಬಂದಿರುತ್ತವೆ. ಆನ್‌ಲೈನ್‌ಗಳಲ್ಲಿ ಜಮಖಂಡಿ ತಾಲೂಕಿನಲ್ಲಿ ಹೆಚ್ಚಿಗೆ ಬಂದಿರುತ್ತವೆ. ಮತದಾನ ಪರಿಷ್ಕರಣೆಯಲ್ಲಿ ತಹಶೀಲ್ದಾರರು ಹೆಚ್ಚಿನ ಗಮನ ಹರಿಸಿ ಪರಿಶುದ್ದ ಮತದಾರರ ಪಟ್ಟಿಗೆ ಶ್ರಮಿಸಲು ಸೂಚಿಸಿದರು.
-ಶಿವಯೋಗಿ ಕಳಸದ, ಮತದಾರರ ಪಟ್ಟಿ ವೀಕ್ಷಕರು

Nimma Suddi
";