This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Politics News

ಗ್ರಾಮೀಣ ಮತದಾನ ಬಿರುಸು

ನಿಮ್ಮ ಸುದ್ದಿ ಬಾಗಲಕೋಟೆ

ಮತದಾನಕ್ಕೆ ಭಾರಿ ಉತ್ಸಾಹ, ಹಲವೆಡೆ ವಾಗ್ವಾದ, ಲಾಟಿ ಬೀಸಿದ ಪೊಲೀಸರು, ಏರಿದ ಅಮಲು, ಬೆಳಗ್ಗೆಯಿಂದಲೇ ಸರದಿಯಲ್ಲಿ ನಿಂತ ಮತದಾರ, ಕೋವಿಡ್ ನಿಯಮ ಪಾಲನೆ, ಮತಬಿಕ್ಷೆಗೆ ಪರದಾಟ, ಅಧಿಕಾರಿಗಳ ಕಣ್ಗಾವಲು….

ಇವೆಲ್ಲ ೨ನೇ ಹಂತದಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಗೆ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಮತದಾನದಂದು ಕಂಡು ಬಂದ ದೃಶ್ಯಗಳು.

ಹುನಗುಂದ, ಬಾಗಲಕೋಟೆ, ಬಾದಾಮಿ, ಗುಳೇದಗುಡ್ಡ, ಇಳಕಲ್ ತಾಲೂಕಿನ ಹಲವು ಗ್ರಾಮಗಳಲ್ಲಿ ಬೆಳಗ್ಗೆ ೭ರಿಂದಲೇ ಮತದಾನಕ್ಕೆ ಜನತೆ ಉತ್ಸುಕರಾಗಿ ಆಗಮಿಸಿದ್ದರು. ಮಧ್ಯಾಹ್ನ ಕೊಂಚ ಕಡಿಮೆ ಮತದಾನವಾದರೂ ಸಂಜೆ ವೇಳೆಯೂ ಬಿರುಸಿನಿಂದ ಮತ ಚಲಾವಣೆ ನಡೆಯಿತು.

ಮತಕೇಂದ್ರದಲ್ಲಿ ವಾಗ್ವಾದ
ಹುನಗುಂದ ತಾಲೂಕಿನ ಸೂಳೆಭಾವಿಯ ಮತದಾನ ಕೇಂದ್ರದಲ್ಲಿ ಮತದಾರರ ಓಲೈಕೆಗೆ ಸಂಬಂಸಿದAತೆ ಇಬ್ಬರು ಅಭ್ಯರ್ಥಿಗಳ ಮಧ್ಯೆ ವಾಗ್ವಾದ ಆರಂಭವಾಗಿ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಸ್ಥಳಕ್ಕೆ ಆಗಮಿಸಿದ ಎಸ್‌ಐ ಎಂ.ಜಿ.ಕುಲಕರ್ಣಿ ಪರಿಸ್ಥಿತಿ ತಿಳಿಗೊಳಿಸಿದರು. ವಿನಾಕಾರಣ ಕೇಂದ್ರದಲ್ಲಿರುವವರನ್ನು ಹೊರಹಾಕಲಾಯಿತು.

ಏರಿದ ಅಮಲು
ಕೆಲೂರ ಗ್ರಾಮದ ಮತಗಟ್ಟೆ ಸಂಖ್ಯೆ ೭೬ರಲ್ಲಿ ಅಮಲೇರಿಸಿಕೊಂಡ ಬಂದ ವ್ಯಕ್ತಿಯೊಬ್ಬರು ಮತಪತ್ರದಲ್ಲೇ ತಮ್ಮ ಹೆಬ್ಬೆಟ್ಟು ಒತ್ತಿ ಗೊಂದಲ ಮೂಡಿಸಿದ್ದರು. ನಂತರ ಅವರನ್ನು ಕರೆಸಿ ಮತ ಚಲಾವಣೆಗೆ ಅವಕಾಶ ಮಾಡಿಕೊಡಲಾಯಿತು.

ಗುಡೂರಲ್ಲಿ ಗೊಂದಲ
ಗ್ರಾಮದ ಮತಗಟ್ಟೆ ೯೮ರಲ್ಲಿ ಮತಕ್ಕಾಗಿ ರ್ಸ್ಪಸಿದ ಅಭ್ಯರ್ಥಿಗಳೆಲ್ಲರೂ ಗೇಟ್ ಬಳಿಯೇ ನಿಂತು ಮತ ಯಾಚಿಸುತ್ತಿದ್ದರಿಂದ ಬಹುತೇಕ ಪ್ರದೇಶ ಗೊಂದಲದ ಗೂಡಾಗಿತ್ತು. ಪದೇ ಪದೇ ಪೊಲೀಸರು ಹೇಳಿದರೂ ಕೇಳದ ಸ್ಥಿತಿಯಲ್ಲಿದ್ದಂತೆ ಕಂಡು ಬಂದಿತು. ಇಳಕಲ್ ತಾಪಂ ಅಧ್ಯಕ್ಷೆ ಶಾರದಾ ಗೋಡಿ ತಮ್ಮ ಸೊಸೆ ಪರವಾಗಿ ಮತ ಯಾಚಿಸಿದರು.

ಸೂಳೇಬಾವಿಯಲ್ಲಿ ಶೇ.೭೮ ಮತದಾನ
ಸೂಳೇಬಾವಿಯಲ್ಲಿ ಒಟ್ಟು ಶೇ.೭೮ರಷ್ಟು ಮತದಾನವಾಗಿದೆ. ೪,೦೭೦ ಪುರುಷರು ಹಾಗೂ ೪,೧೧೫ ಮಹಿಳಾ ಮತದಾರರು ಸೇರಿ ಒಟ್ಟು ೮,೧೮೫ ಮತದಾರರನ್ನು ಹೊಂದಿದ ಈ ಗ್ರಾಮದಲ್ಲಿ ೩,೨೫೩ ಪುರುಷರು, ೩,೦೯೧ ಮಹಿಳೆಯರು ಮತದಾನ ಮಾಡಿದರು. ಶೇ.೮೦ರಷ್ಟು ಪುರುಷರು, ಶೇ.೭೫ರಷ್ಟು ಮಹಿಳೆಯರು ಮತದಾನ ಮಾಡಿದ್ದಾರೆಂದು ಚುನಾವಣಾಕಾರಿ ರಾಘು ಪುರೋಹಿತ ತಿಳಿಸಿದರು.

ಭೇಟಿ ನೀಡಿದ ಅಧಿಕಾರಿಗಳು
ಅತ್ಯಂತ, ಅಷ್ಟೆ ಬಿರುಸಿನಿಂದ ನಡೆದ ಸೂಳೇಭಾವಿ ಗ್ರಾಮಕ್ಕೆ ಅಕಾರಿಗಳ ತಂಡವೇ ಭೇಟಿ ನೀಡಿತ್ತು. ಜಿಲ್ಲಾ ಚುನಾವಣಾ ವೀಕ್ಷಕ ಶಶಿಧರ ಕುರೇರ, ಚುನಾವಣೆ ನೋಡಲ್ ಶ್ರೀಶೈಲ ಕಂಕನವಾಡಿ, ತಹಸೀಲ್ದಾರ್ ಪಿ.ಕೆ.ದೇಶಪಾಂಡೆ, ಆರ್‌ಒ ರಾಘು ಪುರೋಹಿತ, ಜಿಪಂ ಸಿಇಒ ಟಿ.ಬೂಬಾಲನ್, ಎಸ್‌ಪಿ ಲೋಕೇಶ ಜಗಲಾಸರ್ ಸೇರಿದಂತೆ ಹಲವು ಅಕಾರಿಗಳು ಭೇಟಿ ನೀಡಿದ್ದರು.

 

Nimma Suddi
";