This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Politics News

ಆತ್ಮನಿರ್ಭರ ಭಾರತ ಸಾಧನೆಗೆ ಸ್ವದೇಶಿ ಉತ್ಪನ್ನಗಳನ್ನೇ ಬಳಸಿ

ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಸಲಹೆ

ನಿಮ್ಮ ಸುದ್ದಿ ಬೆಂಗಳೂರು

ಭಾರತವು ಆತ್ಮನಿರ್ಭರ ದೇಶವಾಗಿ ಹೊರಹೊಮ್ಮಲು ದೇಶದೊಳಗಿನ ಉತ್ಪನ್ನಗಳನ್ನೇ ಬಳಸುವ ಸಂಕಲ್ಪ ನಮ್ಮದಾಗಬೇಕು ಎಂದು ಕೇಂದ್ರ ಗೃಹ ಸಚಿವರು ಮತ್ತು ಭಾರತೀಯ ಜನತಾ ಪಕ್ಷದ ಹಿಂದಿನ ರಾಷ್ಟ್ರೀಯ ಅಧ್ಯಕ್ಷರೂ ಆದ ಶ್ರೀ ಅಮಿತ್ ಶಾ ಅವರು ತಿಳಿಸಿದರು.

ಬೆಳಗಾವಿಯಲ್ಲಿ ಭಾನುವಾರ ನಡೆದ “ಜನಸೇವಕ ಸಮಾವೇಶ”ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿ, ಪಕ್ಷದ ಚಿಹ್ನೆಯಾದ ಕಮಲ ಮತ್ತು ಬಿಜೆಪಿಗೆ ಇಲ್ಲಿನ ಜನರ ಋಣ ತೀರಿಸಲು ಅಸಾಧ್ಯ ಎಂದ ಅವರು, 370ನೇ ವಿಧಿ ರದ್ದತಿ ಮಾಡುವ ಮಹತ್ವದ ನಿರ್ಧಾರವನ್ನು ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರ ಸರಕಾರ ಮಾಡಿದೆ.

ಕಾಶ್ಮೀರ ಈಗ ಭಾರತದ ಅವಿಭಾಜ್ಯ ಅಂಗವಾಗಿದೆ. ಕಾಂಗ್ರೆಸ್ ಮತ್ತಿತರ ಪಕ್ಷಗಳ ವಿರೋಧದ ನಡುವೆಯೂ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸವೂ ನಡೆದಿದೆ. ಶೀಘ್ರವೇ ಬೃಹತ್ ರಾಮ ಮಂದಿರ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿದೆ. ತ್ರಿವಳಿ ತಲಾಖ್ ರದ್ದತಿಯ ಪ್ರಮುಖ ನಿರ್ಧಾರವನ್ನೂ ತೆಗೆದುಕೊಳ್ಳಲಾಗಿದೆ ಎಂದರು.

ಕಾಂಗ್ರೆಸ್ ಆಡಳಿತದಲ್ಲಿ ಪಾಕಿಸ್ತಾನದ ಯೋಧರಿಂದ ನಮ್ಮ ಯೋಧರ ಶಿರಚ್ಛೇದ ಹಾಗೂ ದೇಶದೊಳಗೆ ಭ್ರಷ್ಟಾಚಾರ ನಿರಂತರವಾಗಿ ನಡೆಯುತ್ತಿತ್ತು. ಅಭಿವೃದ್ಧಿ ಶೂನ್ಯ ಸ್ಥಿತಿ ದೇಶದ್ದಾಗಿತ್ತು. ದೇಶದ ಸರಹದ್ದಿನೊಳಗೆ ನುಸುಳುವ ಅವಕಾಶ ಈಗ ಇಲ್ಲ. 60 ಕೋಟಿ ಬಡವರಿಗೆ ಬ್ಯಾಂಕ್ ಖಾತೆ ತೆರೆಯಲು ಅವಕಾಶ ಕೊಡಲಾಗಿದೆ. ಬಡವರ ಮನೆಗಳಿಗೂ ಸಿಲಿಂಡರ್ ಸಂಪರ್ಕ ಎಂಬ ಕನಸನ್ನೂ ನನಸು ಮಾಡಲಾಗಿದೆ. ವಿದ್ಯುತ್ ಇಲ್ಲದ ಎಲ್ಲಾ ಗ್ರಾಮಗಳಿಗೂ ವಿದ್ಯುತ್ ಸಂಪರ್ಕ ನೀಡಲಾಗಿದೆ. ಬಡಜನರಿಗಾಗಿ 5 ಲಕ್ಷ ರೂಪಾಯಿ ಆರೋಗ್ಯ ವಿಮೆಯನ್ನೂ ಜಾರಿಗೊಳಿಸಲಾಗಿದೆ ಎಂದರು.

ಕಾಂಗ್ರೆಸ್ಸಿಗರು ಬಡವರ ಮನೆಗಳಿಗೆ ಗ್ಯಾಸ್, ವಿದ್ಯುತ್ ಸಂಪರ್ಕ, ಆಯುಷ್ಮಾನ್ ಯೋಜನೆ ಯಾಕೆ ಜಾರಿಗೊಳಿಸಿಲ್ಲ ಎಂದು ಕೇಳಿದ ಅವರು ಶ್ರೀ ಮೋದಿ ಅವರ ಸರಕಾರ ಬಡವರ ಜೀವನ ಮಟ್ಟ ಸುಧಾರಿಸಿದೆ ಎಂದು ವಿವರಿಸಿದರು.

ಆರೂವರೆ ವರ್ಷಗಳಲ್ಲಿ ದೇಶ ಅಭಿವೃದ್ಧಿಶೀಲ ರಾಷ್ಟ್ರವಾಗಿ ಹೊರಹೊಮ್ಮಿದೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲೂ ಶ್ರೀ ಮೋದಿ ಅವರ ನೇತೃತ್ವದಲ್ಲಿ ಅತ್ಯಂತ ಕಡಿಮೆ ಜನರಷ್ಟೇ ತೊಂದರೆಗೆ ಸಿಲುಕಿ, ದೇಶವು ಸಮಸ್ಯೆಯಿಂದ ಹೊರಬಂದಿದೆ ಎಂದರು.

ದೇಶ ಸುರಕ್ಷಿತವಾಗಿದೆ. ಕೊರೋನಾಮುಕ್ತರಾಗಲು ನಾವೆಲ್ಲರೂ ಲಸಿಕೆ ಪಡೆಯಬೇಕು ಎಂದ ಅವರು, ಕೊರೋನಾ ಕಾಲಘಟ್ಟದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೈಗೊಂಡ ಪರಿಹಾರ ಕ್ರಮಗಳನ್ನು ಶ್ಲಾಘಿಸಿದರು. ಬಡವರು, ತೊಂದರೆಗೆ ಸಿಲುಕಿದ ವರ್ಗದವರಿಗೆ ಹಣಕಾಸು- ಆಹಾರಧಾನ್ಯದ ನೆರವನ್ನು ನೀಡಿದ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರಗಳಿಗೆ ಮನದಾಳದ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಕಲಬುರ್ಗಿ, ಬೀದರ್ ವಿಮಾನನಿಲ್ದಾಣ ಆರಂಭ, ಕೊಪ್ಪಳದಲ್ಲಿ ಆಟಿಕೆ ನಿರ್ಮಾಣದ ಕಾರ್ಖಾನೆ ಸ್ಥಾಪನೆಯಲ್ಲಿ ಪಕ್ಷದ ಪಾತ್ರ ಮಹತ್ವದ್ದು ಎಂದ ಅವರು, ಸೋನಿಯಾ ಮತ್ತು ಮನಮೋಹನ್ ಸಿಂಗ್ ಅವರ ಸರಕಾರವು ಕರ್ನಾಟಕಕ್ಕೆ ಏನು ಕೊಡುಗೆ ನೀಡಿದೆ ಎಂಬ ಪಟ್ಟಿ ಮಾಡಿಕೊಡಿ ಎಂದು ಅವರು ಸವಾಲೆಸೆದರು

ಶ್ರೀ ಮೋದಿ ಮತ್ತು ಶ್ರೀ ಯಡಿಯೂರಪ್ಪ ಅವರ ನೇತೃತ್ವದ ಸರಕಾರ ಮಾತ್ರವೇ ರಾಜ್ಯವನ್ನು ವಿಕಾಸದೆಡೆಗೆ ಒಯ್ಯಬಲ್ಲದು ಎಂದು ವಿಶ್ವಾಸದಿಂದ ನುಡಿದರು. ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲೂ ಅಭೂತಪೂರ್ವ ಗೆಲುವನ್ನು ಬಿಜೆಪಿಗೆ ನೀಡಬೇಕು ಎಂದು ಮನವಿ ಮಾಡಿದರು.

ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರಾದ ಬೆಳವಡಿ ಮಲ್ಲಮ್ಮ ಅವರನ್ನು ಸ್ಮರಿಸಿದ ಅವರು, ರಾಣಿ ಚೆನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ತ್ಯಾಗ- ಬಲಿದಾನವನ್ನು ನೆನಪಿಸಿದರು. ನಗುಮುಖ, ಪಕ್ಷಕ್ಕಾಗಿ ಸಮರ್ಪಣಾ ಮನೋಭಾವದ ದುಡಿಮೆಯ ದಿವಂಗತ ಸುರೇಶ್ ಅಂಗಡಿಯವರನ್ನು ಸ್ಮರಿಸಿದರು. ಈಚೆಗೆ ನಿಧನರಾದ ಮುಖಂಡರು, ಕಾರ್ಯಕರ್ತರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಸಂಗೀತ ಕ್ಷೇತ್ರಕ್ಕೆ ಕೊಡುಗೆ ನೀಡಿದ ಗಾಯಕರನ್ನೂ ನೆನೆನಪಿಸಿದರು.

ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ರಾಜ್ಯದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ನೆಲಸಮವಾಗಿವೆ. ಬಿಜೆಪಿ ಬೆಂಬಲಿತರು ದೊಡ್ಡಪ್ರಮಾಣದ ಗೆಲುವು ಸಾಧಿಸಿದ್ದಾರೆ. ಇದಕ್ಕಾಗಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್‍ಕುಮಾರ್ ಕಟೀಲ್ ಅವರನ್ನು ಅಭಿನಂದಿಸುವುದಾಗಿ ಹೇಳಿದರು.

ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲೂ ದೊಡ್ಡ ಸಂಖ್ಯೆಯ ನಮ್ಮ ಅಭ್ಯರ್ಥಿಗಳು ಗೆಲ್ಲುವಂತೆ ಶ್ರಮ ವಹಿಸಬೇಕು ಎಂದು ಮನವಿ ಮಾಡಿದರು.
ಹಿಂದೆ ಹಣ, ಹೆಂಡ, ತೋಳ್ಬಲ, ಅಧಿಕಾರದ ಬಲದಿಂದ ಕಾಂಗ್ರೆಸ್ ಗೆಲ್ಲುತ್ತಿತ್ತು. ಆ ಪ್ರಯತ್ನ ಕೈಗೂಡುತ್ತಿಲ್ಲ. 25 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ನಮ್ಮದಾಗಿ ದಾಖಲೆ ಮಾಡಿದ್ದೇವೆ. ಮುಂದೆ 150 ಶಾಸಕರನ್ನು ಗೆಲ್ಲಿಸಿ ಸ್ವಂತ ಬಲದಿಂದ ಅಧಿಕಾರ ಪಡೆಯಲು ನೆರವಾಗಬೇಕು ಎಂದು ತಿಳಿಸಿದರು. ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಇತರ ಚುನಾವಣೆಗಳಲ್ಲಿ ನಿರಂತರ ಗೆಲುವು ನಮ್ಮದಾಗಬೇಕು ಎಂದು ಹೇಳಿದರು.

ಪಕ್ಷದ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ಶ್ರೀ ನಳಿನ್‍ಕುಮಾರ್ ಕಟೀಲ್ ಅವರು ಮಾತನಾಡಿ, ಕಾಶ್ಮೀರದ ಜನತೆಗೆ ಸ್ವಾತಂತ್ರ್ಯ, ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ನುಡಿದಂತೆ ನಡೆದವರು ಶ್ರೀ ಅಮಿತ್ ಶಾ ಎಂದು ಮೆಚ್ಚುಗೆ ಸೂಚಿಸಿದ ಅವರು, ಗ್ರಾಮ ಪಂಚಾಯತ್‍ಗಳಲ್ಲಿ ಬಿಜೆಪಿ ಬೆಂಬಲಿತರು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಇದಕ್ಕೆ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಮತ್ತು ಶ್ರೀ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರಕಾರಗಳ ಸಾಧನೆಯೇ ಕಾರಣ. ಹಳ್ಳಿಹಳ್ಳಿಯಲ್ಲೂ ಕಾಂಗ್ರೆಸ್ ಮುಕ್ತ ವಾತಾವರಣ ನಿರ್ಮಾಣವಾಗಿದೆ ಎಂದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150 ಶಾಸಕರನ್ನು ನಾವು ಗೆಲ್ಲಿಸಬೇಕು. ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್‍ಗಳಲ್ಲೂ ಅದ್ವಿತೀಯ ಗೆಲುವು ನಮ್ಮದಾಗಲಿ ಎಂದು ಆಶಿಸಿದರು.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಿ.ಟಿ.ರವಿ ಅವರು ಮಾತನಾಡಿ, ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ದೇವೇಗೌಡರು ಪ್ರಧಾನಿ ಆಗಿದ್ದಾಗ ಕಿಸಾನ್ ಸಮ್ಮಾನ್ ಯೋಜನೆ ಇತ್ತಾ? ಇದನ್ನು ಕೊಟ್ಟ, ರೈತರಿಗೆ ನಿರಂತರ ನೆರವಿಗಾಗಿ ಹತ್ತಾರು ಯೋಜನೆಗಳನ್ನು ನೀಡಿದ ಬಿಜೆಪಿಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರು ರೈತ ವಿರೋಧಿ ಆಗಲು ಸಾಧ್ಯವೇ ಎಂದು ಪ್ರಶ್ನಿಸಿದರು. ರೈತರ ಆದಾಯ ದುಪ್ಪಟ್ಟಿಗಾಗಿ ಪ್ರಯತ್ನಿಸುತ್ತಿರುವ ಬಿಜೆಪಿ ಸರಕಾರ ರೈತವಿರೋಧಿüಯೇ ಎಂದು ಕೇಳಿದರು.
ಪ್ರಧಾನಿಗಳು ತಮ್ಮನ್ನು ಪ್ರಧಾನ ಸೇವಕರಾಗಿ ಗುರುತಿಸಿಕೊಂಡಿದ್ದು, ಗ್ರಾಮ ಪಂಚಾಯತ್‍ನಲ್ಲಿ ಗೆದ್ದು ಬಂದ ನಾವು ಜನಸೇವಕರಾಗುವುದು ತಪ್ಪಲ್ಲ ಎಂದರು. ರೈತರ ಆತ್ಮಹತ್ಯೆಗೆ ಹಿಂದಿನ ಕಾಂಗ್ರೆಸ್ ಸರಕಾರದ ತಪ್ಪು ನೀತಿಗಳೇ ಕಾರಣ ಎಂದು ಅವರು ಆರೋಪಿಸಿದರು.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯದ ಉಸ್ತುವಾರಿಗಳೂ ಆದ ಶ್ರೀ ಅರುಣ್ ಸಿಂಗ್, ಸಹ ಪ್ರಭಾರಿಗಳಾದ ಡಿ.ಕೆ.ಅರುಣಾ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅರುಣ್‍ಕುಮಾರ್, ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ, ಸಂಸದರಾದ ಶ್ರೀ ಅಣ್ಣಾಸಾಹೇಬ್ ಜೊಲ್ಲೆ, ಶ್ರೀ ಸಂಜಯ್‍ಕಾಕಾ ಪಾಟೀಲ್, ಶ್ರೀ ಈರಣ್ಣ ಕಡಾಡಿ, ಉಪ ಮುಖ್ಯಮಂತ್ರಿಗಳಾದ ಶ್ರೀ ಗೋವಿಂದ ಕಾರಜೋಳ, ಶ್ರೀ ಲಕ್ಷ್ಮಣ ಸವದಿ, ರಾಜ್ಯ ಸಚಿವರಾದ ಶ್ರೀ ಜಗದೀಶ ಶೆಟ್ಟರ್, ಶ್ರೀ ಬಸವರಾಜ ಬೊಮ್ಮಾಯಿ, ಶ್ರೀ ರಮೇಶ್ ಜಾರಕಿಹೊಳಿ, ಶ್ರೀಮತಿ ಶಶಿಕಲಾ ಜೊಲ್ಲೆ, ಶ್ರೀ ಶ್ರೀಮಂತ್ ಪಾಟೀಲ್, ಶ್ರೀ ಬಿ.ಶ್ರೀರಾಮುಲು, ಶ್ರೀ ವಿ.ಸೋಮಣ್ಣ, ಶ್ರೀ ಪ್ರಭು ಚವ್ಹಾಣ್, ಶ್ರೀ ಉಮೇಶ್ ಕತ್ತಿ, ಶ್ರೀ ಸಿ.ಸಿ.ಪಾಟೀಲ್, ಶ್ರೀ ಬಿ.ಸಿ.ಪಾಟೀಲ್, ಶ್ರೀ ಸಿ.ಪಿ.ಯೋಗೇಶ್ವರ್, ರಾಜ್ಯ ಉಪಾಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎನ್.ರವಿಕುಮಾರ್, ಶ್ರೀ ಮಹೇಶ್ ಟೆಂಗಿನಕಾಯಿ, ಕಾರ್ಯದರ್ಶಿಗಳಾದ ಶ್ರೀ ತುಳಸಿ ಮುನಿರಾಜು ಗೌಡ, ಎಸ್‍ಟಿ ಮೋರ್ಚಾ ರಾಜ್ಯ ಅಧ್ಯಕ್ಷರಾದ ಶ್ರೀ ತಿಪ್ಪರಾಜು ಹವಾಲ್ದಾರ್, ವಿಭಾಗೀಯ ಪ್ರಭಾರಿ ಶ್ರೀ ಚಂದ್ರಶೇಖರ್ ಕವಟಗಿ, ಸಹ ಪ್ರಭಾರಿ ಶ್ರೀ ಬಸವರಾಜ ಯಂಕಂಚಿ, ಜಿಲ್ಲಾಧ್ಯಕ್ಷರಾದ ಶ್ರೀ ಸಂಜಯ್ ಪಾಟೀಲ್, ಶ್ರೀ ಶಶಿಕಾಂತ್ ಪಾಟೀಲ್, ವಿಭಾಗ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಕಾಶ್ ಅಕ್ಕಲಕೋಟೆ, ಚಿಕ್ಕೋಡಿ ಜಿಲ್ಲಾಧ್ಯಕ್ಷರಾದ ಶ್ರೀ ರಾಜೇಶ್ ನೇರ್ಲಿ, ಶಾಸಕರಾದ ಶ್ರೀ ರಾಜೀವ್ ಕುಡಚಿ, ಶ್ರೀ ಮಹೇಶ್ ಕುಮಟಳ್ಳಿ, ಶ್ರೀ ಧುರ್ಯೋಧನ್ ಐಹೊಳೆ, ಶ್ರೀ ಅಭಯ್ ಪಾಟೀಲ್, ಶ್ರೀ ಅನಿಲ್ ಬೆನಕೆ, ಶ್ರೀ ಆನಂದ್ ಮಾಮನಿ, ಶ್ರೀ ಬಾಲಚಂದ್ರ ಜಾರಕಿಹೊಳಿ, ಶ್ರೀ ಮಹದೇವಪ್ಪ ಯಾದವಾಡ್, ಶ್ರೀ ಮಹಂತೇಶ್ ದೊಡ್ಡಗೌಡರ್, ಶ್ರೀ ಮಹಂತೇಶ್ ಕವಟಗಿಮಠ್, ವಿಶೇಷ ಆಹ್ವಾನಿತರಾದ ಶ್ರೀ ಪ್ರಭಾಕರ ಕೋರೆ, ರಾಜ್ಯ ಕಾರ್ಯದರ್ಶಿಗಳಾದ ಭಾರತಿ ಮುಗ್ದುಂ, ಶ್ರೀಮತಿ ಉಜ್ವಲಾ ಬಡವಣ್ಣಾಚೆ, ಪದಾಧಿಕಾರಿ ಶ್ರೀ ಶಂಕರಗೌಡ ಪಾಟೀಲ್ ಭಾಗವಹಿಸಿದ್ದರು.

";