This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Politics News

ಬಾಕಿ ಉಳಿದ ಶಾಸಕರ ಅನುದಾನ ಬಳಕೆಗೆ ಕ್ರಮ:ನಾರಾಯಣಗೌಡ

ನಿಮ್ಮ ಸುದ್ದಿ ಬಾಗಲಕೋಟೆ

ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಕಳೆದ 2013-14 ರಿಂದ ಇಲ್ಲಿಯವರೆಗೆ ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 22 ಕೋಟಿ ರೂ.ಗಳ ಅನುದಾನ ಖರ್ಚಾಗದೇ ಉಳಿದಿದ್ದು, ಸಂಪೂರ್ಣ ವಿನಿಯೋಗಕ್ಕೆ ಕ್ರಮಕೈಗೊಳ್ಳುವಂತೆ ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಸಾಂಖ್ಯಿಕ ಸಚಿವರಾದ ಡಾ.ನಾರಾಯಣಗೌಡ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಶಾಸಕರ ಕ್ಷೇಮಾಭಿವೃದ್ದಿ ಅನುದಾನ ಬಳಕೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶಾಸಕರ ಅನುದಾನದಲ್ಲಿ ಕೈಗೊಂಡ ಕಾಮಗಾರಿಗಳು ತ್ವರಿತಗತಿಯಲ್ಲಿ ಆಗುತ್ತಿಲ್ಲ. ಕೆ.ಆರ್.ಐ.ಡಿ.ಎಲ್ ಒಂದು ಸರಕಾರಿ ಏಜೇನ್ಸಿಯಾಗಿದ್ದು, ಇವರಿಗೆ ನೀಡಿರುವ ಕಾಮಗಾರಿಗಳು ಸರಿಯಾಗಿ ಆಗುತ್ತಿಲ್ಲ. ಇದರಿಂದ ಅಭಿವೃದ್ದಿಯಲ್ಲಿ ಕುಂಟಿತಗೊಳ್ಳುತ್ತಿದೆ ಎಂದು ತಿಳಿಸಿದರು.

ಈಗಾಗಲೇ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ನೀಡಲಾದ ಅನುದಾನ ಖರ್ಚಾಗದೇ ಉಳಿದರೆ ಮುಂದಿನ ಯೋಜನೆಗಳಿಗೆ ಅನುದಾನ ತರಲು ಸಾದ್ಯವಾಗುವದಿಲ್ಲ. ಆದ್ದರಿಂದ ಬಾಕಿ ಉಳಿದ ಅನುದಾನದಲ್ಲಿ ಹಾಕಿಕೊಂಡ ಕ್ರೀಯಾ ಯೋಜನೆಗಳಿಗೆ ಅನುಮತಿ ನೀಡದಿದ್ದಲ್ಲಿ ಬೇರೆ ಯೋಜನೆಗಳಿಗೆ ಬಳಿಕೊಂಡು ಜಿಲ್ಲೆಯಲ್ಲಿ ಬಾಕಿ ಉಳಿದ ಹಣವನ್ನು ಸಂಪೂರ್ಣವಾಗಿ ಖರ್ಚು ಮಾಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ ಸಿಇಓ ಅವರಿಗೆ ಕ್ರಮವಹಿಸಲು ತಿಳಿಸಿದರು.

ಸರಕಾರಿ ಏಜೇನ್ಸಿಯಾದ ಕೆ.ಆರ್.ಐ.ಡಿ.ಎಗೆ ನೀಡುದ ಬಹುತೇಕ ಕಾಮಗಾರಿಗಳು ಬಾಕಿ ಉಳಿಸಿಕೊಂಡಿವೆ. ಅವರ ಮೇಲೆ ಕ್ರಮಕ್ಕಾಗಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದೆಂದು ತಿಳಿಸಿದರು. ಇನ್ನು ಮುಂದೆ ಪ್ರತಿಯೊಂದು ಕಾಮಗಾರಿಗಳನ್ನು ಪಿಡಬ್ಲೂಡಿಗೆ ನೀಡುವಂತೆ ಸಚಿವರು ತಿಳಿಸಿದರು. ಉಳಿದ ಅನುದಾನ ಅಂಗನವಾಡಿ ಹಾಗೂ ಶಾಲಾ ಅಭಿವೃದ್ದಿಗೆ ಬಳಸಿಕೊಳ್ಳಲು ತಿಳಿಸಿದರು.

ರಾಜ್ಯ ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಸಿದ್ದು ಸವದಿ ಮಾತನಾಡಿ ಸರಕಾರಿ ಏಜೆನ್ಸಿಯವರು ವಿನಾಕಾರಣ ಹೆಚ್ಚಿನ ಪ್ರಮಾಣದಲ್ಲಿ ಜಿ.ಎಸ್.ಟಿ ಕಡಿತಗೊಳಿಸುತ್ತಿದ್ದಾರೆ. ಅಂತವರ ಮೇಲೆ ಕ್ರಮವಾಗಬೇಕು ಎಂದು ತಿಳಿಸಿದರೆ, ಇನ್ನು ಕೆಲವೊಂದು ತಾಲೂಕುಗಳಲ್ಲಿ ಕ್ರೀಡಾಂಗಣಗಳು ಆಗಿರುವದಿಲ್ಲ. ಅವುಗಳ ಕಾರ್ಯಗತಗೊಳಿಸಲು ಸಚಿವರಲ್ಲಿ ಕೇಳೊಕೊಂಡರು. ಸಂಸದ ಪಿ.ಸಿ.ಗದ್ದಿಗೌಡರ ಬಾದಾಮಿ ತಾಲೂಕಿನಲ್ಲಿ ಕ್ರೀಡಾಂಗಣದ ಕೊರತೆ ಇದ್ದು, ಬೇಗೆ ಅನುಷ್ಠಾನಕ್ಕೆ ಕ್ರಮವಹಿಸಲು ಅಧಿಕಾರಿಗಳಿಗೆ ತಿಳಿಸಿದರು.

ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ ಬಾಕಿ ಉಳಿದ ಶಾಸಕರ ಅನುದಾನವನ್ನು ಗಾಂಧಿ ಸಾಕ್ಷಿ ತಂತ್ರಾಂಶದಲ್ಲಿ ಎಂಟಿ ಮಾಡಲು ತಡವಾಗಿದ್ದು, ಬಾಕಿ ಉಳಿದ ಅನುದಾನ ಖರ್ಚಿಗೆ ಕ್ರಮವಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕಳೆದ 2013-14 ರಿಂದ 2020-21 ವರೆಗೆ ಪಿಆರ್.ಇಡಿ, ಕೆ.ಆರ್.ಐಡಿಎಲ್, ನಿರ್ಮಿತಿ ಕೇಂದ್ರ, ಪಿಡಬ್ಲೂಡಿ ಸೇರಿದಂತೆ ಬಾಗಲಕೋಟೆ ಉಪ ವಿಭಾಗದಲ್ಲಿ ಒಟ್ಟು 277 ಕಾಮಗಾರಿಗಳನ್ನು ಕೈಗೊಂಡಿದ್ದು, 190 ಪ್ರಗತಿಯಲ್ಲಿದ್ದು, 87 ಮಾತ್ರ ಬಾಕಿ ಉಳಿದಿವೆ. ಜಮಖಂಡಿ ಉಪವಿಭಾಗದಲ್ಲಿ ಒಟ್ಟು 461 ಕಾಮಗಾರಿಗಳ ಪೈಕಿ 355 ಪ್ರತಿಯಲ್ಲಿದ್ದು, 106 ಬಾಕಿ ಉಳಿದಿದ್ದು, ಕಾಮಗಾರಿ ಪೂರ್ಣಗೊಳಿಸಲು ಕ್ರಮವಹಿಸಲಾಗುತ್ತಿದೆ ಎಂದು ತಿಳಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎ.ವಾಯ್.ಕುಂದರಗಿ ಮಾತನಾಡಿ ಪ್ರಸಕ್ತ ಸಾಲಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅನುದಾನಡಿ ಜಿಲ್ಲಾ ಕ್ರೀಡಾಂಗಣದ ಈಜುಕೊಳದ ಆಧುನೀಕರಣ, ಆಫೀಸರ್ಸ್ ಕ್ಲಬ್ ನವೀಕರಣ, ಜಿಲ್ಲಾ ಕ್ರೀಡಾ ವಸತಿ ನಿಲಯ ದುರಸ್ತಿ, ಒಳಾಂಗಣ ಕ್ರೀಡಾಂಗಣ ಕುಸ್ತಿಹಾಲ್ ಸಿಟ್ಟಿಂಗ್ ಬೆಂಚ್ ಅಳವಡಿಸುವ ಕಾಮಗಾರಿ, ಶೌಚಾಲಯಗಳಿಗೆ ಟ್ರಸ್ಟ್ ಹಾಗೂ ಶೀಟ್ ಅಳವಡಿಕೆ ಸೇರಿದಂತೆ ಒಟ್ಟು 236.74 ಕೋಟಿ ರೂ.ಗಳ ಕಾಮಗಾರಿ ಕೈಗೊಂಡಿದ್ದು, ಅವುಗಳು ಪ್ರಗತಿಯಲ್ಲಿವೆ. ಜಿಲ್ಲಾ ಪಂಚಾಯತ ವಲಯ ಕ್ರೀಡಾಂಗಣ ನಿರ್ವಹಣೆ, ಕಾಮಗಾರಿಗಳಡಿ ಜಿಲ್ಲಾ ಕ್ರೀಡಾಂಗಣದಲ್ಲಿ ಪೆವಿಲಿಯನ್ ಬ್ಲಾಕ್ ದುರಸ್ತಿ, ವೀಕ್ಷಕರಣ ಗ್ಯಾಲರಿ ಸುಣ್ಣ-ಬಣ್ಣ, ವೀಕ್ಷಕರಣ ಗ್ಯಾಲರಿ ನಿಮಾಣಕ್ಕೆ 47 ಲಕ್ಷ ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕರಾದ ವೀರಣ್ಣ ಚರಂತಿಮಠ, ದೊಡ್ಡನಗೌಡ ಪಾಟೀಲ, ಜಿ.ಪಂ ಸಿಇಓ ಟಿ.ಭೂಬಾಲನ, ಪ್ರೊಬೇಷನರಿ ಐ.ಎ.ಎಸ್ ಅಧಿಕಾರಿ ಯಶವಂತ ಗುರುಕಾರ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಸಿದ್ದು ಹುಳ್ಳೊಳ್ಳಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Nimma Suddi
";