This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Politics News

೨ನೇ ಅವಧಿಯ ೨ ವರ್ಷ ಜನರಲ್ಲಿ ಹರ್ಷ

ನಿಮ್ಮ ಸುದ್ದಿ ಬಾಗಲಕೋಟೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರಕಾರ ತನ್ನ ೨ನೇ ಅವಯ ೨ನೇ ವರ್ಷ ಪೂರ್ಣಗೊಳಿಸಿದ್ದು ಕೇಂದ್ರದ ಬಹುತೇಕ ಯೋಜನೆಗಳು ಜನರಿಗೆ ತಲುಪಿವೆ ಎಂದು ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುರೇಶ ಕೊಣ್ಣೂರ ತಿಳಿಸಿದರು.

ಕೇಂದ್ರ ಸರಕಾರದ ೨ನೇ ಅವಯ ೨ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡದ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನರೇಂದ್ರ ಮೋದಿ ಅವಯಲ್ಲಿ ದೇಶದ ಪ್ರತಿ ಮೂಲೆಯಲ್ಲಿರುವ ಎಲ್ಲ ಹಳ್ಳಿಗಳಿಗೂ ಸೌಲಭ್ಯ ದೊರೆತಿದೆ. ಪ್ರತಿ ಮನೆಯಲ್ಲೂ ಒಂದಿಲ್ಲೊAದು ಸೌಲಭ್ಯ ದೊರೆತವರಿದ್ದಾರೆ ಎಂದು ಹೇಳಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಲ್ಲೇಶ ವಿಜಾಪೂರ, ಕಲ್ಲಪ್ಪ ಭಗವತಿ, ಪಪಂ ಅಧ್ಯಕ್ಷ ಸಂಗಪ್ಪ ತಳವಾರ, ಉಪಾಧ್ಯಕ್ಷೆ ಶಂಕ್ರಮ್ಮ ಗೌಡರ, ಸಭಾಪತಿ ವಿಜಯಕುಮಾರ ಕನ್ನೂರ, ಸದಸ್ಯ ಗುರುನಾಥ ಚಳ್ಳಮರದ, ನಗರ ಘಟಕದ ಅಧ್ಯಕ್ಷ ಯಮನಪ್ಪ ನಾಗರಾಳ, ರವಿ ಬಂಡಿ, ಸಿದ್ದು ಸಜ್ಜನ, ಶಂಕ್ರಯ್ಯ ರೇವಣಕಿಮಠ, ಬಸವರಾಜ ಬೇವೂರ, ಸಿ.ಎಂ.ಅನವಾಲ, ಸುರೇಶ ಕಾಯಿ, ಮಹಾಂತೇಶ ಐಹೊಳ್ಳಿ, ಮಂಜುನಾಥ ಬಂಡಿ, ಪಾಪಣ್ಣ ಲಮಾಣಿ ಇತರರು ಇದ್ದರು.

 

Nimma Suddi
";