This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Politics News

ಗರಿಗೆದರಿತು ಆಕಾಂಕ್ಷಿಗಳ ಗದ್ದುಗೆ ಗುದ್ದಾಟ

ಘೋಷಣೆಯಾಯ್ತು ಚುನಾವಣೆ

ನಿಮ್ಮ ಸುದ್ದಿ ಬಾಗಲಕೋಟೆ

ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣ ಪಂಚಾಯಿತಿ ಪರಿವರ್ತನೆ ನಂತರ ಚುನಾಯಿತ ಕೌನ್ಸಿಲ್‌ಗೆ ಆಡಳಿತಕ್ಕೆ ಮುಹೂರ್ತ ಫಿಕ್ಸ್ ಆಗುತ್ತಿದ್ದಂತೆ ಗದ್ದುಗೆ ಗುದ್ದಾಟ ಬಿರುಸು ಪಡೆಯುತ್ತಿದೆ.

ಗ್ರಾಪಂ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿ ಆಗಿ ಪರಿವರ್ತನೆ ನಂತರ ೨೦೧೬ರಲ್ಲಿ ಪಕ್ಷದ ಆಧಾರದಲ್ಲಿ ನಡೆದ ಚುನಾವಣೆಯಲ್ಲಿ ೧೬ ಸದಸ್ಯ ಬಲದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ ೭ ಸ್ಥಾನ ಪಡೆದು ಸಮಬಲ ಸಾಧಿಸಿದ್ದವು. ಇಬ್ಬರು ಪಕ್ಷೇತರರು ಆಯ್ಕೆ ಆಗುವ ಮೂಲಕ ಆಡಳಿತದ ಚುಕ್ಕಾಣೆ ಕುತೂಹಲ ಮೂಡಿಸಿತ್ತು.

ಆರಂಭದಲ್ಲೇ ಟಿಕೆಟ್ ಹಂಚಿಕೆಯ ಗೊಂದಲದಿಂದ ಪೂರ್ಣ ಪ್ರಮಾಣದ ೫ ವರ್ಷ ಆಡಳಿತ ನಡೆಸಬೇಕಿದ್ದ ಕಾಂಗ್ರೆಸ್ ಪಕ್ಷ ಮೊದಲ ಅರ್ಧದ ಅಂದರೆ ಎರಡೂವರೆ ವರ್ಷದ ಅವಧಿಯಲ್ಲಿ ಪಕ್ಷೇತರರ ಬೆಂಬಲದೊಂದಿಗೆ ಮೊದಲ ಬಾರಿ ಅಧ್ಯಕ್ಷ ಗಾದಿಗೆ ಏರಿತ್ತು. ನಂತರದ ಅವಧಿಯಲ್ಲಿ ಇಬ್ಬರು ಪಕ್ಷೇತರರು ಬಿಜೆಪಿಗೆ ಬೆಂಬಲ ನೀಡಿದ್ದರ ಪರಿಣಾಮ ನಂತರದಲ್ಲಿ ಬಿಜೆಪಿ ಪಕ್ಷ ಆಡಳಿತ ನಡೆಸುವಂತಾಯಿತು.

ಸದ್ಯ ಮತ್ತೊಂದು ಚುನಾವಣೆ ಬಂದಿದ್ದು ಬಹುತೇಕ ಆಕಾಂಕ್ಷಿಗಳಲ್ಲಿ ಮತ್ತೆ ಕೌನ್ಸಿಲರ್ ಆಗಬೇಕೆಂಬ ಆಸೆ ಚಿಗುರೊಡೆಯತೊಡಗಿದೆ. ಹಿಂದಿನ ಚುನಾವಣೆಯಲ್ಲಿ ಪರಾಭವಗೊಂಡ ಹಾಗೂ ಗ್ರಾಪಂ ಆಡಳಿತದಲ್ಲಿ ಸದಸ್ಯರಾಗಿ ಅನುಭವ ಹೊಂದಿದ ಕೆಲ ಹಿರಿಯ ಜೀವಿಗಳು ಮತ್ತೊಂದು ಬಾರಿ ಅವಕಾಶಕ್ಕಾಗಿ ಸಿದ್ದರಾಗತೊಡಗಿದ್ದಾರೆ. ಜತೆಗೆ ಯುವ ಮನಸ್ಸುಗಳು ಈಗಾಗಲೆ ಸದ್ದಿಲ್ಲದೆ ಸಿದ್ದತೆಯನ್ನು ಮಾಡಿಕೊಂಡಿದ್ದು ಗುಟ್ಟಾಗಿ ಉಳಿದಿಲ್ಲ.

ವಾರ್ಡ್ ವಾರು ಅಂತಿಮ ಮೀಸಲಾತಿ ಘೋಷಣೆ ಆಗುತ್ತಲೇ ತಾವು ಸ್ಪರ್ಧಿಸಲು ಇಚ್ಚಿಸಿದ್ದ ವಾರ್ಡ್ನ ಮತದಾರರ ಪಟ್ಟಿಯೊಂದಿಗೆ ಕೆಳಹಂತದ ಸಮೀಕ್ಷೆಯಲ್ಲೂ ತೊಡಗಿದ್ದು ಹೊಸ ಮೀಸಲಾತಿಯಿಂದ ತಮ್ಮ ಮೊದಲಿನ ವಾರ್ಡ್ ಕಳೆದುಕೊಂಡ ಕೆಲ ಮಾಜಿ ಸದಸ್ಯರು ಹೊಸ ವಾರ್ಡ್ ಹುಡುಕಾಟದಲ್ಲಿದ್ದಾರೆ. ಈ ಹಿಂದಿನ ಸದಸ್ಯರಲ್ಲಿ ಕೆಲವರು ಮತ್ತೊಮ್ಮೆ ಸ್ಪರ್ಧಿಸಲು ಇರಾದೆ ತೋರಿದ್ದರೆ ಕೆಲವರಂತೂ ಬಿಲ್‌ಕೂಲ್ ಚುನಾವಣೆಗೆ ಒಪ್ಪುತ್ತಿಲ್ಲ. ಮತ್ತೆ ಕೆಲವರು ಪಕ್ಷದ ಟಿಕೇಟ್ ಗಿಟ್ಟಿಸಿಕೊಳ್ಳುವಲ್ಲಿ ಆಯಾ ಪಕ್ಷದ ನಾಯಕರೊಂದಿಗೆ ಹೆಚ್ಚು ಗುರ್ತಿಸಿಕೊಳ್ಳುತ್ತಿರುವುದು ಬಹಿರಂಗ ಸತ್ಯ.

ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷ ಬಲವಧನೆ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆಗೆ ಮಹತ್ವ ಬಂದಿದ್ದು ರಾಜಕೀಯ ಚಟುವಟಿಕೆಗಳು ಮೇಲುಗೈ ಸಾಧಿಸಲಿವೆ. ಇದರೊಂದಿಗೆ ಕೆಲವರು ತಮ್ಮ ಸ್ಪಂತ ಬಲದ ಮೇಲೆ ಪ್ರಮುಖ ರಾಜಕೀಯ ಪಕ್ಷಗಳಿಗೆ ಟಕ್ಕರ್ ಕೊಡುವ ನಿಟ್ಟಿನಲ್ಲಿ ಪಕ್ಷೇತರ ಸ್ಪರ್ಧೆಯೂ ಬಿರುಸುಗೊಳ್ಳಲಿದೆ. ಪ್ರಮುಖ ಕಾಂಗ್ರೆಸ್ ಹಾಗೂ ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನಿಸಿದರೆ, ಕಾಂಗ್ರೆಸ್ ಪಕ್ಷ ಬಿಜೆಪಿಯಿಂದ ಅಧಿಕಾರ ಕಸಿದುಕೊಳ್ಳಲು ಶತಪ್ರಯತ್ನ ನಡೆಸಲಿದೆ.

ಡಿ.೮ರಿಂದ ನಾಮಪತ್ರ ಸಲ್ಲಿಕೆ ಕಾರ್ಯ ಆರಂಭವಾಗಲಿದ್ದು ೧೫ರ ವರೆಗೆ ನಾಮಪತ್ರ ಸಲ್ಲಿಸಬಹುದಾಗಿದ್ದು, ಡಿ.೧೮ರಂದು ಅಂತಿಮ ರಣಕಣದ ಚಿತ್ರಣ ದೊರೆಯಲಿದೆ. ಮುಂದಿನ ೮ ದಿನ ಮಾತ್ರ ಪ್ರಚಾರಕ್ಕೆ ಅವಕಾಶವಿದ್ದು ಡಿ.೨೭ ರಂದು ಮತದಾನ ಹಾಗೂ ೩೦ರಂದು ಅಂತಿಮ ಚಿತ್ರಣ ದೊರೆಯಲಿದೆ.

ವೀಕ್ಷಕರ ನೇಮಕ

ಗೆಲ್ಲುವ ಅಭ್ಯರ್ಥಿಗಳ ಹುಡುಕಾಟದಲ್ಲಿ ಮುಂಚೂಣಿಯಲ್ಲಿರುವ ಬಿಜೆಪಿ ಈಗಾಗಲೇ ಒಂದು ಸುತ್ತಿನ ಸಭೆ ನಡೆಸಿದೆ ಎಂಬ ಮಾಹಿತಿ ಇದೆ. ಪ್ರತಿ ವಾರ್ಡ್ ವಾರು ಅಭ್ಯರ್ಥಿಗಳ ಹುಡುಕಾಟದಲ್ಲಿರುವ ಬಿಜೆಪಿ ನಗರ ಘಟಕ ವೀಕ್ಷಕರ ತಂಡವೊಂದನ್ನು ರಚಿಸಿದ್ದು ಅವರ ಅಭಿಪ್ರಾಯವನ್ನೂ ಸ್ವೀಕರಿಸಲಾಗುತ್ತದೆ ಎಂಬ ಮಾತು ಕೇಳಿದ್ದು ಆಕಾಂಕ್ಷಿಗಳ ಪಟ್ಟಿಯನ್ನೂ ಪಡೆದುಕೊಂಡಿದೆ. ಅವರ ಅವರ ಪಟ್ಟಿಯನ್ನೂ ವೀಕ್ಷಕರ ಹತ್ತಿರ ಕೊಟ್ಟು ತಳಹಂತದಲ್ಲಿ ಗೆಲ್ಲುವ ಅಭ್ಯರ್ಥಿಗಳನ್ನು ಹುಡುಕಾಡಿ ಚುನಾವಣೆ ಕಣಕ್ಕೆ ಧುಮುಕಲಿದೆ ಎಂಬ ಮಾತು ಕೇಳಿ ಬಂದಿದೆ.

ಪಪಂ ಚುನಾವಣೆಗೆ ಸಿದ್ದತೆ ಕುರಿತು ಡಿ.೫ರಂದು ಪಕ್ಷದ ಸಭೆ ಕರೆಯಲಾಗುವುದು. ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮಾಜಿ ಸಚಿವ ಎಚ್.ವೈ.ಮೇಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಎನ್.ರಾಂಪೂರ ಸೇರಿದಂತೆ ಪ್ರಮುಖರ ಸಭೆ ಕರೆಯಲಾಗುವುದು. ನಾನಂತೂ ಆಕಾಂಕ್ಷಿ ಅಲ್ಲ. ಪಕ್ಷದ ವರಿಷ್ಠರ ಸೂಚನೆಯಂತೆ ನಡೆದುಕೊಳ್ಳಲಾಗುವುದು.
-ಎಸ್.ಎಸ್.ಚಳ್ಳಗಿಡದ, ಅಧ್ಯಕ್ಷರು, ಕಾಂಗ್ರೆಸ್ ನಗರ ಘಟಕ ಅಮೀನಗಡ.

ಪಪಂನಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಈಗಾಗಲೆ ಯೋಜನೆ ರೂಪಿಸಲಾಗಿದೆ. ಸೂಕ್ತ ಅಭ್ಯರ್ಥಿಗಳನ್ನೇ ನಿಲ್ಲಿಸಲಾಗುವುದು. ಈ ಬಾರಿಯ ಚುನಾವಣೆಗೆ ತಾವೂ ಸಹ ಸ್ಪರ್ಧಿಸಲು ಇಚ್ಚಿಸಿದ್ದೇನೆ.
-ವೈ.ಎಚ್.ನಾಗರಾಳ, ಅಧ್ಯಕ್ಷರು, ಬಿಜೆಪಿ ನಗರ ಘಟಕ ಅಮೀನಗಡ.

Nimma Suddi
";