ಪದವೀಧರ ಶೇ.66.37, ಶಿಕ್ಷಕರ ಶೇ.83.65 ರಷ್ಟು ಮತದಾನ
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯಲ್ಲಿ ವಾಯವ್ಯ ಪದವೀಧರ ಮತ್ತು ಶಿಕ್ಷಕರ ಮತಕ್ಷೇತ್ರಕ್ಕೆ ಸೋಮವಾರ ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ಶಾಂತಿಯುವಾಗಿ ಮತದಾನ ನಡೆದಿದ್ದು, ಪದವೀಧರ ಕ್ಷೇತ್ರಕ್ಕೆ ಶೇ.66.37 ಹಾಗೂ ಶಿಕ್ಷಕರ ಮತಕ್ಷೇತ್ರಕ್ಕೆ ಶೇ.83.65 ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪದವೀಧರ ಕ್ಷೇತ್ರಕ್ಕೆ ಒಟ್ಟು 33651 ಮತದಾರರ ಪೈಕಿ 22333 ಮತದಾರರು ಮತದಾನ ಮಾಡಿದರೆ, ಶಿಕ್ಷಕರ ಮತಕ್ಷೇತ್ರದಲ್ಲಿ ಒಟ್ಟು 5173 ಮತದಾರರ ಪೈಕಿ 4327 ಮತದಾರರು ಮತದಾನ ಮಾಡಿದ್ದಾರೆ. ಪದವೀಧರ ಕ್ಷೇತ್ರದಲ್ಲಿ ಪುರುಷರು 16707, ಮಹಿಳೆಯರು 5626 ಹಾಗೂ ಶಿಕ್ಷಕರ ಮತಕ್ಷೇತ್ರದಲ್ಲಿ ಪುರುಷರು 3164, ಮಹಿಳೆಯರು 1163 ಜನ ಮತದಾನ ಮಾಡಿದ್ದಾರೆ.
ಬಾದಾಮಿ ತಾಲೂಕಿನಲ್ಲಿ ಪದವೀಧರ ಶೇ.66.50, ಶಿಕ್ಷಕರ 85.05,
ಬಾಗಲಕೋಟೆ ತಾಲೂಕಿನಲ್ಲಿ ಪದವೀಧರ ಶೇ.71.85, ಶಿಕ್ಷಕರ ಶೇ.79.02,
ಬೀಳಗಿ ತಾಲೂಕಿನಲ್ಲಿ ಪದವೀಧರ ಶೇ.80.93, ಶಿಕ್ಷಕರ ಶೇ.81.75,
ಗುಳೇದಗುಡ್ಡ ತಾಲೂಕಿನಲ್ಲಿ ಪದವೀಧರ ಶೇ.67.81, ಶಿಕ್ಷಕರ ಶೇ.81.75,
ಹುನಗುಂದ ತಾಲೂಕಿನಲ್ಲಿ ಪದವೀಧರ ಶೇ.69.51, ಶಿಕ್ಷಕರ 93.24,
ಇಲಕಲ್ಲ ತಾಲೂಕಿನಲ್ಲಿ ಪದವೀಧರ ಶೇ.73.90, ಶಿಕ್ಷಕರ ಶೇ.81.02,
ಜಮಖಂಡಿ ತಾಲೂಕಿನಲ್ಲಿ ಪದವೀಧರ ಶೇ.59.98, ಶಿಕ್ಷಕರ 83.41,
ಮುಧೋಳ ತಾಲೂಕಿನಲ್ಲಿ ಪದವೀಧರ ಶೇ.64.51, ಶಿಕ್ಷಕರ ಶೇ.85.61,
ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಪದವೀಧರ ಶೇ.63.63, ಶಿಕ್ಷಕರ ಶೇ.86.76 ರಷ್ಟು ಮತದನವಾಗಿದೆ
ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.