ಸಾಂಸ್ಕೃತಿಕ ವೈಭವಕ್ಕೆ ಬಾಗಲಕೋಟೆ ಹೋಳಿ ಹಬ್ಬ ಸಾಕ್ಷಿ: ಶಾಸಕ ಚರಂತಿಮಠ
ಬಾಗಲಕೋಟೆ: ಹೋಳಿ ಹಬ್ಬವನ್ನು ಸಾಂಸ್ಕೃತಿಕ ವೈಭವದೊಂದಿಗೆ ಶಾಂತಿಯಿಂದ ಆಚರಿಸಬೇಕು. ಬಾಗಲಕೋಟೆ ಹೋಳಿ ಹಬ್ಬಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ ಎಂದು ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.
ಅವರು ನಗರದ ಹೊಳೆ ಆಂಜನೇಯ ದೇವಸ್ಥಾನ ಹತ್ತಿರ ಆವರಣದಲ್ಲಿ ನಡೆದ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ನಗರ ಮಂಡಲ ವತಿಯಿಂದ ಹೋಳಿ ಹಬ್ಬದ ನಿಮಿತ್ಯ ದಿ,ಗಣಪತರಾವ ಕಾಂಬಳೆ ಸ್ಮರಣಾರ್ಥ ಹಲಿಗೆ ಮಜಲಿನ ಸ್ಪರ್ಧ ಗೆ ಹಲಗೆ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಬಾಗಲಕೋಟೆಯ ಹೋಳಿ ತನ್ನ ಗಟ್ಟಿತನವನ್ನು ಉಳಿಸಿಕೊಂಡು ದೇಶದಲ್ಲಿಯೆ ಹೋಳಿ ಆಚರಣೆ ಯಲ್ಲಿ ಬಾಗಲಕೋಟೆ ಎರಡನೆ ಸ್ಥಾನದಲ್ಲಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ,ಬುಡಾ ಅಧ್ಯಕ್ಣ ಬಸಲಿಂಗಪ್ಪ ನಾವಲಗಿ, ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಅಶೋಕ ಲಿಂಬಾವಳಿ, ಸದಾನಂದ ನಾರಾ, ಬಸವರಾಜ ಯಂಕಂಚಿ, ಬಸವರಾಜ ಅವರಾದಿ,ಶಿವಾನಂದ ಟವಳಿ,ರಾಜು ರೇವಣಕರ,ಸತ್ಯನಾರಾಯಣ ಹೇಮಾದ್ರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.