This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Politics News

ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರ : 2.36 ಲಕ್ಷ ಮತದಾರರು

*ವಿಧಾನಸಭಾ ಚುನಾವಣೆಗೆ ಮೇ 10 ರಂದು ಮತದಾನ, 13 ರಂದು ಮತ ಎಣಿಕೆ*

ನಿಮ್ಮ ಸುದ್ದಿ ಬಾಗಲಕೋಟೆ

ಭಾರತ ಚುನಾವಣಾ ಆಯೋಗ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ವೇಳಾಪಟ್ಟಿಯನ್ನು ಹೊರಡಿಸಿದ್ದು, ಬಾಗಲಕೋಟೆ ಮತಕ್ಷೇತ್ರದಲ್ಲಿ 117536 ಪುರುಷ, 118472 ಮಹಿಳಾ ಹಾಗೂ 17 ಇತರೆ ಸೇರಿ ಒಟ್ಟು 236025 ಮತದಾರರಿದ್ದಾರೆ ಉಪವಿಭಾಗಾಧಿಕಾರಿಗಳು ಆಗಿರುವ ಬಾಗಲಕೋಟೆ ಮತಕ್ಷೇತ್ರದ ಚುನಾವಣಾಧಿಕಾರಿ ಶ್ವೇತಾ ಬೀಡಿಕರ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು ಚುನಾವಣಾ ಮಾದರಿ ನೀತಿ ಸಂಹಿತೆ ಮಾರ್ಚ 29 ರಿಂದ ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗುವವರೆ ಜಾರಿಯಲ್ಲಿರುತ್ತದೆ. ಮತಕ್ಷೇತ್ರದಲ್ಲಿ ಅಳವಡಿಸಲಾದ ಬ್ಯಾನರ್, ಬಂಟಿಂಗ್ಸ್‍ಗಳನ್ನು ಕೂಡಲೇ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಚುನಾವಣೆ ನಡೆಸಲು ಎಲ್ಲ ರೀತಿಯಿಂದ ಸಜ್ಜಾಗಿದ್ದು, ಮಾದರಿ ನೀತಿ ಸಂಹಿತೆ ಪಾಲನೆಗೆ 21 ಸೆಕ್ಟರ ಅಧಿಕಾರಿಗಳು, ಓರ್ವ ಸಹಾಯಕ ವೆಚ್ಚ ವೀಕ್ಷಕ, 5 ವಿಡಿಯೋ ಕಣ್ಗಾವಲು ತಂಡ, 1 ವಿಡಿಯೋ ವೀಕ್ಷಣಾ ತಂಡ, 9 ಕ್ಷಿಪ್ರ ಸಂಚಾರಿ ದಳಗಳು ಹಾಗೂ 12 ಸ್ಥಾಯಿ ಕಣ್ಗಾವಲು ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಮತಕ್ಷೇತ್ರದಲ್ಲಿ ಹೊನ್ನಾಕಟ್ಟಿ, ಹೊಸೂರ, ನಾಯನೇಗಲಿ ಮತ್ತು ಐಬಿ ಕಮತಗಿ ಕ್ರಾಸ್‍ನಲ್ಲಿ ಚೆಕ್‍ಪೋಸ್ಟಗಳನ್ನು ತೆರೆಯಲಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ಸಾರ್ವಜನಿಕರು ಸಹ ಸಿ-ವಿಜಿಲ್ ಆಪ್ ಮೊಬೈಲ್‍ನಲ್ಲಿ ಡೌನಲೋಡ್ ಮಾಡಿಕೊಂಡು ದೂರು ಸಲ್ಲಿಸಬಹುದಾಗಿದೆ. ಮತಕ್ಷೇತ್ರದಲ್ಲಿ ಒಟ್ಟು 236025 ಮತದಾರರಿದ್ದು, ಅದರಲ್ಲಿ ಸೇವಾ ಮತದಾರರು 392 ಜನ ಇದ್ದಾರೆ. ಅದರಲ್ಲಿ 387 ಪುರುಷ, 5 ಮಹಿಳಾ ಮತದಾರರಿದ್ದಾರೆ ಎಂದರು.

ಮತಕ್ಷೇತ್ರದಲ್ಲಿ ಒಟ್ಟು 263 ಮತಗಟ್ಟೆಗಳಿದ್ದು, ನಗರ ಪ್ರದೇಶದಲ್ಲಿ 105, ಗ್ರಾಮೀಣ ಪ್ರದೇಶದಲ್ಲಿ 158 ಮತಗಟ್ಟೆಗಳಿವೆ. 9 ವಲ್ನೇಬರ್, 51 ಕ್ರಿಟಿಕಲ್, 203 ಸಾಮಾನ್ಯ ಮತಗಟ್ಟೆಗಳಿವೆ. ಪ್ರತಿ ಮತಗಟ್ಟೆಗೆ 5 ಮತಗಟ್ಟೆ ಅಧಿಕಾರಿಗಳು ಒಳಗೊಂಡಂತೆ ಶೇ.10 ರಷ್ಟು ಹೆಚ್ಚುವರಿ ಸೇರಿ ಒಟ್ಟು 1341 ಸಿಬ್ಬಂದಿಗಳು ಅವಶ್ಯಕತೆ ಇದ್ದು, ಮುಧೋಳ, ಬೀಳಗಿ, ಹುನಗುಂದ, ಬಾದಾಮಿ, ಬಾಗಲಕೋಟೆ ಹಾಗೂ ಜಮಖಂಡಿ ತಾಲೂಕುಗಳಿಂದ ನಿಯೋಜಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಎನ್‍ಕೋರ್ ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಅಥವಾ ಆಪ್‍ಲೈನ್ ಮೂಲಕ ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ. ಅಭ್ಯರ್ಥಿ ಹಾಗೂ ರಾಜಕೀಯ ಪಕ್ಷದವರು ಸಭೆಗಳಿಗೆ, ರ್ಯಾಲಿ, ವಾಹನಗಳಿಗೆ, ತಾತ್ಕಾಲಿಕ ಪಕ್ಷದ ಕಚೇರಿಗೆ, ಧ್ವನಿವರ್ಧಕಗಳಿಗೆ, ಹೆಲಿಕ್ಯಾಪ್ಟರ ಹಾಗೂ ಹೆಲಿಪ್ಯಾಡ್ ಪರವಾನಿಗೆ ಕೋರಿ ಸುವಿದಾ ವೆಬ್‍ಸೈಟ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಚುನಾವಣಾಧಿಕಾರಿ ಶ್ವೇತಾ ಬೀಡಿಕರ ತಿಳಿಸಿದ್ದಾರೆ.

ಮನೆಯಿಂದಲೇ ಮತದಾನಕ್ಕೆ ಅವಕಾಶ
ಚುನಾವಣಾ ಆಯೋಗವು ಈ ಬಾರಿ ಹಿರಿಯ ನಾಗರಿಕರು, ವಿಕಲಚೇತನರು, ಅಗತ್ಯ ಸೇವೆಗಳ ಮೇಲಿರುವ ಗೈರು ಹಾಜರಿ ಮತದಾರರು, ಕೋವಿಡ್ ಸೋಂಕಿತ ಗೈರು ಮತದಾರಿಗೆ ಅಂಚೆ ಮತಕ್ಕೆ ಅವಕಾಶ ಕಲ್ಪಿಸಲಾಗಿದೆ. ಮತಕ್ಷೇತ್ರದಲ್ಲಿ 80 ರಿಂದ 89 ವರ್ಷದ 5440, 90 ರಿಂದ 99 ವರ್ಷದ 989, 100 ವರ್ಷ ಮೆಲ್ಪಟ್ಟ 105 ಮತದಾರರಿದ್ದಾರೆ. ವಿಕಲಚೇತನರು 2326 ಮತದಾರರಿದ್ದಾರೆ. ಅದರಲ್ಲಿ 1388 ಪುರುಷ, 938 ಮಹಿಳಾ ವಿಕಚೇತನರಿದ್ದಾರೆ.

ದೂರು ನಿರ್ವಹಣಾ ಕೇಂದ್ರ
ಬಾಗಲಕೋಟೆ ವಿಧಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿಗಳ ಕಾರ್ಯಾಲಯದಲ್ಲಿ ದೂರು ನಿರ್ವಹಣಾ ಹಾಗೂ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ದೂಸಂ.08354-796784ಗೆ ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದ ಯಾವುದೇ ರೀತಿಯ ದೂರುಗಳನ್ನು ನೀಡಲು ಮತ್ತು ಮಾಹಿತಿಯನ್ನು ಪಡೆಯಲು ಅವಕಾಶವಿರುತ್ತದೆ.

Nimma Suddi
";