This is the title of the web page
This is the title of the web page

Live Stream

October 2024
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Politics News

ಬಿಜೆಪಿ ಸೇರ್ಪಡೆಗೊಂಡ ಪಟ್ಟಣ ಪಂಚಾಯತ್ ಮಾಜಿ ಸದಸ್ಯ

ಬಿಜೆಪಿ ಸೇರ್ಪಡೆಗೊಂಡ ಪಟ್ಟಣ ಪಂಚಾಯತ್ ಮಾಜಿ ಸದಸ್ಯ

ನಿಮ್ಮ ಸುದ್ದಿ ಬಾಗಲಕೋಟೆ

ಜಿಲ್ಲೆಯ ಅಮೀನಗಡ ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಸಂಗಮೇಶ ಗೌಡರ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷ ಸೇರ್ಪಡೆಗೊಂಡರು.

ಗುರುವಾರ ಸಂಜೆ ಬಾಗಲಕೋಟೆಯಲ್ಲಿ ಶಾಸಕ, ಬಾಗಲಕೋಟೆ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ವೀರಣ್ಣ ಚರಂತಿಮಠ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು.

ಹಲವು ವರ್ಷದಿಂದ ಕಟ್ಟಾ ಕಾಂಗ್ರೆಸ್ ಅಭಿಮಾನಿಯಾಗಿದ್ದ ಯುವ ಮುಖಂಡ ಸಂಗಮೇಶ ಗೌಡರ್ ಪಟ್ಟಣ ಪಂಚಾಯಿತಿ ಸದಸ್ಯರಾಗಿ ಹಲವು ಜನಪರ ಸೇವೆ ಕೈಗೊಂಡಿದ್ದರು. ಅಪಾರ ಯುವ ಪಡೆ ಹೊಂದಿದ ಸಂಗಮೇಶ ಅವರ ಸೇರ್ಪಡೆಯಿಂದ ಬಿಜೆಪಿಗೆ ಪಟ್ಟಣದಲ್ಲಿ ಮತ್ತಷ್ಟು ಬಲ ಬಂದಿದೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ವಿಜಯಕುಮಾರ ಕನ್ನೂರ ತಿಳಿಸಿದರು.

ಈ ಸಂದರ್ಭದಲ್ಲಿ ಬಾಗಲಕೋಟೆ ನಗರಸಭೆ ಸದಸ್ಯ ವೀರಪ್ಪ ಸಿಗರನ್ನವರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ್, ಪಪಂ ಸದಸ್ಯ ಬಾಬು ಛಬ್ಬಿ, ಸಂತೋಷ ಐಹೊಳೆ ಇತರರು ಇದ್ದರು.

ಸಂಗಮೇಶ ಗೌಡರ ಅವರೊಂದಿಗೆ ಹಿರಿಯರಾದ ಲಕ್ಷ್ಮಣ ಹುಣಶ್ಯಾಳ, ಚಂದ್ರು ಗೌಡರ, ಪ್ರವೀಣ ನಿಡಗುಂದಿ, ಶಿವಾನಂದ ಹಣಗಿ, ಮುತ್ತು ಚೌವಾಣ, ಬಸವರಾಜ ಕತ್ತಿ, ಹಣಮಂತ ವಡ್ಡರ, ಮಹಾಂತೇಶ ನೀರುಗ್ಗಿ ಇತರರು ಬಿಜೆಪಿ ಸೇರ್ಪಡೆಗೊಂಡರು.

";