ನಿಮ್ಮ ಸುದ್ದಿ ಬಾಗಲಕೋಟೆ
ಭಾರತೀಯ ಜನತಾ ಪಕ್ಷದ ತತ್ವ ಸಿದ್ದಾಂತಗಳನ್ನು ಹಾಗು ಶ್ರೀ ದೊಡ್ಡನಗೌಡ್ರು ಜಿ ಪಾಟೀಲರ ಸರಳ ಸ್ವಭಾವ, ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ, ಕಾಂಗ್ರೇಸ್ ಪಕ್ಷದ, ಹಾಲಮತ ಸಮಾಜದ ಪ್ರಮುಖರು ಅಗಿರುವ ಶ್ರೀ ಎಮ್ ಎಲ್ ಶಾಂತಗೇರಿ ಅವರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷ ತೊರೆದು, ಶ್ರೀ ದೊಡ್ಡನಗೌಡ್ರು ಜಿ ಪಾಟೀಲರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಎಮ್ ಎಲ್ ಶಾಂತಗೇರಿ ಹಾಗು ಅವರ ಅಪಾರ ಬೆಂಬಲಿಗರು ಪಕ್ಷ ಸೇರ್ಪಡೆ ಯಾಗಿರುವದರಿಂದ ಭಾರತೀಯ ಜನತಾ ಪಕ್ಷಕ್ಕೆ ತಾಲೂಕೀನ ನಲ್ಲಿ ಶಕ್ತಿ ಬಂದಂತಾಗಿದೆ ಎಂದು ತಿಳಿಸಿ ಪಕ್ಷಕ್ಕೆ ಆಗಮಿಸಿದ ಸರ್ವರಿಗು ಆತ್ಮೀಯವಾಗಿ ಬರಮಾಡಿಕೊಂಡರು.
ಅಧ್ಯಕ್ಷರಾದ ಮಹಾಂತಗೌಡ್ರು ಪಾಟೀಲ, ರಾಜಕುಮಾರ ಬಾದವಾಡಗಿ, ಹುನಕುಂಟಿ ವಕೀಲರು ಹಾಗು ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.