ಬೆಂಗಳೂರು: ‘MP ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆದ್ದರೆ ಸಿದ್ದರಾಮಯ್ಯ 5 ವರ್ಷ CM’ಆಗಿರುತ್ತಾರೆ ಎಂದು ಹಾಸನದಲ್ಲಿ ಸಿಎಂ ಸಿದ್ದರಾಮಯ್ಯಪುತ್ರ ಡಾ. ಹೊಸ ಬಾಂಬ್ ಸಿಡಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದ್ದು, ಕಾಂಗ್ರೆಸ್ನ ಅನೇಕ ನಾಯಕರು ಈ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದು, ಮಾಜಿ ಶಾಸಕ ಯತೀಂದ್ರ ಹೇಳಿಕೆಗೆ ಸಚಿವ ಡಾ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು ಸಿಎಂ ಮುಂದುವರಿಸುವುದು ಬಿಡುವುದು ನಮ್ಮ ಹೈಕಮಾಂಡ್ ನಿರ್ಧಾರ ಮಾಡ್ತಾರೆ. ಸಿಎಂ ಬಗ್ಗೆ ನಿರ್ಧಾರ ಮಾಡುವುದು ನಾವಲ್ಲ. ಲೋಕಸಭೆ ಚುನಾವಣೆಯಲ್ಲಿ ಕೇವಲ ಸಿಎಂ ಸಿದ್ದರಾಮಯ್ಯ ಮಾತ್ರವಲ್ಲ. ಕೆಪಿಸಿಸಿ ಅಧ್ಯಕ್ಷರು ಸೇರಿದಂತೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಸಂಕಲ್ಪ ಮಾಡಿದ್ದೇವೆ ಎಂದು ಬೆಂಗಳೂರಿನಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಲೋಕಸಭೆಯಲ್ಲಿ ಕೇವಲ ಸಿದ್ದರಾಮಯ್ಯ ಮಾತ್ರವಲ್ಲ, ಕೆಪಿಸಿಸಿ ಅಧ್ಯಕ್ಷರು ಸೇರಿ ನಾವೆಲ್ಲ ಒಟ್ಟಾಗಿ ಕೆಲಸ ಮಾಡ್ತೇವೆ. ನಾವು ಗ್ಯಾರಂಟಿ ಗಳನ್ನೆಲ್ಲ ಅನುಷ್ಠಾನಮಾಡಿದ್ದೇವೆ. ನಾವು ಹೆಚ್ಚು ಸ್ಥಾನ ಗೆಲ್ಲಬೇಕು ಅಂತ ಸಂಕಲ್ಪ ಮಾಡಿದ್ದೇವೆ. ಸಿಎಂ ಮುಂದುವರಿಸುವುದು ಬಿಡುವುದು ಹೈಕಮಾಂಡ್ ನಿರ್ಧಾರ. ಅದನ್ನು ನಿರ್ಧಾರ ಮಾಡುವುದು ನಾವಲ್ಲ. ಲೋಕ ಸಭೆಗೆ 28 ಸಚಿವರನ್ನು ಕರೆಸಿಕೊಂಡು ಜವಾಬ್ದಾರಿ ಕೊಟ್ಟಿದ್ದಾರೆ. ನಮಗೆ ಒಂದೊಂದು ಕ್ಷೇತ್ರದ ಜವಾಬ್ದಾರಿ ಕೊಟ್ಟಿದ್ದಾರೆ. ನಮಗೆ ಸಚಿವರಿಗೆಲ್ಲ ಹೈಕಮಾಂಡ್ ಜವಾಬ್ದಾರಿ ಕೊಟ್ಟಿರುವುದು ಸತ್ಯ. ಯತೀಂದ್ರ ಹೇಳಿಕೆ ಗಮನಿಸಿಲ್ಲ, ಆದರೆ ಸಚಿವರಿಗೆಲ್ಲ ಜವಾಬ್ದಾರಿ ಕೊಡಲಾಗಿದೆ ಎಂದು ಹೇಳಿದರು.
ಯತೀಂದ್ರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ ಎಂದು ಕಲಬುರಗಿಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು. ನಮ್ಮಲ್ಲಿ ಹೈಕಮಾಂಡ್ ಇದೆ, ಆ ಬಗ್ಗೆ ತೀರ್ಮಾನಿಸುತ್ತಿದ್ದು, ಹೈಕಮಾಂಡ್ ಮನಸ್ಸು ಮಾಡಿದ್ರೆ ಈ ಐದು ವರ್ಷ ಅಲ್ಲ, ಮುಂದೆಯೂ ಕೂಡ ಅವರೇ ಸಿಎಂ ಆಗಿರಬಹುದು. ಏನೇನು ತೀರ್ಮಾನ ಆಗಿದೆ ಹೈಕಮಾಂಡ್ಗೆ ಗೊತ್ತು. ಐದು ವರ್ಷನೋ, ಎರಡೂ ವರ್ಷನೋ ಅವ್ರಿಗೆ ಗೊತ್ತು ಎಂದು ಲಕ್ಷ್ಮಣ ಸವದಿ ವಿವರಿಸಿದರು.