ವಿಜಯಪುರ: ಬರದಿಂದ ತತ್ತರಿಸಿರುವ ರೈತರು ತಮ್ಮ ಜಾನುವಾರುಗಳನ್ನು ಹೇಗೆ ಉಳಿಸಿಕೊಳ್ಳಬೇಕು ಎಂಬ ಚಿಂತೆಯಲ್ಲಿದ್ದು, ಚಳಿ ಕಳೆದು ಬೇಸಿಗೆ ಆರಂಭವಾಗಲಿದ್ದು, ಆಗ ಎದುರಾಗುವ ಮೇವಿನ ಸಮಸ್ಯೆಗೆ ಏನು ಮಾಡಬೇಕು ಎಂಬ ಚಿಂತೆ ಅನ್ನದಾತರದ್ದಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ರಾಜ್ಯ ಸರಕಾರ ಈಗಾಗಲೇ ಜಿಲ್ಲೆಯ 13 ತಾಲೂಕುಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಿಸಿದ್ದು, ಬೆಳೆದ ಬೆಳೆಗಳು ಸರಿಯಾಗಿ ರೈತರ ಕೈಗೆ ಸೇರುತ್ತಿಲ್ಲ. ಜನರು ಹೇಗೋ ತಮ್ಮ ಸಮಸ್ಯೆ ಹೇಳಿಕೊಂಡು ಜೀವನ ನಡೆಸಬಹುದು. ಜಾನುವಾರುಗಳಿಗೆ ಕುಡಿವ ನೀರು ಹಾಗೂ ಮೇವಿನ ಸಮಸ್ಯೆಯಾದರೆ ಏನು ಮಾಡಬೇಕು ಎಂಬ ಚಿಂತೆಯಲ್ಲಿ ಜಾನುವಾರು ಸಾಕಾಣಿಕೆದಾರು ಇದ್ದು, ಜಿಲ್ಲೆಯಲ್ಲಿ ದನ, ಎಮ್ಮೆ, ಕುರಿ, ಮೇಕೆ, ಹಂದಿ, ಕುದರೆ, ಕೋಳಿ ಸೇರಿ ಒಟ್ಟು 15,88229 ಜಾನುವಾರುಗಳಿವೆ.
ಪಶು ಸಂಗೋಪನಾ ಇಲಾಖೆ ಮಾಹಿತಿ ಪ್ರಕಾರ ಇನ್ನೂ 18 ರಿಂದ 21 ವಾರ ಮೇವಿನ ಕೊರತೆಯಾಗದ್ದು, ಅಧಿಕಾರಿಗಳು ಹೇಳಿದಷ್ಟೇ ಮೇವು ಬಳಸಿದರೆ ಜಾನುವಾರುಗಳಿಗೆ ಸಾಕಾಗಲ್ಲ. ಹಾಗಾಗಿ ನಿತ್ಯ ಅವುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಮೇವು ಉಪಯೋಗಿಸುವುದರಿಂದ ಮುಂದಿನ ದಿನಗಳಲ್ಲಿಅವುಗಳ ರಕ್ಷಣೆಗೆ ಏನು ಮಾಡಬೇಕು ಎಂಬ ಚಿಂತೆ ರೈತರನ್ನು ಕಾಡುತ್ತಲೇ ಇದೆ.ಕಳೆದ ಒಂದು ತಿಂಗಳಲ್ಲಿ ಮೇವು ಉತ್ಪಾದನೆ ಪ್ರಮಾಣ ಸಾಕಷ್ಟು ಕಡಿಮೆಯಾಗಿದೆ.
ಸಮಸ್ಯೆ ಬಾರದಿದ್ದರೂ ಮುಂದೆ ಸಮಸ್ಯೆ ಉಲ್ಭಣಗೊಳ್ಳಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದು, ಈಗಾಗಲೇ ಎಲ್ಲೆಲ್ಲಿ ಮೇವಿನ ಕೊರತೆಯಾಗಬಹುದು ಎಂಬುದ ಬಗ್ಗೆ ಉಪವಿಭಾಗಾಧಿಕಾರಿಗಳು, ತಹಸೀಲ್ದಾರರು, ಕೃಷಿ ಇಲಾಖೆ ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆ ಹಾಗೂ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಪರಿಶೀಲನೆ ನಡೆಸಿದ್ದಾರೆ. ಈಗ ಮೇವಿನ ಜೋಳದ ಕಣಿಕೆ ಬರಬೇಕಿದ್ದು, ಅದಷ್ಟು ಬಂದರೆ ಸ್ವಲ್ಪ ಪ್ರಮಾಣದಲ್ಲಿ ಸಮಸ್ಯೆ ತಗ್ಗಬಹುದು.