ಅಯೋಧ್ಯೆಯಲ್ಲಿ ಪೂರ್ಣಗೊಂಡಿರುವ ಭವ್ಯವಾದ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠೆಯ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು, ಇದಕ್ಕಾಗಿ ವಾರದಿಂದಲೇ ವೈದಿಕ ಆಚರಣೆಗಳು ಆರಂಭಗೊಂಡಿವೆ. ಅಫ್ಘಾನಿಸ್ತಾನವನ್ನು ಒಳಗೊಂಡಂತೆ ಪ್ರಪಂಚದಾದ್ಯಂತದ ಶ್ರೀರಾಮ ದೇವಾಲಯಕ್ಕೆ ಉಡುಗೊರೆಗಳು ಬರುತ್ತಿವೆ.
2 ಕೆಜಿ ಕುಂಕುಮದ ಜತೆಗೆ ಕಾಬೂಲ್ ನದಿಯ ನೀರನ್ನು ಕೂಡ ಕಳುಹಿಸಿದ್ದಾರೆ. ತಮಿಳುನಾಡಿನ ರೇಷ್ಮೆ ತಯಾರಕರು ಶ್ರೀರಾಮ ದೇವಾಲಯದ ಚಿತ್ರವಿರುವ ರೇಷ್ಮೆ ಹಾಳೆಗಳನ್ನು ಕಳುಹಿಸಿದ್ದಾರೆ.ಯುವಕನೊಬ್ಬ ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಶಾರದಾ ಪೀಠದ ಕುಂಡದಿಂದ ಪವಿತ್ರ ನೀರನ್ನು ಸಂಗ್ರಹಿಸಿ ಬ್ರಿಟನ್ನಿಂದ ಭಾರತಕ್ಕೆ ಪವಿತ್ರ ಸಮಾರಂಭದಲ್ಲಿ ಬಳಸಲು ಕಳುಹಿಸಿದ್ದಾರೆ. ರಾಮಮಂದಿರದ ಪ್ರತಿಷ್ಠಾಪನೆಗಾಗಿ ಭಾರತದ ನೆರೆಯ ರಾಷ್ಟ್ರ ನೇಪಾಳದಿಂದ ಶೂಗಳು, ಆಭರಣಗಳು ಮತ್ತು ಬಟ್ಟೆಗಳನ್ನು ಒಳಗೊಂಡಂತೆ 3,000 ಕ್ಕೂ ಹೆಚ್ಚು ಉಡುಗೊರೆಗಳನ್ನು ನೀಡಲಾಗಿದೆ.
ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಅಲೋಕ್ ಕುಮಾರ್ ಅವರು ಕಾಶ್ಮೀರ, ತಮಿಳುನಾಡು ಮತ್ತು ಅಫ್ಘಾನಿಸ್ತಾನದಿಂದ ಪಡೆದ ಉಡುಗೊರೆಗಳನ್ನು ಶ್ರೀರಾಮ ಮಂದಿರದ ಅನಿಲ್ ಮಿಶ್ರಾ ಅವರಿಗೆ ಹಸ್ತಾಂತರಿಸಿದ್ದಾರೆ.ಅಲೋಕ್ ಕುಮಾರ್ ಅವರು ಶ್ರೀರಾಮ ಮಂದಿರ ನಿರ್ಮಾಣದಿಂದ ಮುಸ್ಲಿಂ ಸಮುದಾಯವೂ ಸಂತೋಷವಾಗಿದೆ ಎಂದು ಹೇಳಿದ್ದಾರೆ. ರಾಮಮಂದಿರ ನಿರ್ಮಾಣದ ಬಗ್ಗೆ ಸಂತಸ ವ್ಯಕ್ತಪಡಿಸಿದ ಅವರು, ನಾವು ವಿವಿಧ ಧರ್ಮಗಳನ್ನು ಅನುಸರಿಸುತ್ತಿದ್ದರೂ ನಮ್ಮ ಪೂರ್ವಜರು ಒಂದೇ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.