ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ ಶೆಟ್ಟರ್ ಬಿಜೆಪಿ ಸೇರ್ಪಡೆ ಆಗಿರುವುದು ನನಗೆ ವೈಯಕ್ತಿಕವಾಗಿ ಖುಷಿಯಾಗಿದೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಗದೀಶ ಶೆಟ್ಟರ್ ಪಕ್ಷವನ್ನ ತೊರೆದಿರುವುದು ನಮ್ಮ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ. ಬಿಜೆಪಿಗರಿಗೆ ಸಂತಸವಾಗಿದೆ ಎಂದು ತಿಳಿಸಿದರು.
ಏನನಿಸಿದೆಯೋ ಏನೋ ಗೊತ್ತಿಲ್ಲ. ಬಿಜೆಪಿ ಸೋಲುವ ಭೀತಿಯಿಂದ ಶೆಟ್ಟರ್‌ರನ್ನ ವಾಪಸ್ ಕರೆಸಿಕೊಂಡಿದೆ. ಹೇಳಬಾರದೆಲ್ಲಾ ಹೇಳ್ಕೊಂಡು ದೆಹಲಿಗೆ ಕರೆದೊಯ್ದು ಸೇರಿಸಿದ್ದು, ಬಿಜೆಪಿಯವರ ಪರಿಸ್ಥಿತಿ ಎಲ್ಲಿಗೆ ಬಂದಿದೆ ಅಂತಾ ಯೋಚಿಸಿದ್ದು, ಕಾಂಗ್ರೆಸ್ನವರು ಮನುಷ್ಯರನ್ನು ಪ್ರೀತಿ ಮಾಡುತ್ತೇವೆ ಎಂದಿದ್ದಾರೆ.ಬಿಜೆಪಿ ಹಾಗೂ ಶೆಟ್ಟರ್ ಅಂಡರ್ ಸ್ಟ್ಯಾಂಡಿಂಗ್ ಏನಾಗಿದ್ಯೋ ಗೊತ್ತಿಲ್ಲ. ಮಾಜಿ ಸಿಎಂ ಜಗದೀಶ್ ಶೆಟ್ಟರ್‌ಗೆ ಬಿಜೆಪಿಯಲ್ಲಿ ನೋವಾಗಿತ್ತು. ಖುಷಿಯಲ್ಲಿರಲಿ ಅಂತಾ ನಾವು ಜಗದೀಶ್ ಶೆಟ್ಟರ್‌ಗೆ ಸಹಾಯ ಮಾಡಿದ್ವಿ ಎಂದರು.
.ನಮ್ಮ ಪಕ್ಷದಲ್ಲಿ ಎಲ್ಲ ಸಮುದಾಯದವರೂ ಇದ್ದು, ಬಿಜೆಪಿಗೂ ನಮ್ಮ ಪಕ್ಷಕ್ಕೂ ಸಾಕಷ್ಟು ವ್ಯತ್ಯಾಸವಿದ್ದು, ಶೆಟ್ಟರ್ ಅವರ ಮೇಲೆ ನನಗೆ ಅಪಾರ ಗೌರವವಿದೆ. ಆದರೆ ಅವರು ಪಕ್ಷ ಬಿಟ್ಟು ಹೋದದ್ದು ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ. ನಮ್ಮದು ಡಬಲ್ ಡೆಕ್ಕರ್ ಬಸ್ ಎಂದು ಶೆಟ್ಟರ್ ಹೋಗಿರುವುದು ಸಂತೋಷ ಎಂದಿದ್ದಾರೆ.ಕಾರವಾರದಲ್ಲಿ ಮೀನುಗಾರಿಕೆ ಇಲಾಖೆ ಸಚಿವ ಮಂಕಾಳು ವೈದ್ಯ ಪ್ರತಿಕ್ರಿಯೆ ನೀಡಿದ್ದು, ಪಾಪ ಶೆಟ್ಟರ್‌ಗೆ ವಯಸ್ಸಾಗಿದೆ ಎಂದು ಸೂಚಿಸಿದರು.