ದೆಹಲಿ: ಈ ಹಿಂದೆ ಸದನದ ಯಾವುದೇ ಸದಸ್ಯರ ಮೇಲೆ ಭ್ರಷ್ಟಾಚಾರದ ಆರೋಪ ಬಂದರೆ ಎಲ್ಲರೂ ಅವರಿಂದ ದೂರವಾಗುತ್ತಿದ್ದರು. ಆದರೆ ಇಂದು ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾದ ಭ್ರಷ್ಟರನ್ನೂ ಸಾರ್ವಜನಿಕವಾಗಿ ವೈಭವೀಕರಿಸುವುದನ್ನು ನೋಡುತ್ತೇವೆ ಇದು ಕಾರ್ಯಾಂಗಕ್ಕೆ ಮಾಡಿದ ಅವಮಾನ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಆಲ್ ಇಂಡಿಯಾ ಪ್ರಿಸೈಡಿಂಗ್ ಆಫೀಸರ್ಸ್ ಕಾನ್ಫರೆನ್ಸ್ ಉದ್ದೇಶಿಸಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, “ಇಂದು ನಾವು ಮತ್ತೊಂದು ಬದಲಾವಣೆಗೆ ಸಾಕ್ಷಿಯಾಗಿದ್ದೇವೆ. ನ್ಯಾಯಾಂಗಕ್ಕೆ ಮಾಡಿದ ಅವಮಾನ, ಭಾರತದ ಶ್ರೇಷ್ಠ ಸಂವಿಧಾನಕ್ಕೆ ಮಾಡಿದ ಅವಮಾನಚರ್ಚೆ ಮತ್ತು ದೃಢವಾದ ಸಲಹೆಗಳು ಈ ವಿಷಯದ ಕುರಿತು ಈ ಸಮ್ಮೇಳನದಲ್ಲಿ ಭವಿಷ್ಯದ ಹೊಸ ರಸ್ತೆಗೆ ದಾರಿ ಮಾಡಿಕೊಡಲಿದೆ ಎಂದು ತಿಳಿಸಿದರು.
ಆಲ್ ಇಂಡಿಯಾ ಪ್ರಿಸೈಡಿಂಗ್ ಆಫೀಸರ್ಸ್ ಸಮ್ಮೇಳನಕ್ಕೆ ನಿಮ್ಮೆಲ್ಲರಿಗೂ ಶುಭಾಶಯಗಳು. ಈ ಬಾರಿಯ ಈ ಸಮ್ಮೇಳನ ಇನ್ನಷ್ಟು ವಿಶೇಷವಾಗಿದ್ದು, ಭಾರತದ 75ನೇ ಗಣರಾಜ್ಯೋತ್ಸವದ ನಂತರ ಈ ಸಮ್ಮೇಳನ ನಡೆಯುತ್ತಿದೆ. ನಮ್ಮ ಸಂವಿಧಾನವು 75 ವರ್ಷಗಳ ಹಿಂದೆ ಜನವರಿ 26 ರಂದು ಜಾರಿಗೆ ಬಂದಿತು.
ಅಂದರೆ ಸಂವಿಧಾನವೂ 75 ವರ್ಷಗಳನ್ನು ಪೂರೈಸುತ್ತಿದೆ. ದೇಶವಾಸಿಗಳ ಪರವಾಗಿ ನಾನು ಸಂವಿಧಾನ ರಚನಾ ಸಭೆಯ ಎಲ್ಲ ಸದಸ್ಯರಿಗೆ ಗೌರವಪೂರ್ವಕವಾಗಿ ನಮಿಸುತ್ತೇನೆ ಎಂದು ವಿವರಿಸಿದರು.