This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

National News

ವರ್ಷ ಮೊದಲ ಮನ್​ಕಿ ಬಾತ್​, ಮಹಿಳಾ ಸಶಕ್ತೀಕರಣ, ರಾಮ ಮಂದಿರ ಸೇರಿ ಹಲವು ವಿಷಯಗಳ ಬಗ್ಗೆ ಮೋದಿ ಮಾತು

ವರ್ಷ ಮೊದಲ ಮನ್​ಕಿ ಬಾತ್​, ಮಹಿಳಾ ಸಶಕ್ತೀಕರಣ, ರಾಮ ಮಂದಿರ ಸೇರಿ ಹಲವು ವಿಷಯಗಳ ಬಗ್ಗೆ ಮೋದಿ ಮಾತು

ಅಯೋಧ್ಯೆಯಲ್ಲಿ ನಡೆದ ರಾಮಲಲ್ಲಾ ಪ್ರಾಣಪ್ರತಿಷ್ಠಾ ಕಾರ್ಯಕ್ರಮವು ದೇಶದ ಕೋಟ್ಯಂತರ ಜನರನ್ನು ಬೆಸೆದಿದ್ದು, ಎಲ್ಲರ ಭಾವನೆಯೂ ಒಂದೇ , ಎಲ್ಲರ ಭಕ್ತಿಯೂ ಒಂದೇ, ಎಲ್ಲರ ಮಾತಿನಲ್ಲೂ ರಾಮನೇ ಇದ್ದಾನೆ. ನಾಡಿನ ಹಲವಾರು ಜನರು ರಾಮಭಜನೆಗಳನ್ನು ಹಾಡಿ ರಾಮನಿಗೆ ಸಮರ್ಪಿಸಿದ್ದು, ಜನವರಿ 22ರಂದು ಸಂಜೆ ಇಡೀ ದೇಶವು ರಾಮಜ್ಯೋತಿ ಬೆಳಗಿಸಿ ದೀಪಾವಳಿಯನ್ನು ಆಚರಿಸಿತು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಈ ವರ್ಷ ಮೊದಲ ಮನ್​ ಕಿ ಬಾತ್​ನಲ್ಲಿ ಮಾತನಾಡಿದ ಅವರು, ಗಣರಾಜ್ಯೋತ್ಸವ ಪರೇಡ್​ ತುಂಬಾ ಅದ್ಭುತವಾಗಿತ್ತು, ಕೇಂದ್ರ ಭದ್ರತಾ ಪಡೆಗಳು,ದೆಹಲಿ ಪೊಲೀಸರ ಮಹಿಳಾ ತುಕಡಿಗಳು ಕರ್ತವ್ಯದ ಹಾದಿಯಲ್ಲಿ ಸಾಗಲು ಪ್ರಾರಂಭಿಸದಾಗ ಎಲ್ಲರ ಮನಸ್ಸಿನಲ್ಲೂ ಹೆಮ್ಮೆ ಮೂಡಿದ್ದು,
ಈ ಬಾರಿ 13 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿ ನೀಡು ಗೌರವಿಸಲಾಗಿದೆ. ಬದಲಾಗುತ್ತಿರುವ ಭಾರತದಲ್ಲಿ ನಮ್ಮ ಹೆಣ್ಣುಮಕ್ಕಳು ಮತ್ತು ದೇಶದ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಅದ್ಭುತ ಸಾಧನೆ ಮಾಡುತ್ತಿದ್ದಾರೆ.

ಮೂರು ದಿನಗಳ ಹಿಂದೆ ದೇಶವು ಪದ್ಮ ಪ್ರಶಸ್ತಿಯನ್ನು ಘೋಷಿಸಿದ್ದು, ಇದರಲ್ಲಿ ತಳಮಟ್ಟದ ಜನರೊಂದಿಗೆ ಬೆರೆಯುವ ಮೂಲಕ ಸಮಾಜದಲ್ಲಿ ದೊಡ್ಡ ಬದಲಾವಣೆಯನ್ನು ತರಲು ಶ್ರಮಿಸಿದವರಿಗೆ ಪದ್ಮ ಗೌರವವನ್ನು ನೀಡಲಾಯಿತು.ಮಕರ ಸಂಕ್ರಾಂತಿಯಿಂದ ಜನವರಿ 22 ರವರೆಗೆ ಸ್ವಚ್ಛತಾ ಅಭಿಯಾನವನ್ನು ನಡೆಸುವಂತೆ ನಾನು ದೇಶದ ಜನರನ್ನು ವಿನಂತಿಸಿದ್ದೆ. ಲಕ್ಷಗಟ್ಟಲೆ ಜನರು ಭಕ್ತಿಯಿಂದ ಕೂಡಿ ತಮ್ಮ ಪ್ರದೇಶದ ಧಾರ್ಮಿಕ ಸ್ಥಳಗಳನ್ನು ಸ್ವಚ್ಛಗೊಳಿಸಿದ್ದು ನನಗೆ ಸಂತಸ ತಂದಿದೆ ಎಂದು ಸೂಚಿಸಿದರು.

Nimma Suddi
";