ನವದೆಹಲಿ: ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ನ ಮುಖ್ಯಸ್ಥರಾಗಿದ್ದ ರಾಣಾ ತಲ್ವಾರ್ ಶನಿವಾರ (ಜ. 27) ಮೃತಪಟ್ಟಿರುವ ಸುದ್ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ವರದಿಯಾಗಿದ್ದು, ಬೆಳಕಿಗೆ ಬಂದಿದೆ.
ರಾಣಾ ಅವರಿಗೆ 76 ವರ್ಷ ವಯಸ್ಸಾಗಿದ್ದು, ಪತ್ನಿ ರೇಣುಕಾ ಹಾಗೂ ಮಗ ರಾಹುಲ್ ಅವರನ್ನು ಅಗಲಿದ್ದಾರೆ. ಕೆಲ ಕಾಲದಿಂದ ರಾಣಾ ತಲ್ವಾರ್ ಅನಾರೋಗ್ಯದಿಂದ ಬಾಧಿತರಾಗಿದ್ದರು ಎನ್ನಲಾಗಿದ್ದು, ವರದಿ ಪ್ರಕಾರ ಇಂದು ಭಾನುವಾರ ದೆಹಲಿಯಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ರಾಣಾ ತಲ್ವಾರ್ ಅವರ ಪತ್ನಿ ರೇಣುಕಾ ಖ್ಯಾತ ಉದ್ಯಮಿ ಕೆಪಿ ಸಿಂಗ್ ಅವರ ಪುತ್ರಿ. ಕೆಪಿ ಸಿಂಗ್ ಅವರು ಡಿಎಲ್ಎಫ್ ಗ್ರೂಪ್ನ ಮಾಜಿ ಮುಖ್ಯಸ್ಥರೂ ಹೌದು. ಇನ್ನು, ತಲ್ವಾರ್ ಅವರ ಮಗ ರಾಹುಲ್ ಡಿಎಲ್ಎಫ್ ಸಂಸ್ಥೆಯಲ್ಲಿ ಪ್ರಮುಖ ಹುದ್ದೆಯಲ್ಲಿದ್ದಾರೆ.
ರಾಣಾ ತಲ್ವಾರ್ ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ಗೆ ಮುನ್ನ ಸಿಟಿ ಬ್ಯಾಂಕ್ನಲ್ಲಿ ಕೆಲಸ ಮಾಡಿದ್ದು, ಸೇಬರ್ ಕ್ಯಾಪಿಟಲ್ ಎಂಬ ಕಂಪನಿಯ ಸಂಸ್ಥಾಪಕ ಛೇರ್ಮನ್ ಮತ್ತು ಮ್ಯಾನೇಜಿಂಗ್ ಪಾರ್ಟ್ನರ್ ಕೂಡ ಆಗಿದ್ದರು.ರಾಣಾ ತಲ್ವಾರ್ ದೆಹಲಿಯಲ್ಲಿ ಎಕನಾಮಿಕ್ಸ್ ಪದವೀಧರರಾಗಿದ್ದಾರೆ. ಬಳಿಕ ಅವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಆರಂಭಿಸಿದ್ದರು ಎಂದು ಮಾಹಿತಿ ತಿಳಿದು ಬಂದಿದೆ.