ರಾಜ್ಯದಲ್ಲಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಅಡಿಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಈ ಹುದ್ದೆಗಳಿಗೆ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಹುದ್ದೆಗಳಿಗೆ ಆಯ್ಕೆ ಆದವರಿಗೆ ಆಕರ್ಷಕ ವೇತನವನ್ನು ನೀಡಲಾಗುತ್ತದೆ. ಹುದ್ದೆಗಳ ವಿವರ ಈ ಕೆಳಗಿನಂತಿದೆ.ನೇಮಕಾತಿ ಪ್ರಾಧಿಕಾರ : ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್, ಕರ್ನಾಟಕ
ಹುದ್ದೆಗಳ ಸಂಖ್ಯೆ : 11
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 05-02-2024
ಹುದ್ದೆಗಳ ವಿವರ
ಜಿಲ್ಲಾ ನಿರ್ವಹಣಾಧಿಕಾರಿ – ಫಾರ್ಮ್ ಲೈವ್ಲಿಹುಡ್
ಆಫೀಸ್ ಅಸಿಸ್ಟಂಟ್
ಕ್ಲಸ್ಟರ್ ಸೂಪರ್‌ವೈಸರ್ – ಕೌಶಲ
ಬ್ಲಾಕ್ ಮ್ಯಾನೇಜರ್ – ನಾನ್ – ಫಾರ್ಮ್ ಲೈವ್ಲಿಹುಡ್
ಕ್ಲಸ್ಟರ್ ಸೂಪರ್‌ವೈಸರ್
1500 ಗ್ರಾಮ ಲೆಕ್ಕಾಧಿಕಾರಿ, 500 ಸರ್ವೇಯರ್, 60 ಎಡಿಎಲ್‌ಆರ್ ನೇಮಕಾತಿ ಸಾಧ್ಯತೆ
ವಿದ್ಯಾರ್ಹತೆ : ಪಿಯುಸಿ / ಬಿಇ / ಬಿ.ಟೆಕ್ / ಎಂಎಸ್ಸಿ / ಎಂಟೆಕ್ / ಇತರೆ ಪದವಿ.
ನೇಮಕಾತಿ ವಿಧಾನ : ಲಿಖಿತ ಪರೀಕ್ಷೆ / ಸಂದರ್ಶನ ವಿಧಾನ.
ಅರ್ಜಿ ಸಲ್ಲಿಸುವ ವಿಧಾನ
– ವೆಬ್‌ಸೈಟ್ ವಿಳಾಸ https://jobsksrlps.karnataka.gov.in ಗೆ ಭೇಟಿ ನೀಡಿ.
– ತೆರೆದ ವೆಬ್‌ಪೇಜ್‌ನಲ್ಲಿ ಹುದ್ದೆಗಳ ಹೆಸರು, ಸಂಖ್ಯೆ, ಅರ್ಜಿಗೆ ಕೊನೆ ದಿನಾಂಕ, ಅರ್ಜಿ ಸಲ್ಲಿಸಲು ಲಿಂಕ್, ಹುದ್ದೆಯ ವಿಳಾಸ ಇರುತ್ತದೆ.
– ನಿಮ್ಮ ಆಯ್ಕೆಯ ಹುದ್ದೆ ಮುಂದೆ ‘View / Apply’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ನಂತರ ತೆರೆಯುವ ವೆಬ್‌ಪೇಜ್‌ನಲ್ಲಿ ಸದರಿ ಹುದ್ದೆಗೆ ಅರ್ಹತೆ, ಇತರೆ ವಿವರ ಪ್ರದರ್ಶಿತವಾಗುತ್ತದೆ.
– ಗಮನದಿಂದ ಓದಿಕೊಳ್ಳಿ. ನಂತರ ಅರ್ಜಿ ಸಲ್ಲಿಸಿ.
– ನಂತರ ಮುಂದಿನ ರೆಫರೆನ್ಸ್‌ಗಾಗಿ ಪ್ರಿಂಟ್ ತೆಗೆದುಕೊಳ್ಳಿ.