ವಾರಣಾಸಿ: ಗ್ಯಾನ್‌ವಾಪಿ ಮಸೀದಿಯಲ್ಲಿ ಹಿಂದೂಗಳು ಪೂಜೆ ಸಲ್ಲಿಸಲು ಅವಕಾಶ ನೀಡಿದ ವಾರಣಾಸಿ ಜಿಲ್ಲಾ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ನಿರಾಕರಿಸಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಮಸೀದಿಯಲ್ಲಿ ಪೂಜೆ ನಿರಾತಂಕವಾಗಿ ಸಾಗಲಿದೆ.ಗ್ಯಾನ್‌ವಾಪಿ ಮಸೀದಿ ಸಂಕೀರ್ಣದಲ್ಲಿ ಇರುವ ವ್ಯಾಸ್ ತೆಹ್‌ಖಾನಾ (ವ್ಯಾಸ ಮಾಳಿಗೆ) ಎಂಬಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಕೋರಿ ಹಿಂದೂ ಪರ ವಕೀಲರು ಸಲ್ಲಿಸಿದ್ದ ಮನವಿಯನ್ನು ವಾರಣಾಸಿ ಕೋರ್ಟ್ ಮಾನ್ಯ ಮಾಡಿದ್ದು, ಕೋರ್ಟ್ ತೀರ್ಪು ಹೊರ ಬಿದ್ದ ಕೂಡಲೇ ಪೂಜೆ ಪುನಸ್ಕಾರಗಳು ಆರಂಭಗೊಂಡಿದ್ದವು.
ವಾರಣಾಸಿ ಕೋರ್ಟ್‌ನ ಆದೇಶ ಪ್ರಶ್ನಿಸಿ ಮುಸ್ಲಿಂ ಪರ ವಕೀಲರು ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಲು ತೀರ್ಮಾನಿಸಿದ್ದು, ಗ್ಯಾನ್‌ವಾಪಿ ಮಸೀದಿ ಸಂಕೀರ್ಣದಲ್ಲಿ ಇರುವ ವ್ಯಾಸ್ ತೆಹ್‌ಖಾನಾ (ವ್ಯಾಸ ಮಾಳಿಗೆ) ಎಂಬಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಕೋರಿ ಹಿಂದೂ ಪರ ವಕೀಲರು ಸಲ್ಲಿಸಿದ್ದ ಮನವಿಯನ್ನು ವಾರಣಾಸಿ ಕೋರ್ಟ್ ಮಾನ್ಯ ಮಾಡಿತ್ತು.
ಹೀಗಾಗಿ, ಕೋರ್ಟ್ ತೀರ್ಪು ಹೊರ ಬಿದ್ದ ಕೂಡಲೇ ಪೂಜೆ ಪುನಸ್ಕಾರಗಳು ಆರಂಭಗೊಂಡಿದ್ದು, ವಾರಣಾಸಿ ಕೋರ್ಟ್‌ನ ಆದೇಶ ಪ್ರಶ್ನಿಸಿ ಮುಸ್ಲಿಂ ಪರ ವಕೀಲರು ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಲು ತೀರ್ಮಾನಿಸಿದ್ದರು ಎಂದು ಮಾಹಿತಿ ಕಂಡು ಬಂದಿದೆ.