ನವದೆಹಲಿ: ನಾವು ಯಾವುದೇ ಕಾರಣಕ್ಕೂ ಬಿಜೆಪಿ ಸೇರೋದಿಲ್ಲ, ಇದು ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.
ಎಎಪಿ ಶಾಸಕರ ಕುದುರೆ ವ್ಯಾಪಾರ ಆರೋಪ ಮಾಡಿದ್ದ ಕೇಜ್ರಿವಾಲ್, ಬಿಜೆಪಿ ವಿರುದ್ದ ಮತ್ತೆ ವಾಕ್ಸಮರ ಸಾರಿದ್ದಾರೆ.ನಮ್ಮ ಪಕ್ಷಕ್ಕೆ ಸೇರಿ ಎಂದು ಬಿಜೆಪಿ ಆಹ್ವಾನ ನೀಡಿತ್ತು ಎಂದು ಪುನಃ ಆರೋಪ ಮಾಡಿರುವ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್, ಈ ಆರೋಪ ಪ್ರಕರಣ ಸಂಬಂಧ ತನಿಖೆ ನಡೆಸಲು ಮುಂದಾಗಿರುವ ಪೊಲೀಸರ ವಿರುದ್ಧವೂ ಆಕ್ರೋಶ ಹೊರ ಹಾಕಿದ್ದಾರೆ.
ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಹಾಗೂ ಸಚಿವೆ ಅತಿಶಿ ಅವರು ಜನವರಿ 27 ರಂದು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಎಎಪಿ ಶಾಸಕರನ್ನು ಸೆಳೆಯಲು ಬಿಜೆಪಿ ತಲಾ 25 ಕೋಟಿ ರೂಪಾಯಿ ಲಂಚದ ಆಮಿಷ ಒಡ್ಡಿದ್ದು, ಜೊತೆಯಲ್ಲೇ ಮುಂದಿನ ವರ್ಷ ನಡೆಯಲಿರುವ ದಿಲ್ಲಿ ವಿಧಾನಸಭಾ ಚುನಾವಣೆ ಟಿಕೆಟ್ ನೀಡೋದಾಗಿಯೂ ಹೇಳಿದೆ ಎಂದು ಆರೋಪಿಸಿದ್ದರು.
ಬಿಜೆಪಿ ವಿರುದ್ಧ ಕುದುರೆ ವ್ಯಾಪಾರದ ಆರೋಪ ಮಾಡಿದ್ದ ಅರವಿಂದ ಕೇಜ್ರಿವಾಲ್ ಹಾಗೂ ಸಚಿವೆ ಅತಿಶಿ ಅವರಿಗೆ ದಿಲ್ಲಿ ಕ್ರೈಂ ಬ್ರಾಂಚ್ ನೋಟಿಸ್ ಜಾರಿ ಮಾಡಿದ್ದು, ತಾವು ಮಾಡಿರುವ ಆರೋಪ ಸಂಬಂಧ ಸಾಕ್ಷ್ಯಾಧಾರ ಕೊಡಿ ಎಂದು ಕೇಳಿತ್ತು. ನಿಮಗೆ ಲಂಚ ಕೊಡಲು ಕೇಳಿದವರ ಮಾಹಿತಿ ನಮಗೆ ನೀಡಿ, ನಾವು ಗೌಪ್ಯವಾಗಿ ಇಡುತ್ತೇವೆ ಎಂದೂ ಪೊಲೀಸರು ಸೂಚಿಸಿದ್ದಾರೆ.