ಚಂಡೀಗಢ : ರೈತರು ಮತ್ತು ಕೇಂದ್ರ ಸರ್ಕಾರದ ನಡುವಿನ ಮಾತುಕತೆ ವಿಫಲವಾಗಿರುವುದಕ್ಕೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕಾರಣ ಎಂದು ಪಂಜಾಬ್ ಬಿಜೆಪಿ ಮುಖ್ಯಸ್ಥ ಸುನೀಲ್ ಜಾಖರ್ ಮಂಗಳವಾರ ತಿಳಿಸಿದರು.
“ಭಗವಂತ್ ಮಾನ್ ರೈತರ ಪರವಾಗಿರುವ ಎಲ್ಲಾ ಜನರೊಂದಿಗಿನ ಈ ಮಾತುಕತೆಗಳು ವಿಫಲಗೊಳ್ಳಲು ಉದ್ದೇಶಿಸಿದ್ದರು. ಏಕೆಂದರೆ ಈ ಮಾತುಕತೆ ವಿಫಲವಾದರೆ ಸಿಎಂ ಮಾನ್ ಅವರು ಎಲ್ಲವನ್ನೂ ಪಡೆಯುತ್ತಾರೆ” ಎಂದು ಜಾಖರ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಬರೆದಿದ್ದಾರೆ ಎಂದರು.
ಹೀಗೆ ಮಾಡಿದಾಗ ಅವರಿಗೆ (ಮಾನ್ ) ಕೇಂದ್ರ ಸರ್ಕಾರವನ್ನು ಕೆಟ್ಟದಾಗಿ ತೋರಿಸಲು ಸಾಧ್ಯವಾಗುತ್ತದೆ. ಈ ಮೂಲಕ ಆರಂಭದಲ್ಲಿ ಚಂಡೀಗಢಕ್ಕೆ ಮೆರವಣಿಗೆ ಮಾಡಲು ಬಯಸಿದ್ದ ರೈತರನ್ನು ದೆಹಲಿಗೆ ಮರುನಿರ್ದೇಶಿಸಬಹುದು. ಪರಿಹಾರ ಕಂಡುಹಿಡಿಯಲು ರೈತರು ಮತ್ತು ಕೇಂದ್ರ ಸಚಿವರ ತಂಡದ ಪ್ರಾಮಾಣಿಕ ಪ್ರಯತ್ನಗಳಿಗೆ ಧಕ್ಕೆ ತರುವ ಮೂಲಕ ಮಾನ್ ಈ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ ಎಂದು ದೂಷಿಸಿದರು.
ಅಂತಹ ವ್ಯಕ್ತಿಗೆ ರೈತರನ್ನು ಪ್ರತಿನಿಧಿಸಲು ಅಧಿಕಾರ ನೀಡಿದವರು ಯಾರು ಎಂದು ಪಂಜಾಬ್ನವರು ಚಿಂತಿಸುತ್ತಿದ್ದು, ಅವರು ತಮ್ಮ ಸರ್ಕಾರ ರಚನೆಯಾದ ಐದು ನಿಮಿಷಗಳಲ್ಲಿ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ನೀಡುವ ಭರವಸೆಯಿಂದ ಹಿಂದೆ ಸರಿದು ಮೋಸ ಮಾಡಿದ್ದು, ಅದೇ ರೀತಿ ಪ್ರವಾಹದಿಂದಾದ ಹಾನಿಗೆ ಪರಿಹಾರ ನೀಡದೆ ಪಂಜಾಬ್ ರೈತರನ್ನು ವಂಚಿಸಿದರು ಎಂದು ಸೂಚಿಸಿದರು.