ಛಿಂದ್ವಾರಾ: ತಾನು ಬಿಜೆಪಿಗೆ ಸೇರಲಿದ್ದೇನೆ ಎಂಬ ವದಂತಿಯನ್ನು ಕಮಲ್ ನಾಥ್ ತಳ್ಳಿಹಾಕಿದ ಒಂದು ದಿನದ ನಂತರ, ಕಾಂಗ್ರೆಸ್ ಹಿರಿಯ ನಾಯಕ ಬುಧವಾರ ಪಕ್ಷದ ಕಾರ್ಯಕರ್ತರನ್ನುದ್ದೇಶಿ, ನಾನು ನಿಮ್ಮ ಮೇಲೆ ಹೇರಿಕೆಯಾಗುವುದಿಲ್ಲ, ನೀವು ಬಯಸಿದರೆ ನಾನು ಪಕ್ಷ ತೊರೆಯುತ್ತೇನೆ ಎಂದು ತಿಳಿಸಿದರು.
ಮಧ್ಯಪ್ರದೇಶದ ತಮ್ಮ ತವರು ಛಿಂದ್ವಾರಾದ ಹರಾಯ್‌ನಲ್ಲಿ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ 77 ವರ್ಷದ ನಾಯಕ, ನಾನು ಹಲವು ವರ್ಷಗಳಿಂದ ನಿಮ್ಮ ಪ್ರೀತಿ ಮತ್ತು ವಿಶ್ವಾಸವನ್ನು ಗಳಿಸಿದ್ದೇನೆ ಎಂದು ಹೇಳಿದರು.
“ಕಮಲ್ ನಾಥ್ ಅವರಿಗೆ ಬೀಳ್ಕೊಡಲು ಬಯಸಿದರೆ, ಅದು ನಿಮ್ಮ ಆಯ್ಕೆಯಾಗಿದೆ. ನಾನು ಹೊರಡಲು ಸಿದ್ಧ. ನಾನು ಹೇರಿಕೆಯಾಗಲು ಬಯಸುವುದಿಲ್ಲ. ಇದು ನಿಮ್ಮ ಆಯ್ಕೆಯ ವಿಷಯ” . ಕಮಲ್ ನಾಥ್ ಅವರ ಪುತ್ರ ನಕುಲ್ ನಾಥ್ ಅವರು ಛಿಂದ್ವಾರಾ ಲೋಕಸಭಾ ಕ್ಷೇತ್ರದಿಂದ ಸದಸ್ಯರಾಗಿದ್ದಾರೆ ಎಂದರು.
ಈ ಸ್ಥಾನದಿಂದ ನಕುಲ್ ಮತ್ತೆ ಸ್ಪರ್ಧಿಸಲಿದ್ದಾರೆ ಎಂದು ಹಿರಿಯ ನಾಯಕ ಕಮಲ್ ನಾಥ್ ಈಗಾಗಲೇ ಘೋಷಿಸಿದ್ದು, ಛಿಂದ್ವಾರಾ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುವ ಹಿರಿಯ ರಾಜಕಾರಣಿ, ಬಿಜೆಪಿ ಇಲ್ಲಿ ಆಕ್ರಮಣಕಾರಿಯಾಗಿ ಯೋಚಿಸುತ್ತಿದ್ದು, ಆದರೆ ಕಾಂಗ್ರೆಸ್ ಕಾರ್ಯಕರ್ತರು ಭಯಪಡಬಾರದು ಎಂದು ಹೇಳಿದರು. ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ನಾವು ಮತ ಚಲಾಯಿಸಬೇಕು. ನಿಮ್ಮೆಲ್ಲರ ಮೇಲೆ ನನಗೆ ನಂಬಿಕೆ ಇದೆ ಎಂದು ವಿವರಿಸಿದರು.