ಬೆಂಗಳೂರು : ತಿರುಪತಿ ವೆಂಕಟೇಶ್ವರನ ದರ್ಶನಕ್ಕೆ ತೆರಳುವ ಭಕ್ತರಿಗೆ ಕರ್ನಾಟಕ ಸರ್ಕಾರ ಗುಡ್ ನ್ಯೂಸ್ ಒಂದನ್ನು ನೀಡಿದ್ದು, ತಿರುಮಲದಲ್ಲಿ ಕರ್ನಾಟಕದ ಭಕ್ತರಿಗೆ ತಂಗಲು ಅನುಕೂಲ ಮಾಡಿಕೊಡುವ ವಸತಿ ಗೃಹಗಳ ಸಮುಚ್ಚಯದ ಮೊದಲ ಹಂತದ ಬ್ಲಾಕ್- 2ನಲ್ಲಿ 176 ಕೊಠಡಿಗಳನ್ನು ಉದ್ಘಾಟಿಸಲಾಗಿದೆ.
ಇವು ಹವಾನಿಯಂತ್ರಿತ ಕೊಠಡಿಗಳಾಗಿದ್ದು, ಶೀಘ್ರವೇ ಭಕ್ತರ ಬಳಕೆಗೆ ದೊರೆಯಲಿದ್ದು, ಆನ್‌ಲೈನ್ ಮೂಲಕ ಬುಕ್ಕಿಂಗ್‌ಗೆ ಅವಕಾಶ ನೀಡಲಾಗುತ್ತದೆ.ತಿರುಪತಿಗೆ ತೆರಳುವ ಭಕ್ತರಿಗೆ ತಂಗಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಅಲ್ಲಿ ನಾಲ್ಕು ಬ್ಲಾಕ್‌ಗಳಲ್ಲಿ ಕೊಠಡಿಗಳ ನಿರ್ಮಾಣ ಮತ್ತು ನವೀಕರಣ ಮಾಡಲಾಗುತ್ತಿದೆ. ಇದು ಅವರವರ ಆರ್ಥಿಕ ಸಾಮರ್ಥ್ಯಕ್ಕೆ ಅನಗುಣವಾಗಿ ಕೊಠಡಿಗಳನ್ನು ಕಲ್ಪಿಸಲು ಸಾಮಾನ್ಯ ಮತ್ತು ಹವಾನಿಯಂತ್ರಿತ ಕೊಠಡಿಗಳನ್ನು ನಿರ್ಮಿಸಲಾಗಿದೆ.
2ನೇ ಬ್ಲಾಕ್‌ನಲ್ಲಿ 112 ಹವಾನಿಯಂತ್ರಿತ ಕೊಠಡಿಗಳನ್ನು ನಿರ್ಮಿಸಲಾಗಿದ್ದು, ಹೋಮದ ಮೂಲಕ ಪೂಜೆ ಸಲ್ಲಿಸಲಾಯಿತು.ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಎಸ್‌ಆರ್ ವಿಶ್ವನಾಥ್, ಮುಜರಾಯಿ ಇಲಾಖೆಯ ಮುಖ್ಯ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಠಾರಿಯ ಮತ್ತಿತರರು ಭಾಗವಹಿಸಿದ್ದರು. ಶೀಘ್ರದಲ್ಲೇ ಆನ್‌ಲೈನ್ ಬುಕ್ಕಿಂಗ್ ಮೂಲಕ ಭಕ್ತರ ಬಳಕೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಧಾರ್ಮಿಕ ದತ್ತಿ ಇಲಾಖೆ ಆಯುಕ್ತ ಎಚ್ ಬಸವರಾಜೇಂದ್ರ ತಿಳಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.