ಮಹಾಶಿವರಾತ್ರಿಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಶೈವ ಭಕ್ತರು ಶಿವನ ಪವಿತ್ರವಾದ ಸ್ಥಳಗಳಿಗೆ ಹೋಗುವ ಮೂಲಕ ಶಿವನ ಪ್ರೀತಿಗೆ ಪಾತ್ರರಾಗುತ್ತಾರೆ. ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೆ ಅಸಂಖ್ಯಾತ ಶೈವ ಕ್ಷೇತ್ರಗಳಿವೆ.ತಮಿಳುನಾಡು ರಾಜ್ಯದ ಮಹಾಬಲಿಪುರಂ ಅತ್ಯಂತ ಸೊಗಸದಾದ ಪಾರಂಪರಿಕ ತಾಣವಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಮಹಾ ಶಿವರಾತ್ರಿಯ ಸಮಯದಲ್ಲಿ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಭೇಟಿ ನೀಡುವ ಸ್ಥಳಗಳಲ್ಲಿ ಒಂದಾಗಿದೆ. ಮುಖ್ಯವಾಗಿ ತೀರದಲ್ಲಿ ನೆಲೆಸಿರುವ ಶೋರ್ ಟೆಂಪಲ್ ಬಹಳ ಜನಪ್ರಿಯವಾಗಿದೆ. ಇದು ತಮಿಳುನಾಡಿನ ಪ್ರಸಿದ್ಧ ಕಲ್ಲಿನ ದೇವಾಲಯಗಳಲ್ಲಿ ಒಂದಾಗಿದ್ದು, ಹೆಚ್ಚಿನ ಭಕ್ತರು ಶೋರ್ ದೇವಸ್ಥಾನದಲ್ಲಿ ಪ್ರಾರ್ಥನೆ ಮತ್ತು ಸ್ತೋತ್ರಗಳನ್ನು ಪಠಿಸುತ್ತಾ ಸಮಯವನ್ನು ಕಳೆಯುತ್ತಾರೆಕರ್ನಾಟಕ ರಾಜ್ಯದ ಗೋಕರ್ಣ ಮಹಾಶಿವರಾತ್ರಿಯನ್ನು ಆಚರಿಸಲು ಸೂಕ್ತವಾದ ಕ್ಷೇತ್ರವಾಗಿದೆ.
ಇಲ್ಲಿ ಸ್ಥಳೀಯರು ಮಹಾ ಶಿವರಾತ್ರಿಯನ್ನು ವಿಜೃಂಭಣೆಯಿಂದ ಮತ್ತು ವೈಭವದಿಂದ ಆಚರಿಸುತ್ತಾರೆ. ಆತ್ಮಲಿಂಗದ ಆವಾಸಸ್ಥಾನವಾದ ಗೋಕರ್ಣವು ಕರ್ನಾಟಕದ ಮೋಕ್ಷದ ಏಳು ಪವಿತ್ರ ಸ್ಥಳಗಳಲ್ಲಿ ಒಂದಾಗಿದೆ. ಬೀಚ್ ಪ್ರಿಯರು ಗೋಕರ್ಣದ ಸ್ಥಳಗಳಲ್ಲಿ ಕಾಲ ಕಳೆಯಲು ಹೆಚ್ಚು ಆದ್ಯತೆ ಕೊಡುತ್ತಾರೆ
ಜನರು ಹೆಚ್ಚಾಗಿ ಸಂದರ್ಶಿಸುವ ಸ್ಥಳಗಳಲ್ಲಿ ಮುರುಡೇಶ್ವರ ಕೂಡ ಒಂದಾಗಿದೆ. ಇದು ಕರ್ನಾಟಕದ ಪ್ರಮುಖ ಯಾತ್ರಾ ಸ್ಥಳವಾಗಿದೆ. ಮೂರು ಕಡೆ ಅರಬ್ಬಿ ಸಮುದ್ರದ ನೀರಿನಿಂದ ಆವೃತವಾಗಿರುವ ಈ ಸೊಗಸಾದ ಸ್ಥಳವು ವಿಶ್ವದ ಎರಡನೇ ಅತಿ ಎತ್ತರದ ಶಿವನ ಪ್ರತಿಮೆಗೆ ನೆಲೆಯಾಗಿದೆ. ಸಮುದ್ರ ತೀರದಲ್ಲಿ ಕಾಲ ಕಳೆಯಲು ಮುರುಡೇಶ್ವರ ಅತ್ಯಂತ ಸೂಕ್ತವಾದ ಆಯ್ಕೆಯಾಗಿದೆ
ತಮಿಳುನಾಡು ರಾಜ್ಯದಲ್ಲಿರುವ ತಂಜಾವೂರು ಮಹಾಶಿವನಿಗೆ ಸಮರ್ಪಿತವಾದ ಆಲಯವನ್ನು ಹೊಂದಿದೆ. ಅದು ಮತ್ಯಾವುದೂ ಅಲ್ಲ, ಬೃಹದೇಶ್ವರ ದೇವಾಲಯ. ಅಲ್ಲದೆ, ಇದು ತಮಿಳುನಾಡಿನ ಅತಿದೊಡ್ಡ ಮತ್ತು ಅತಿ ಹೆಚ್ಚು ಭೇಟಿ ನೀಡುವ ದೇವಾಲಯಗಳಲ್ಲಿ ಒಂದಾಗಿದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ತಂಜಾವೂರಿನ ಈ ಆಲಯಕ್ಕೆ ದಕ್ಷಿಣ ಭಾರತ ಸೇರಿದಂತೆ ಅನೇಕ ಭಾಗಗಳಿಂದ ಭೇಟಿ ನೀಡುತ್ತಾರೆ