ಟೈಮ್ಸ್ ಸಮೂಹದ ಪ್ರಮುಖ ಮರಾಠಿ ಪತ್ರಿಕೆ ‘ಮಹಾರಾಷ್ಟ್ರ ಟೈಮ್ಸ್’ ಮುಂಬೈನ ‘ಟೈಮ್ಸ್ ಆಫ್ ಇಂಡಿಯಾ’ ಕಟ್ಟಡದ ಮುಂಭಾಗದಲ್ಲಿ ಮಹಾರಾಷ್ಟ್ರದ ಎಲ್ಲಾ ಕಲಾ ಪ್ರಕಾರಗಳು, ಪ್ರದರ್ಶನ ಕಲೆಗಳು ಮತ್ತು ಶ್ರೀಮಂತ ಐತಿಹಾಸಿಕ, ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ 3 ದಿನಗಳ ಬೀದಿ ಕಲಾ ಉತ್ಸವ ‘ಮೈಮರಾಠಿ… ಉತ್ಸವ್ ಮರಾಠಿಚಾ’ ಅನ್ನು ಆಯೋಜಿಸಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಮರಾಠಿ ಚಿತ್ರರಂಗದ ಗಣ್ಯರಾದ ಮಹೇಶ್ ಮಂಜರೇಕರ್, ಶೆರಿಯಾಸ್ ತಲ್ಪಾಡೆ, ಸುನಿಲ್ ಬಾರ್ವೆ ಮತ್ತು ಗೌರಿ ಇಂಗಾವ್ಲೆ ಅವರೊಂದಿಗೆ ಪ್ರದರ್ಶನಗಳಿಗೆ ಸುತ್ತು ಹಾಕಿದ ಸಮೀರ್ ಜೈನ್, ವಿವರವಾದ ಮಾಹಿತಿಗಳನ್ನು ಪಡೆದುಕೊಂಡರು. ಸಂದರ್ಭದಲ್ಲಿ ಜೆಜೆ ಸ್ಕೂಲ್ ಆಫ್ ಆರ್ಟ್ ವಿದ್ಯಾರ್ಥಿಗಳು ರಚಿಸಿದ ಛತ್ರಪತಿ ಶಿವಾಜಿ ಮಹಾರಾಜರ ಶಿಲ್ಪಕ್ಕೆ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಮಹಾರಾಷ್ಟ್ರದ ಐತಿಹಾಸಿಕ ಮತ್ತು ಶ್ರೀಮಂತ ಪರಂಪರೆಯ ವಿಷಯಗಳನ್ನು ಆಧರಿಸಿ ಕಟ್ಟಡದ ಮೇಲೆ ತೂಗುಹಾಕಿದ ಚಿತ್ರಗಳನ್ನೂ ಇದೇ ಸಂದರ್ಭದಲ್ಲಿ ಗಣ್ಯರು ವೀಕ್ಷಿಸಿದರು. ಭಾವಚಿತ್ರಗಳು, ವರ್ಣಚಿತ್ರಗಳು ಮತ್ತು ಇತರ ಹಲವು ಪ್ರಕಾರಗಳ ಕಲೆಗಳನ್ನು ಇಲ್ಲಿ ಪ್ರದರ್ಶಿಸಲಾಗಿತ್ತು. ನಂತರ ಸಮೀರ್ ಜೈನ್ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ವಂದಿಸಿದರು.