This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Entertainment News

ದುಸ್ವಪ್ನವಾದ ವಿಚಿತ್ರ ಕಾಯಿಲೆ, ವಿಚ್ಛೇದನದ ಬಗ್ಗೆ ಮಾಹಿತಿ ನೀಡಿದ ನಟಿ ಸಮಂತಾ

ದುಸ್ವಪ್ನವಾದ ವಿಚಿತ್ರ ಕಾಯಿಲೆ, ವಿಚ್ಛೇದನದ ಬಗ್ಗೆ ಮಾಹಿತಿ ನೀಡಿದ ನಟಿ ಸಮಂತಾ

ಸಮಂತಾ ರುತ್​ ಪ್ರಭು ಅವರು ಏಳು-ಬೀಳಿನ ಸಮಯದಲ್ಲಿ ಸ್ಟ್ರಾಂಗ್ ಆಗಿ ನಡೆದುಕೊಂಡಿದ್ದಾರೆ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟ ಆಗಿದ್ದು, ಸಮಂತಾ ಅವರು ಬೇಡಿಕೆಯ ನಟಿ. ಸಿನಿಮಾ ಕೆಲಸಗಳ ಜೊತೆ ಅವರು ವೈಯಕ್ತಿಕವಾಗಿಯೂ ಸುದ್ದಿ ಆಗುತ್ತಾ ಇರುತ್ತಾರೆ.

ಹಲವು ವರ್ಷಗಳ ಕಾಲ ನಾಗ ಚೈತನ್ಯ ಜೊತೆ ಅವರು ಪ್ರೀತಿಯಲ್ಲಿ ಇದ್ದರು. ಅವರಿಂದ ಸಮಂತಾ ದೂರ ಆಗುತ್ತಾರೆ ಎನ್ನುವ ವಿಚಾರ ಅನೇಕರಿಗೆ ಶಾಕಿಂಗ್ ಎನಿಸಿದ್ದು, 2021ರ ಅಕ್ಟೋಬರ್ ತಿಂಗಳಲ್ಲಿ ಇವರು ಬೇರೆ ಆದರು. ಈ ಬಗ್ಗೆ ಸಮಂತಾ ಮಾತನಾಡಿದ್ದು ಕಡಿಮೆ.

ಈಗ ಓಪನ್ ಆಗಿ ಅವರು ಎಲ್ಲದರ ಬಗ್ಗೆ ಹೇಳಿಕೊಂಡಿದ್ದು, ಈ ಸಮಸ್ಯೆಯನ್ನು (ಮಯೋಸೈಟಿಸ್) ಎದುರಿಸುವ ಹಿಂದಿನ ವರ್ಷದ ಘಟನೆಯನ್ನು ನಾನು ಹೇಳುತ್ತೇನೆ. ಅದು ನನಗೆ ಅತ್ಯಂತ ಕಷ್ಟಕರವಾದ ವರ್ಷವಾಗಿತ್ತು’ ಎಂದು ಸಮಂತಾ ಹೇಳಿದ್ದಾರೆ. ಈ ಮೂಲಕ ಅದು ವಿಚ್ಛೇದನದ ಬಗ್ಗೆ ಇರಬಹುದು ಎಂದು ಫ್ಯಾನ್ಸ್ ಊಹಿಸಿದ್ದಾರೆ. ‘

ನನ್ನ ಮ್ಯಾನೇಜರ್ ಹಿಮಾಂಕ್ ಮತ್ತು ನಾನು ಮುಂಬೈನಿಂದ ಹಿಂತಿರುಗುತ್ತಿದ್ದ ದಿನ ಅದು. ನನಗೆ ಬಹಳ ಸಮಯದಿಂದ ಶಾಂತಿ ಎಂಬುದೇ ಇರಲಿಲ್ಲ. ಅಂತಿಮವಾಗಿ ನಾನು ಹಾಯಾಗಿ ನಿದ್ರೆ ಮಾಡಬಹುದು ಎಂದು ನನಗೆ ಅನಿಸಿತ್ತು. ಹೀಗೆ ಎಂದುಕೊಳ್ಳುವಾಗಲೇ ನನಗೆ ಮಯೋಸೈಟಿಸ್ ಕಾಣಿಸಿಕೊಂಡಿತು’ ಎಂದು ಸಮಂತಾ ಹೇಳಿದ್ದಾರೆ.

ಈ ಕಾಯಿಲೆಯಿಂದ ಸಮಂತಾ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ.ವಿಚ್ಛೇದನ ವಿಚಾರ: ಸಮಂತಾ ಹಾಗೂ ನಾಗ ಚೈತನ್ಯ ಕೆಲವು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಇವರದ್ದು ಹಿಟ್ ಕಾಂಬಿನೇಷನ್. ಹಲವು ವರ್ಷಗಳ ಕಾಲ ಪ್ರೀತಿಸಿದ ಈ ಜೋಡಿ 2017ರಲ್ಲಿ ವಿವಾಹ ಆಯಿತು. ಮದುವೆ ಬಳಿಕ ಇವರು ನಾಲ್ಕು ವರ್ಷಗಳ ಕಾಲ ಸಂಸಾರ ನಡೆಸಿದರು.

2021ರಲ್ಲಿ ಇವರು ಬೇರೆ ಆಗುವ ನಿರ್ಧಾರ ಘೋಷಣೆ ಮಾಡಿದರು. ಇದು ಅನೇಕರಿಗೆ ಬೇಸರ ತರಿಸಿತು. ಸಮಂತಾ ಹಾಗೂ ನಾಗ ಚೈತನ್ಯ ಬೇರೆ ಆಗಲು ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ವಿಚ್ಛೇದನದ ಬಳಿಕ ಸಮಂತಾ ಸಾಕಷ್ಟು ಅಧ್ಯಾತ್ಮ ಕೇಂದ್ರಗಳಿಗೆ ಭೇಟಿ ನೀಡಿ ಬಂದಿದ್ದಾರೆ.

ನಟಿ ಸಮಂತಾ ಅವರು ರಾಜ್ ಹಾಗೂ ಡಿಕೆ ನಿರ್ದೇಶನದ ‘ದಿ ಫ್ಯಾಮಿಲಿ ಮ್ಯಾನ್ 2’ ಸೀರಿಸ್​ನಲ್ಲಿ ನಟಿಸಿದ್ದರು. ಆ ಬಳಿಕ ಅವರು ಮತ್ತೆ ಒಂದಾಗಿದ್ದು ‘ಸಿಟಾಡೆಲ್’ ಸೀರಿಸ್​ಗೆ. ಇಂಗ್ಲಿಷ್ ‘ಸಿಟಾಡೆಲ್’ನ ಇಂಡಿಯನ್ ವರ್ಷನ್ ಇದು. ಈ ಚಿತ್ರದಲ್ಲಿ ವರುಣ್ ಧವನ್ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಇತ್ತೀಚೆಗೆ ಅವರು ಈ ಸೀರಿಸ್ ನೋಡಿ ಖುಷಿ ಪಟ್ಟಿದ್ದರು. ಸದ್ಯ ಸಮಂತಾ ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ.