ಭಾರತೀಯ ವಾಯುಪಡೆಯು 2024 ನೇ ಸಾಲಿನ ಅಗ್ನಿವೀರ್ ವಾಯು ಇನ್‌ಟೇಕ್ ಪೋಸ್ಟ್‌ಗಳ ಭರ್ತಿಗೆ ಸಂಬಂಧ, ಆನ್‌ಲೈನ್ ಅರ್ಜಿ ಲಿಂಕ್ ಅನ್ನು ಬಿಡುಗಡೆ ಮಾಡಿದ್ದು, ದೇಶ ಸೇವೆಯ ಜತೆ ಜತೆಗೆ ಶಿಕ್ಷಣವನ್ನು ಪಡೆಯುವ ಅವಕಾಶ ಇರುವ ಈ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಪಾಸಾದವರು ಅರ್ಹರು. ಅರ್ಜಿಗೆ ನಿಗಧಿತ ವೇಳಾಪಟ್ಟಿ, ಇತರೆ ಅರ್ಹತೆಗಳನ್ನು ತಿಳಿದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.
ನೇಮಕಾತಿ ಪ್ರಾಧಿಕಾರ: ಭಾರತೀಯ ವಾಯುಪಡೆ
ಹುದ್ದೆ ಪದನಾಮ : ಅಗ್ನಿವೀರ್ ವಾಯು
ಉದ್ಯೋಗ ವಿವರ
INR 30000 to 40000 /Month
ಹುದ್ದೆಯ ಹೆಸರು ವಾಯುಪಡೆ ಅಗ್ನಿವೀರರ ನೇಮಕ
ವಿವರ ಭಾರತೀಯ ವಾಯುಪಡೆ ಅಧಿಸೂಚನೆ
ಪ್ರಕಟಣೆ ದಿನಾಂಕ 2024-01-17
ಕೊನೆ ದಿನಾಂಕ 2024-02-06
ಉದ್ಯೋಗ ವಿಧ ಪೂರ್ಣಾವಧಿ
ಉದ್ಯೋಗ ಕ್ಷೇತ್ರ ರಕ್ಷಣಾ ಇಲಾಖೆ
ವೇತನ ವಿವರ
ಕೌಶಲ ಮತ್ತು ಶೈಕ್ಷಣಿಕ ಅರ್ಹತೆ
ವಿದ್ಯಾರ್ಹತೆ 12ನೇ ತರಗತಿ / ದ್ವಿತೀಯ ಪಿಯುಸಿ / 2 ವರ್ಷದ ವೊಕೇಷನಲ್ ಕೋರ್ಸ್
ಕಾರ್ಯಾನುಭವ 0 Years
ನೇಮಕಾತಿ ಸಂಸ್ಥೆ
ಸಂಸ್ಥೆಯ ಹೆಸರು ವಾಯುಪಡೆ
ವೆಬ್‌ಸೈಟ್ ವಿಳಾಸ https://agnipathvayu.cdac.in/AV/
ವಿಶೇಷ ದಿನಾಂಕಗಳು
ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ: 17-01-2024
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 06-02-2024 ರ ರಾತ್ರಿ 11-00 ಗಂಟೆವರೆಗೆ.
ಆನ್‌ಲೈನ್ ಸಿಬಿಟಿ ಫೇಸ್-1 ಪರೀಕ್ಷೆ ದಿನಾಂಕ : 2024 ರ ಮಾರ್ಚ್ 17 ರಿಂದ
ಅರ್ಹತೆಗಳು
ಅಗ್ನಿವೀರ್ ವಾಯು ಹುದ್ದೆಗಳಿಗೆ ಅರ್ಜಿ ಹಾಕಲು ಅವಿವಾಹಿತ ಪುರುಷ -ಮಹಿಳೆಯರು 02 ಜನವರಿ 2004 ಮತ್ತು 02 ಜುಲೈ 2007 ರ ನಡುವೆ ಜನಿಸಿರಬೇಕು.
12ನೇ ತರಗತಿಯಲ್ಲಿ ಭೌತಶಾಸ್ತ್ರ, ಗಣಿತ, ಇಂಗ್ಲಿಷ್ ಓದಿದ್ದು, ಕನಿಷ್ಠ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಇಂಗ್ಲಿಷ್‌ನಲ್ಲಿ ಶೇ.50 ಅಂಕ ಗಳಿಸಿರಬೇಕು.
ಅಥವಾ 2 ವರ್ಷದ ವೃತ್ತಿಪರ ಕೋರ್ಸ್‌ಗಳನ್ನು ಓದಿರಬೇಕು. ಕನಿಷ್ಠ ಶೇ.50 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
ವಿಜ್ಞಾನ ವಿಭಾಗ ಹೊರತುಪಡಿಸಿ ಇತರೆ ಯಾವುದೇ ಸ್ಟ್ರೀಮ್‌ನಲ್ಲಿ ಪಿಯುಸಿ ಶಿಕ್ಷಣವನ್ನು ಪಡೆದವರು ಕನಿಷ್ಠ ಶೇಕಡ. 50 ಅಂಕ ಪಡೆದಿರಬೇಕು. ಇಂಗ್ಲಿಷ್‌ನಲ್ಲಿ ಶೇ.50 ಅಂಕ ಗಳಿಸಿರಬೇಕು.
ಅರ್ಜಿ ಸಲ್ಲಿಸಲು 10ನೇ ತರಗತಿ ಅಂಕಪಟ್ಟಿ, 12ನೇ ತರಗತಿ ವಿದ್ಯಾರ್ಹತೆ ದಾಖಲೆ. 2 ವರ್ಷದ ವೃತ್ತಿಪರ ಕೋರ್ಸ್ ಪಾಸ್ ಮಾಡಿದ ಸರ್ಟಿಫಿಕೇಟ್ ಇತರೆ ದಾಖಲೆಗಳು ಬೇಕಾಗುತ್ತವೆ.
ಅರ್ಜಿ ಹಾಕುವ ವಿಧಾನ
ಅಗ್ನಿಪಥ್ ವಾಯು ಆನ್‌ಲೈನ್ ಪೋರ್ಟಲ್‌ಗೆ ಭೇಟಿ ನೀಡಿ.
ತೆರೆದ ವೆಬ್‌ಪೇಜ್‌ನಲ್ಲಿ ‘Click Here To Registered’ ಎಂದಿರುವ ಲಿಂಕ್ ಕ್ಲಿಕ್ ಮಾಡಿ.
ಕೇಳಲಾದ ಅಗತ್ಯ ಬೇಸಿಕ್ ಮಾಹಿತಿಗಳನ್ನು ನೀಡಿ ಮೊದಲಿಗೆ ರಿಜಿಸ್ಟ್ರೇಷನ್ ಪಡೆಯಬೇಕು.
ನಂತರ ಮತ್ತೆ ಲಾಗಿನ್ ಆಗುವ ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಜಿಯನ್ನು ಮುಂದಿನ ರೆಫರೆನ್ಸ್‌ಗಾಗಿ ಪ್ರಿಂಟ್ ತೆಗೆದುಕೊಳ್ಳಬೇಕು.