ನಿಮ್ಮ ಸುದ್ದಿ ಬಾಗಲಕೋಟೆ
ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಹಾಗೂ ತಾಲೂಕಾ ಘಟಕಗಳ ನೂತನ ಪದಾಕಾರಿಗಳ ಪದಗ್ರಹಣ ಇತ್ತೀಚೆಗೆ ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟಿçÃಯ ಉಪಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ವಹಿಸಿದ್ದರು. ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಜಿ.ಎನ್.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ನೂತನವಾಗಿ ಚುನಾಯಿತ ಸದಸ್ಯರಿಗೆ ವೀರಣ್ಣ ಚರಂತಿಮಠ ದೃಢೀಕರಣ ಪತ್ರ ವಿತರಿಸಿದರು. ಜಿ.ಎನ್.ಪಾಟೀಲ ಪ್ರತಿಜ್ಞಾವಿ ಬೋಸಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಡಾ.ವೀರಣ್ಣ ಚರಂತಿಮಠ, ವೀರಶೈವ ಮತ್ತು ಲಿಂಗಾಯತ ಎಂಬುದು ಎರಡು ಬೇರೆಯಲ್ಲ. ವೀರಶೈವ ಸಂಸ್ಕೃತ ಮೂಲದ ಶಬ್ದವಾದರೆ ಲಿಂಗಾಯತ ಎಂಬುದು ಜನಸಾಮಾನ್ಯರ ಶಬ್ದವಾಗಿದೆ. ಒಳ ಪಂಗಡಗಳು ಒಂದಾಗಿರಬೇಕೆAಬ ಉದ್ದೇಶದಿಂದಲೇ ಹಾನಗಲ್ಲ ಕುಮಾರ ಸ್ವಾಮಿಗಳು ಅಖಿಲ ಭಾರತ ವೀರಶೈವ ಮಹಾಸಭಾ ಹುಟ್ಟುಹಾಕಿದರು. ನಾವೆಲ್ಲ ಒಳಪಂಗಡದವರು ಒಂದಾಗಿದ್ದು ಕುಮಾರ ಸ್ವಾಮಿಗಳ ಉದ್ದೇಶ ನೆರವೇರಿಸಬೇಕಾಗಿದೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಜಿ.ಎನ್.ಪಾಟೀಲ, ಉಪಾಧ್ಯಕ್ಷ ಎಂ.ಕೆ.ಪಟ್ಟಣಶೆಟ್ಟಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಮುಕ್ಕುಪ್ಪಿ, ಕೋಶಾಧ್ಯಕ್ಷ ಪ್ರೋ.ಬಸವರಾಜ ಬೋಳಿಶೆಟ್ಟಿ ಇವರು ವೀರಣ್ಣ ಚರಂತಿಮಠ ಅವರನ್ನು ಗೌರವಿಸಿದರು.
ಬಸವರಾಜ ಭಗವತಿ, ಉಮಾ ರೇವಡಿಗಾರ, ವಿಜಯಲಕ್ಷಿö್ಮÃ ಭದ್ರಶೆಟ್ಟಿ, ಚಂದ್ರಶೇಖರ ಶೆಟ್ಟರ, ಜಿಲ್ಲೆಯ ನಾನಾ ತಾಲೂಕು ಪದಾಕಾರಿಗಳು ಭಾಗವಹಿಸಿದ್ದರು.