ಪ್ರಚಾರದಲ್ಲಿ ತೊಡಗಿದ ಅಭ್ಯರ್ಥಿ
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯಲ್ಲಿ ಪಟ್ಟಣ ಪಂಚಾಯತ ಚುನಾವಣೆ ಕಾವು ಜೋರಾಗಿದ್ದು, ನಾಮಪತ್ರ ಸಲ್ಲಿಕೆ ಮೊದಲೇ ಅಭ್ಯರ್ಥಿಯೊಬ್ಬರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಜಿಲ್ಲೆಯ ಅಮೀನಗಡ ಪಟ್ಟಣದ ಎಸ್.ಸಿ. ಮೀಸಲು ಹೊಂದಿದ ವಾರ್ಡ್ 8 ಕ್ಕೆ ಸ್ಪರ್ಧಿಸಲು ಇಚ್ಛೆ ಹೊಂದಿದ ರಮೇಶ ಮುರಾಳ ಎಂಬುವವರು ವಾರ್ಡ್ 8ರ ವ್ಯಾಪ್ತಿಯಲ್ಲಿ ತಮ್ಮ ಸೇವೆಗೆ ಅವಕಾಶ ಕೊಡುವಂತೆ ಪ್ರಮುಖ ಸ್ಥಳಗಳಲ್ಲಿ ಪೋಸ್ಟರ್ ಅಂಟಿಸಿದ್ದಾರೆ.
ಸರ್ವ ಧರ್ಮಗಳ ಕೃಪಾಶೀರ್ವಾದದಿಂದ ಚುನಾವಣೆಯಲ್ಲಿ ನನ್ನ ಗುರುತಿಗೆ ಮತ ನೀಡಿ ನಗರ ಅಭಿವೃದ್ಧಿಗೆ ಅವಕಾಶ ಕಲ್ಪಿಸಿ ಕೊಡಬೇಕೆಂದು ವಿನಂತಿಸಿದ್ದಾರೆ.
ಆದರೆ ಈ ಅಭ್ಯರ್ಥಿ ಯಾವುದೇ ಪಕ್ಷದ ಚಿನ್ಹೆ ಗುರುತಿಸಿಕೊಂಡಿಲ್ಲ. ಕೇವಲ ನನ್ನ ಗುರುತಿಗೆ ಎಂದಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಆದರೂ ಕೆಲ ಪೋಸ್ಟರ್ ಗಳಲ್ಲಿ ಕಾಂಗ್ರೆಸ್ಸಿನ ಕೈ ಚಿಹ್ನೆ ಬಳಕೆ ಆಗಿದ್ದು ವಾರ್ಡ್ 8 ಕ್ಕೆ ಇವರೇ ಅಧಿಕೃತ ಅಭ್ಯರ್ಥಿ ಆಗಲಿದ್ದಾರೆ ಎಂಬ ಮಾತು ಕೇಳಿದೆ.
ಕೆಲ ವಾರ್ಡ್ ಗಳಲ್ಲಿ ಆಕಾಂಕ್ಷಿಗಳು ಇನ್ನೂ ನಾಮಪತ್ರ ಸಲ್ಲಿಕೆ, ದಾಖಲೆಗಳ ಕ್ರೂಢೀಕರಣದಲ್ಲೆ ಕಾಲಕಳೆಯುತ್ತಿದ್ದರೆ ವಾರ್ಡ್ 8ರ ಅಭ್ಯರ್ಥಿ ರಮೇಶ ಮುರಾಳ ವಿಶೇಷ ಪ್ರಚಾರ ಕೈಗೊಂಡಿರುವುದು ವಿಶೇಷತೆ ಹೊಂದಿದೆ.