ರೇಣುಕಾ ಛಲವಾದಿ ಅಧ್ಯಕ್ಷೆ
ಬಾಗಲಕೋಟೆ
ರಾಜ್ಯ ಪೌರ ಸೇವಾ ನೌಕರರ ಸಂಘದ ಅಮೀನಗಡ ಶಾಖೆಯ ನೂತನ ಅಧ್ಯಕ್ಷರಾಗಿ ರೇಣುಕಾ ಛಲವಾದಿ ಅವಿರೋಧವಾಗಿ ಆಗಿದ್ದಾರೆ. ಉಳಿದಂತೆ ಐ.ಎಲ್.ಗುಡ್ಡದ (ಉಪಾಧ್ಯಕ್ಷ), ಗುರುರಾಜ ವಾಲಿ (ಕಾರ್ಯದರ್ಶಿ), ರೇಣುಕಾ ಹುಸೇನಪ್ಪ ಚಲವಾದಿ, ಯಮನೂರಪ್ಪ ಚಲವಾದಿ, ವಿ.ಎಚ್.ಚವಡಿ, ಬಸೀರ ಕಮಾನಘರ, ಸಂತೋಷ ವ್ಯಾಪಾರಿಮಠ, ಷಣ್ಮುಖಪ್ಪ ಚಲವಾದಿ, ಹೊರಗುತ್ತಿಗೆ ವಿಭಾಗದಿಂದ ನಾಗೇಶ ತಳೇವಾಡ, ಮಂಜು ಪೂಜಾರ (ನಿರ್ದೇಶಕರು) ಆಯ್ಕೆ ಆಗಿದ್ದಾರೆ.
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣ ಪಂಚಾಯಿತಿಯಲ್ಲಿ ಸೋಮವಾರ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಸಮುದಾಯ ಸಂಘಟನಾ ಅಧಿಕಾರಿ ಯು.ಜಿ.ವರದಪ್ಪನವರ ಹಾಗೂ ಸಂಘದ ಜಿಲ್ಲಾ ಕಾರ್ಯದರ್ಶಿ ಕನಕಪ್ಪ ಮರ್ಜಿ ಅವರ ಸಮ್ಮುಖದಲ್ಲಿ ಈ ಆಯ್ಕೆ ನಡೆಯಿತು.