ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆ ಜ.೧೫ರಂದು ಬೆಳಗ್ಗೆ ೧೦ಕ್ಕೆ ನಡೆಯಲಿದೆ.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಂಗಪ್ಪ ತಳವಾರ ಅಧ್ಯಕ್ಷತೆ ವಹಿಸಲಿದ್ದಾರೆ. ಸಭೆಯಲ್ಲಿ ಠರಾವು ಪಾಸು ಮಾಡಿದ್ದರೂ ಕಾಯಿಪಲ್ಲೆ ಮಾರುಕಟ್ಟೆ ರಿಪೇರಿ ಆಗದಿರುವುದು, ಎಲ್ಲ ವಾರ್ಡಗಳಲ್ಲಿ ಪೈಪ್ಲೈನ್ ಮತ್ತು ರಸ್ತೆ ಕೆಲಸಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವುದು, ಹಂಚಿನಾಳ ಹಳೇ ಗ್ರಾಮ ಠಾಣೆ ಖುಲ್ಲಾ ಜಾಗೆಯನ್ನು ಜನೋಪಯೋಗಿ ನಾನಾ ಯೋಜನೆಗಳ ಅನುಷ್ಠಾನಕ್ಕೆ ಉಪಯೋಗಿಸುವ ಕುರಿತು ಚರ್ಚೆ, ಕೆರೆ, ಚರಂಡಿ ನಿರ್ಮಾಣ, ವಾರ್ಡ್ ೧೩ರಲ್ಲಿ ರಸ್ತೆ ಮಧ್ಯದಲ್ಲಿನ ಟಿಸಿ ಸ್ಥಳಾಂತರ, ಹೈಮಾಸ್ಟ್ ರಿಪೇರಿ, ನೂತನವಾಗಿ ಹೈಮಾಸ್ಟ್ ಅಳವಡಿಸುವುದು, ಗ್ರಂಥಾಲಯ, ಸ್ಥಾಯಿ ಸಮಿತಿ ರಚನೆ, ಆಶ್ರಯ ಮನೆಗಳ ಜಿಪಿಎಸ್, ಕುರಿ ಮಾರುಕಟ್ಟೆ ಸ್ಥಳಾಂತರ, ಟೆಂಡರ್ ದರಗಳಿಗೆ ಮಂಜೂರಾತಿ, ರಸ್ತೆಯಲ್ಲಿನ ಅಂಗಡಿಗಳ ಭೂಬಾಡಿಗೆ, ನನೆಗುದಿಗೆ ಬಿದ್ದ ಹೆಸ್ಕಾಂ ಕಚೇರಿ ಪಕ್ಕದಲ್ಲಿ ಸಿಡಿ ನಿರ್ಮಾಣ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಅನುಮೋದನೆ ಪಡೆದುಕೊಳ್ಳಲಾಗುವುದು ಎಂದು ಪಪಂ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.