ರಾಮ ಮಂದಿರ ನಿರ್ಮಾಣದ ಮೂಲಕ ಬಿಜೆಪಿ ಸರ್ಕಾರ ತಾನು ನೀಡಿದ್ದ ಅತಿ ದೊಡ್ಡ ಚುನಾವಣಾ ಭರವಸೆ ಈಡೇರಿಸಿದ್ದು, ರಾಮ ಭಕ್ತರು ತಮ್ಮ ಆರಾಧ್ಯ ದೈವನ ಮಂದಿರ ಮತ್ತೆ ಸ್ಥಾಪನೆಯಾದ ಸಂಭ್ರಮದಲ್ಲಿದ್ದಾರೆ.
ಮತ್ತೊಂದು ಸಿಹಿ ಸುದ್ದಿ ಕೂಡಾ ಭಕ್ತ ಗಣಕ್ಕೆ ಸಿಕ್ಕಿದ್ದು, ಅದು ರಾಮ ಸೇತು ಬಳಿಯಲ್ಲೇ ಆಧುನಿಕ ಸೇತುವೆಯ ನಿರ್ಮಾಣ ಯೋಜನೆ. ಭಾರತದ ಧನುಷ್ಕೋಡಿ ಹಾಗೂ ಶ್ರೀಲಂಕಾದ ತಲೈ ಮನ್ನಾರ್ ಸಂಪರ್ಕಿಸುವ 23 ಕಿ. ಮೀ. ಉದ್ದದ ಸಮುದ್ರ ಸೇತುವೆ ರಾಮ ಸೇತು ಎಂದೇ ಜನಪ್ರಿಯ.. ಈ ಪುರಾಣ ಪ್ರಸಿದ್ದ ಸೇತುವೆಯ ಪಕ್ಕದಲ್ಲೇ ಹೊಸ ಸೇತುವೆ ನಿರ್ಮಿಸಿ ಭಾರತ – ಶ್ರೀಲಂಕಾ ನಡುವೆ ರಸ್ತೆ ಹಾಗೂ ರೈಲು ಮಾರ್ಗದಲ್ಲೇ ಓಡಾಟ ನಡೆಸಲು ಅನುಕೂಲ ಕಲ್ಪಿಸುವ ಯೋಜನೆ ಇದು.
ಭಾರತ – ಶ್ರೀಲಂಕಾ ನಡುವಣ ಈ ಅಂತಾರಾಷ್ಟ್ರೀಯ ಸಮುದ್ರ ಸೇತುವೆ ಸುಮಾರು 23 ಕಿಲೋ ಮೀಟರ್ ದೂರ ಇರಲಿಎ. ರಸ್ತೆ ಮಾರ್ಗ ಮಾತ್ರವಲ್ಲ, ರೈಲು ಮಾರ್ಗವನ್ನೂ ನಿರ್ಮಾಣ ಮಾಡೋದಕ್ಕೆ ಯೋಜನೆ ರೂಪಿಸಲಾಗಿದೆ. ಭಾರತದ ಧನುಷ್ಕೋಡಿಯಿಂದ ಶ್ರೀಲಂಕಾದ ತಲೈ ಮನ್ನಾರ್‌ವರೆಗೆ ಈ ಸೇತುವೆ ಇರಲಿದೆ
ಸಮುದ್ರದ ಒಂದು ತೀರದಿಂದ ಮತ್ತೊಂದು ತೀರಕ್ಕೆ ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದ್ದು, 21 ಕಿಲೋ ಮೀಟರ್ ಉದ್ದದ ಈ ಸಮುದ್ರ ಸೇತುವೆ ನಿರ್ಮಿಸೋಕೆ ಸುಮಾರು 5 ವರ್ಷ ಬೇಕಾಯ್ತು. 6 ಲೇನ್‌ಗಳ ರಸ್ತೆ ಮಾರ್ಗ ಈ ಸೇತುವೆಯಲ್ಲಿದೆ. ಇದೇ ಮಾದರಿಯ ಸೇತುವೆಯನ್ನ ಭಾರತ ಹಾಗೂ ಶ್ರೀಲಂಕಾ ನಡುವೆ ನಿರ್ಮಾಣ ಮಾಡೋಕೆ ಭಾರತ ಸರ್ಕಾರ ಚಿಂತನೆ ನಡೆಸ್ತಿದೆ. ಅದೂ ಕೂಡಾ ತ್ರೇತಾಯುಗದಲ್ಲಿ ಭಗವಾನ್ ಶ್ರೀರಾಮ ನಿರ್ಮಿಸಿದ ರಾಮ ಸೇತು ಬಳಿಯಲ್ಲೇ ಈ ಅತ್ಯಾಧುನಿಕ ಸೇತುವೆ ನಿರ್ಮಾಣ ಆಗಲಿದೆ.