This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Politics News

ಬಾಗಲಕೋಟೆ:ಡಿಸಿ ನಡೆ ಹಳ್ಳಿ ಕಡೆ

*ಹುಲ್ಯಾಳ ಗ್ರಾಮದಲ್ಲಿ ಡಿಸಿ ಗ್ರಾಮ ವಾಸ್ತವ್ಯ*

*ಗ್ರಾಮದ ಜನರ ಸಮಸ್ಯೆಗಳಿಗೆ ಸ್ಪಂಧಿಸಿದ ಡಿಸಿ ರಾಜೇಂದ್ರ

ನಿಮ್ಮ ಸುದ್ದಿ ಬಾಗಲಕೋಟೆ

ಜಿಲ್ಲೆಯ ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದಲ್ಲಿ ಶನಿವಾರ ಇಡೀ ದಿನ ವಾಸ್ತವ್ಯ ಮಾಡಿ ಗ್ರಾಮದ ಜನರ ಸಮಸ್ಯೆಗಳಿಗೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಸ್ಪಂದನೆ ನೀಡಿದರು.

ಹುಲ್ಯಾಳ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಡಿ ಬೆಳಿಗ್ಗೆಯಿಂದ ಸಂಜೆಯವರೆಗೂ ಗ್ರಾಮದಲ್ಲಿ ವಾಸ್ತವ್ಯ ಹೂಡುವ ಮೂಲ ಗ್ರಾಮದ ಜನರ ಸಮಸ್ಯೆಗಳಿಗೆ ಸ್ಪಂಧಿಸುವ ಕೆಲಸ ಮಾಡಿದರು. ಗ್ರಾಮಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು ಗ್ರಾಮದ ಹೊಳೆ ಆಂಜನೇಯ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. ಗ್ರಾಮ ಪಂಚಾಯತಿಯ ಸದಸ್ಯರ ಜೊತೆಗೆ ಗ್ರಾಮದಲ್ಲಿರುವ ಸಮಸ್ಯೆಗಳನ್ನು ಚರ್ಚಿಸಿದರು.

ನಂತರ ಗ್ರಾಮದ ಅಂಗನವಾಡಿ ಕೇಂದ್ರ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಕೈಮಗ್ಗ ನೇಕಾರರ ಅಭಿವೃದ್ಧಿ ನಿಗಮ ಉಪ ಕೇಂದ್ರ ಹಾಗೂ ಸಾರ್ವಜನಿಕ ಶೌಚಾಲಯ, ನೇಕಾರರ ಕುಟುಂಬಸ್ಥರ ಮನೆ, ಸಾವಯವ ಕೃಷಿ ಜಮೀನು ಸೇರಿದಂತೆ ಇತರೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಭೇಟಿ ಸಂದರ್ಭದಲ್ಲಿ ಗ್ರಾಮಸ್ಥರ ನೀಡಿದ ಅಹವಾಲುಗಳನ್ನು ಸ್ವೀಕರಿಸಿದರು. ಲಿಖಿತ ರೂಪದ ಅರ್ಜಿಗಳನ್ನು ಸಹ ಸ್ಥಳದಲ್ಲಿಯೇ ಪಡೆದುಕೊಂಡರು.

ಗ್ರಾಮ ಸಂಚಾರ ವೇಳೆಯಲ್ಲಿ ಪಶು ಆಸ್ಪತ್ರೆಯ ಹೊಸ ಕಟ್ಟಡ ನಿರ್ಮಾಣವಾದರೂ ಸಹ ಪ್ರಾರಂಭ ವಾಗಿರುವದಿಲ್ಲ. ಈ ಕುರಿತು ಗ್ರಾಮಸ್ಥರು ತಿಳಿಸಿದಾಗ ಕಟ್ಟಡ ಪರಿಶೀಲಿದ ಜಿಲ್ಲಾಧಿಕಾರಿಗಳು 15 ದಿನಗಳಲ್ಲಿ ಹೊಸ ಕಟ್ಟಡಕ್ಕೆ ಆಸ್ಪತ್ರೆ ಸ್ಥಳಾಂತರಕ್ಕೆ ಕ್ರಮ ವಹಿಸುವಂತೆ ಪಶು ಇಲಾಖೆಯ ಉಪನಿರ್ದೇಶಕ ಡಾ.ಎಸ್.ಎಸ್.ಹೊಳೆಪ್ಪಗೋಳ ಅವರಿಗೆ ಸೂಚಿದರು.

ಅಂಗನವಾಡಿಗೆ ಭೇಟಿ ನೀಡಿದಾಗ ಕೊರೊನಾ ಹಿನ್ನಲೆಯಲ್ಲಿ ಮಕ್ಕಳಿಗೆ ನೀಡುತ್ತಿರುವ ಆಹಾರ ಧಾನ್ಯಗಳನ್ನು ಮನೆ ಮನೆಗೆ ವಿತರಿಸುವತ್ತಿರುವ ಬಗ್ಗೆ ದಾಖಲೆಗಳನ್ನು ಪರಿಶೀಲಿಸಿದರು. ಅಪೌಷ್ಠಿಕ ಮಕ್ಕಳಿಗೆ ಪೌಷ್ಠಿಕ ಆಹಾರ ಮತ್ತು ಮೊಟ್ಟೆ ವಿತರಿಸಲು ಸೂಚಿಸಿದರು.

ಗ್ರಾಮ ಸಂಚಾರದ ನಂತರ ವೇದಿಕೆಯ ಮೇಲೆ ಜನರ ಅಹವಾಲುಗಳಿಗೆ ಸ್ಥಳದಲ್ಲಿಯೇ ಬಗೆಹರಿಸಬಹುದಾದಂತಹ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕೆಲಸ ಮಾಡಿದರು. ಗ್ರಾಮದಿಂದ ಒಟ್ಟು 195 ಅರ್ಜಿಗಳು ಬಂದಿದ್ದು, ಪ್ರತಿಯೊಂದು ಅರ್ಜಿಗಳ ಬಗ್ಗೆ ವೇದಿಕೆ ಮೇಲೆ ಚರ್ಚಿಸಿಸ ಸಂಬಂಧಪಟ್ಟದ ಅಧಿಕಾರಿಗಳ ಮೂಲಕ ಬಗೆಯರಿಸುವ ಕೆಲಸ ಮಾಡಲಾಯಿತು. ಅಲ್ಲದೇ ಸ್ವೀಕೃತವಾದ ಅರ್ಜಿಗಳಲ್ಲಿ ಸಿಸಿ ರೋಡ, ಹೆಚ್ಚುವರಿ ಅಂಗನವಾಡಿ ಬೇಡಿಕೆ, ಶೌಚಾಲಯ, ಸ್ಮಶಾನ ಜಾಗ, ಕೆರೆ ತುಂಬಿಸುವುದು, ಉದ್ಯೋಗಕ್ಕಾಗಿ ವಾಣಿಜ್ಯ ನಿವೇಶನ ಸೇರಿದಂತೆ ಇತರೆ ಸಮಸ್ಯೆಗಳು ಒಳಗೊಂಡಿದ್ದವು.

ಗ್ರಾಮ ವಾಸ್ತವ್ಯ ವೇಳೆ ಗ್ರಾಮ ಪಂಚಾಯತ ಅಧ್ಯಕ್ಷೆ ಹನಮವ್ವ ಹಲಗಲಿ, ಉಪಾದ್ಯಕ್ಷ ಉಮೇಶ ಕೋರಿ, ಉಪ ವಿಭಾಗಾಧಿಕಾರಿ ಸಿದ್ದು ಹುಳ್ಳೊಳ್ಳಿ, ಆಹಾರ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ಜಿಲ್ಲಾ ಕೃಷಿ ಜಂಟಿ ನಿರ್ದೇಶಕಿ ಚೇತನಾ ಪಾಟೀಲ, ತಹಶೀಲ್ದಾರ ಸಂಜಯ ಇಂಗಳೆ, ಗ್ರಾಮ ಪಂಚಾಯತಿ ಅಭಿವೃಧ್ದಿ ಅಧಿಕಾರಿ ಸುರೇಶ ಕಡಪ್ಟಿ ಸೇರಿದಂತ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ

ಹುಲ್ಯಾಳ ಗ್ರಾಮಕ್ಕೆ ಜಿಲ್ಲಾಧಿಕಾರಿಗಳು ಆಗಮಿಸುತ್ತಿದ್ದಂತೆ ಗ್ರಾಮದ ಮಹಿಳೆಯರು ಆರತಿ ಮಾಡಿ ಸ್ವಾಗತ ಕೋರಿದರು. ನಂತರ ವಿವಿಧ ಜಾನಪದ ಕಲಾತಂಡ, ಅಧಿಕಾರಿಗಳು ಹಾಗೂ ಶಾಲಾ ಮಕ್ಕಳು ಮೆರವಣಿಗೆಯ ಮೂಲಕ ಗ್ರಾಮ ಪಂಚಾಯತಿಗೆ ಕರೆತಂದರು. ಗ್ರಾಮ ಪಂಚಾಯತಿಯಲ್ಲಿ ಕಂಪ್ಯೂಟರಿನಲ್ಲಿ ಪಹಣಿ ಉತಾರ ನೀಡಿದರು. ನಂತರ ಗ್ರಾಮದ ಆವರಣದಲ್ಲಿ ಸ್ಥಾಪಿಸಲಾದ ಕೃಷಿ ಹಾಗೂ ಇತರೆ ಅಹವಾಲು ಸ್ವೀಕಾರ ಕೌಂಟರ್‍ಗಳಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೆ ಅಹವಾಲುಗಳನ್ನು ಸ್ವೀಕರಿಸಲಾಯಿತು.

ವಿದ್ಯಾರ್ಥಿಗಳ ಬೇಡಿಕೆಯಂತೆ ಸ್ಮಾರ್ಟ ಕ್ಲಾಸ್ ಕಿಟ್ ವಿತರಣೆ

ಹುಲ್ಯಾಳ ಗ್ರಾಮದಲ್ಲಿ ಸಂಚಿಸುವ ವೇಳೆ ಗ್ರಾಮದ ಅನುದಾನಿತ ಶಂಬುಲಿಂಗೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ವಿಜ್ಞಾನ ಮತ್ತು ಗಣಿತ ವಿಷಯ ಶಿಕ್ಷಕರು ಲಭ್ಯವಿಲ್ಲವೆಂದು ತಿಳಿಸಿದಾಗ ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿಗಳು ತಮ್ಮ ಕಚೇರಿಯಲ್ಲಿ ಡೆಮೊಗಾಗಿ ಇಡಲಾದ ಸ್ಮಾರ್ಟಕ್ಲಾಸ್ ಕಿಟ್‍ನ್ನು ತರಿಸಿ ಶಾಲೆಗೆ ವಿತರಿಸುವುದಾಗಿ ತಿಳಿಸಿದಾಗ ಸಂಜೆವೇಳೆ ವಿದ್ಯಾರ್ಥಿಗಳ ಬೇಡಿಕೆಯನ್ನು ವೇದಿಕೆಯಲ್ಲಿ ಕಿಟ್ ವಿತರಿಸುವ ಕೆಲಸ ಮಾಡಿದರು.

Nimma Suddi
";