This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Agriculture News

ಬೆಂಗಳೂರು ಗ್ರಾಮಾಂತರ: 13,043 ರೈತರ ಇ-ಕೆವೈಸಿ ಬ್ಯಾಲೆನ್ಸ್ , ಕಿಸಾನ್‌ ಸಮ್ಮಾನ್‌ ಸಹಾಯಧನಕ್ಕೆ ಕತ್ತರಿ?

ಬೆಂಗಳೂರು ಗ್ರಾಮಾಂತರ: 13,043 ರೈತರ ಇ-ಕೆವೈಸಿ ಬ್ಯಾಲೆನ್ಸ್ , ಕಿಸಾನ್‌ ಸಮ್ಮಾನ್‌ ಸಹಾಯಧನಕ್ಕೆ ಕತ್ತರಿ?

ಬೆಂಗಳೂರು ಗ್ರಾಮಾಂತರ: ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಸಣ್ಣ ರೈತರಿಗೆ ಆರ್ಥಿಕ ಸಹಾಯಧನ ನೀಡುತ್ತಿದ್ದು, 15 ಕಂತಿನ ಹಣ ರೈತರಿಗೆ ತಲುಪಿದ್ದು, 16ನೇ ಕಂತಿನ ಹಣ ಬಿಡುಗಡೆ ಪ್ರಗತಿಯಲ್ಲಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಜಿಲ್ಲೆಯ ಒಟ್ಟು 13,043 ಮಂದಿ ಇನ್ನೂ ಇ-ಕೆವೈಸಿ ಮಾಡಿಸಿಲ್ಲ. ಆದಷ್ಟು ಬೇಗ ಇಷ್ಟು ರೈತರು ಇ-ಕೆವೈಸಿ ಮಾಡಿಸಿದರೆ ಮಾತ್ರ ಕೇಂದ್ರದ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಹಣ ಬರಲಿದ್ದು, ವಿಮೆ ಸೌಲಭ್ಯ ಪಡೆಯಲು ಇದು ಅಗತ್ಯವಾಗಿದೆ. ಇದಕ್ಕಾಗಿ ಇ-ಕೆವೈಸಿಗೆ ಮಾಡಿಸಲು ಇಲಾಖೆ ಕ್ರಮ ವಹಿಸಿದ್ದು, ಗ್ರಾಮ ಮಟ್ಟದಲ್ಲಿ ಅರ್ಹ ನೋಡಲ್‌ ವ್ಯಕ್ತಿಗಳ ನೇಮಿಸಿ ಇ-ಕೆವೈಸಿ ಮಾಡಿಸುವ ಪ್ರಯತ್ನಕ್ಕೆ ಮುಂದಾಗಿದೆ.

ಜಿಲ್ಲೆಯಲ್ಲಿ ಒಟ್ಟು ಇ-ಕೆವೈಸಿ ನೋಂದಣಿಗೆ ಒಟ್ಟು 79,005 ಮಂದಿ ರೈತರು ಇದ್ದಾರೆ. ಈವರೆಗೆ ಒಟ್ಟು 65,962 ಮಂದಿ ಮಾತ್ರ ಇ-ಕೆವೈಸಿ ಮಾಡಿಸಿದ್ದು, 13,043 ಮಂದಿ ಮಾಡಿಸಬೇಕಿದ್ದು, ರೈತರು ಆದಷ್ಟು ಬೇಗ ಇ-ಕೆವೈಸಿ ಮಾಡಿಸಬೇಕಿದ್ದು, ಇಲಾಖೆ ಕೂಡ ಜಿಲ್ಲೆಯಾದ್ಯಂತ ಪ್ರಯತ್ನ ಮುಂದುವರಿಸಿದೆ.

ರೈತರು ಸರಕಾರದ ಅನೇಕ ನೆರವು ಪಡೆಯಲು ಕೂಡ ಇ-ಕೆವೈಸಿ ಅಗತ್ಯವಾಗಿದೆ.ಕಿಸಾನ್‌ ಸಮ್ಮಾನ್‌ ಯೋಜನೆ ಆರಂಭದಿಂದಲೂ ಇ-ಕೆವೈಸಿ ಮಾಡಿಸುವ ಬಗ್ಗೆ ಇಲಾಖೆ, ಸರಕಾರ ರೈತರಿಗೆ ಹೇಳಿಕೊಂಡು ಬರುತ್ತಿದೆ. ಕೇಂದ್ರ ಸರಕಾರದ 15 ನೇ ಕಂತಿನ ಹಣ ಬಿಡುಗಡೆ ಮಾಡಿದೆ. 16ನೇ ಕಂತಿನ ಹಣ ಬಿಡುಗಡೆಗೂ ಸಿದ್ಧತೆ ನಡೆದಿದೆ. ಜಿಲ್ಲೆಯ ನಾಲ್ಕು ತಾಲೂಕಿನಲ್ಲಿ ಒಟ್ಟು 13 ಸಾವಿರಕ್ಕೂ ಹೆಚ್ಚು ರೈತರು ಇ-ಕೆವೈಸಿಗೆ ಹಿಂದೇಟು ಹಾಕುತ್ತಿದ್ದು, ಇಲಾಖೆಯ ತಲೆಬಿಸಿಗೆ ಕಾರಣವಾಗುತ್ತಿದೆ ಎಂದು ಮಾಹಿತಿ ಬೆಳಕಿಗೆ ಬಂದಿದೆ.

Nimma Suddi
";