ನಿಮ್ಮ ಸುದ್ದಿ ಬಾಗಲಕೋಟೆ
ತೀವ್ರ ಜಿದ್ದಾಜಿದ್ದಿಗೆ ಕಾರಣವಾದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಯ್ಕೆಯ ಫಲಿತಾಂಶ ಶುಕ್ರವಾರ ಮಧ್ಯಾಹ್ನ 11ಕ್ಕೆ ಪ್ರಕಟಗೊಳ್ಳಲಿದೆ.
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಬಲಾಬಲಕ್ಕೆ ವೇದಿಕೆಯಾದ ಜಿಲ್ಲಾ ಸಹಕಾರಿ ಬ್ಯಾಂಕ್‌ನ ಆಡಳಿತ ಮಂಡಳಿಗೆ ನವೆಂಬರ್ 5ರಂದು ಚುನಾವಣೆ ನಡೆದಿತ್ತು. ನವೆಂಬರ್ 17ರಂದು ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೂ ಚುನಾವಣೆ ನಡೆಯಿತು.
ಆದರೆ ಸರಕಾರದ ನಾಮನಿರ್ದೇಶನ ಕುರಿತಂತೆ ಕಾಂಗ್ರೆಸ್ ಕೈ ಕೋರ್ಟ್ ಮೊರೆ ಹೋಗಿದ್ದರಿಂದ ಚುನಾವಣೆ ನಡೆದರೂ ಫಲಿತಾಂಶ ಮಾತ್ರ ಪ್ರಕಟವಾಗಿರಲಿಲ್ಲ. ಹೀಗಾಗಿ ನವಂಬರ್ 17ರಂದು ನಡೆದ ಮತದಾನದ ಫಲಿತಾಂಶ ಕೋರ್ಟ್ ತೀರ್ಮಾನದ ಮೇಲೆ ನಿರ್ಧರಿತವಾಯಿತು. ಹೀಗಾಗಿ ಅಂದು ಮತದಾನ ನಡೆದರೂ ಫಲಿತಾಂಶ ಮಾತ್ರ ಪ್ರಕಟವಾಗಿರಲಿಲ್ಲ.
ನ.18ರಂದು ಕೋರ್ಟ್ ವಿಚಾರಣೆಗೆ ಕೈಗೊಂಡಿತ್ತಾದರೂ ನ.25ರ ವರೆಗೆ ಮುಂದೂಡಿತ್ತು. ಇಂದು ವಿಚಾರಣೆ ಕೈಗೊಂಡ ಹೈಕೋರ್ಟ್ ಬಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯ ಮತ ಎಣಿಕೆಗೆ ಧಾರವಾಡ ವಿಭಾಗೀಯ ಪೀಠ ಆದೇಶಿಸಿದೆ.
ಸರಕಾರದಿಂದ ನಾಮನಿರ್ದೇಶನಗೊಂಡಿರುವ ಸಿದ್ಧನಗೌಡ ಪಾಟೀಲರ ಮತ ಹೊರತು ಪಡಿಸಿ ಇತರರ ಮತಗಳ ಎಣಿಕೆಗೆ ನ್ಯಾಯಾಲಯ ಆದೇಶಿಸಿದೆ.
ಇಂದು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಸಿದ್ಧನಗೌಡರ ಮತ ಹೊರತುಪಡಿಸಿ ಇತರ ಮತಗಳ ಎಣಿಕೆಗೆ ಆದೇಶಿಸಿದೆ. ಸಿದ್ಧನಗೌಡರ ನಿರ್ದೇಶಕ ಸ್ಥಾನ ಕುರಿತಾದ ವಿಚಾರಣೆಯನ್ನು ಕಾಯ್ದಿರಿಸಿದೆ ಎನ್ನಲಾಗಿದೆ.
ಫಲಿತಾಂಶ ಪ್ರಕಟಣೆಗೆ ನ್ಯಾಯಾಲಯ ಆದೇಶಿಸಿದ ಹಿನ್ನಲೆಯಲ್ಲಿ ಚುನಾವಣಾಧಿಕಾರಿಯಾಗಿರುವ ಬಾಗಲಕೋಟೆ ಉಪವಿಭಾಗಾಧಿಕಾರಿ ಎಂ.ಗಂಗಪ್ಪ ನವೆಂಬರ್ 27ರಂದು ಫಲಿತಾಂಶ ಪ್ರಕಟಣೆಗೆ ನಿರ್ದೇಶಕರ ಸಭೆ ಕರೆದಿದ್ದಾರೆ. ನ್ಯಾಯಾಲಯ ಫಲಿತಾಂಶ ಪ್ರಕಟಿಸುವಂತೆ ಆದೇಶಿಸಿದ್ದರಿಂದ ಚುನಾವಣೆ ಫಲಿತಾಂಶದ ಮತ ಎಣಿಕೆಗಾಗಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಬೆಳಗ್ಗೆ ೧೧ಕ್ಕೆ ಸಭೆ ನಿಗದಿಪಡಿಸಿದ್ದ ಸಂಬAಧಿಸಿದ ನಿರ್ದೇಶಕರು ಹಾಜರಿರಬೇಕು ಎಂದು ಕೋರಿದ್ದಾರೆ.