ಭಾರತ್ ಡೈನಾಮಿಕ್ಸ್ ಲಿಮಿಟೆಡ್ (ಬಿಡಿಎಲ್) ಪ್ರಾಜೆಕ್ಟ್ ಇಂಜಿನಿಯರ್, ಪ್ರಾಜೆಕ್ಟ್ ಆಫೀಸರ್, ಪ್ರಾಜೆಕ್ಟ್ ಡಿಪ್ಲೊಮ ಅಸಿಸ್ಟಂಟ್, ಪ್ರಾಜೆಕ್ಟ್ ಅಸಿಸ್ಟಂಟ್, ಪ್ರಾಜೆಕ್ಟ್ ಟ್ರೇಡ್ ಅಸಿಸ್ಟಂಟ್ ಹುದ್ದೆಗಳ ಭರ್ತಿಗೆ ನೋಟಿಫಿಕೇಶನ್ ಪ್ರಕಟವಾಗಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರ
ಪ್ರಾಜೆಕ್ಟ್ ಇಂಜಿನಿಯರ್ / ಆಫೀಸರ್ : 136
ಪ್ರಾಜೆಕ್ಟ್ ಡಿಪ್ಲೊಮ ಅಸಿಸ್ಟಂಟ್ / ಅಸಿಸ್ಟಂಟ್: 142
ಪ್ರಾಜೆಕ್ಟ್ ಟ್ರೇಡ್ ಅಸಿಸ್ಟಂಟ್/ ಆಫೀಸರ್ ಅಸಿಸ್ಟಂಟ್: 83
ಅರ್ಜಿ ಶುಲ್ಕ ವಿವರ
ಪ್ರಾಜೆಕ್ಟ್ ಇಂಜಿನಿಯರ್ / ಪ್ರಾಜೆಕ್ಟ್ ಆಫೀಸರ್ ಹುದ್ದೆಗಳಿಗೆ ರೂ.300.
ಪ್ರಾಜೆಕ್ಟ್ ಡಿಪ್ಲೊಮ ಅಸಿಸ್ಟಂಟ್ / ಪ್ರಾಜೆಕ್ಟ್ ಟ್ರೇಡ್ ಅಸಿಸ್ಟಂಟ್ / ಪ್ರಾಜೆಕ್ಟ್ ಆಫೀಸ್ ಅಸಿಸ್ಟಂಟ್ ಹುದ್ದೆಗಳಿಗೆ ರೂ.200.
ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಎಸ್‌ಬಿಐ ಇ-ಪಾವತಿ ಮೂಲಕ ಶುಲ್ಕ ಪಾವತಿಸಬಹುದು.
ಹುದ್ದೆವಾರು ವಿದ್ಯಾರ್ಹತೆ
ಪ್ರಾಜೆಕ್ಟ್ ಇಂಜಿನಿಯರ್ / ಆಫೀಸರ್ : ಸಿಎ / ಐಸಿಡಬ್ಲಯೂಎ / ಬಿಇ/ ಬಿ.ಟೆಕ್/ ಎಂ.ಟೆಕ್ / ಎಂಬಿಎ / ಎಂಇ / ಬಿಎಸ್ಸಿ / ಡಿಪ್ಲೊಮ/ ಪಿಜಿ ಡಿಗ್ರಿ ಪಾಸ್.
ಪ್ರಾಜೆಕ್ಟ್ ಡಿಪ್ಲೊಮ ಅಸಿಸ್ಟಂಟ್ / ಅಸಿಸ್ಟಂಟ್: ಸಿಎ/ ಐಸಿಡಬ್ಲ್ಯೂಎ / ಡಿಪ್ಲೊಮ / ಪದವಿ ಪಾಸ್.
ಪ್ರಾಜೆಕ್ಟ್ ಟ್ರೇಡ್ ಅಸಿಸ್ಟಂಟ್/ ಆಫೀಸರ್ ಅಸಿಸ್ಟಂಟ್: ಐಟಿಐ / ಡಿಪ್ಲೊಮ (ಸಂಬಂಧಿತ ವಿಭಾಗದಲ್ಲಿ)
ಎಜುಕೇಷನಲ್ ಕನ್ಸಲ್‌ಟಂಟ್ ಇಂಡಿಯಾ’ದಿಂದ 100 ಪಿಜಿಟಿ ಶಿಕ್ಷಕರ ನೇಮಕ: ತಿಂಗಳಿಗೆ Rs.1,40,000 ವೇತನ
ಅರ್ಜಿ ಸಲ್ಲಿಸಲು ಗರಿಷ್ಠ 28 ವರ್ಷ ನಿಗದಿಪಡಿಸಲಾಗಿದೆ. ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಪ್ರಮುಖ ದಿನಾಂಕಗಳು
ಅರ್ಜಿ ಸ್ವೀಕಾರ ಆರಂಭಿಕ ದಿನಾಂಕ: 24-01-2024
ಅರ್ಜಿ ಸ್ವೀಕರಿಸಲು ಕೊನೆ ದಿನಾಂಕ: 14-02-2024
ನೇರ ಸಂದರ್ಶನ ದಿನಾಂಕ: 17-02-2024 ರಿಂದ 22-02-2024
ಭಾರತ್ ಡೈನಾಮಿಕ್ಸ್ ಲಿಮಿಟೆಡ್ (ಬಿಡಿಎಲ್) ನ ಅಧಿಕೃತ ವೆಬ್‌ಸೈಟ್ ವಿಳಾಸ : https://bdl-india.inಅರ್ಜಿ ಸಲ್ಲಿಸಲು ಇ-ಮೇಲ್ ವಿಳಾಸ, ಮೊಬೈಲ್ ನಂಬರ್, ಆಧಾರ್ ಕಾರ್ಡ್, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ಹುದ್ದೆಗೆ ನಿಗದಿತ ವಿದ್ಯಾರ್ಹತೆ ದಾಖಲೆಗಳು, ಕಾರ್ಯಾನುಭವ ದಾಖಲೆಗಳನ್ನು / ಮಾಹಿತಿಗಳನ್ನು ನೀಡಬೇಕಾಗುತ್ತದೆ.