ನವದೆಹಲಿ: ಐಟಿ ಕಂಪನಿಗಳು ಈ ವರ್ಷ 40 ಸಾವಿರಕ್ಕೂ ಹೆಚ್ಚು ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ಯೋಜಿಸಿವೆ ಎಂದು ಟೀಮ್‌ಲೀಸ್ ಎಡ್‌ಟೆಕ್‌ನ ಕರಿಯರ್ ಔಟ್‌ಲುಕ್ ರಿಪೋರ್ಟ್ ವರದಿ ಮಾಡಿದೆ.
ಕೃತಕ ಬುದ್ಧಿಮತ್ತೆ ಹಾಗೂ ಕ್ಷಿಪ್ರಗತಿಯಲ್ಲಿದತ್ತಾಂಶಗಳ ಪರಿಷ್ಕರಣೆಗೆ ಬೇಡಿಕೆ ಹೆಚ್ಚುತ್ತಿದೆ. ಇದು ಐಟಿ ಉದ್ಯಮದ ಬೆಳವಣಿಗೆಗೆ ಬಲ ನೀಡುತ್ತಿದೆ ಎಂದು ನೇಮಕಾತಿ ಸಂಸ್ಥೆ ಟೀಮ್‌ಲೀಸ್ ಡಿಜಿಟಲ್ ವಿಶ್ಲೇಷಣೆ ಮಾಡಿದೆ.ನಿರ್ಮಾಣ ಕಂಪನಿಗಳು ಇದೇ ಜನವರಿಯಿಂದ ಜೂನ್ ಅವಧಿಯಲ್ಲಿ15ರಿಂದ 30 ಪರ್ಸೆಂಟ್‌ಗೂ ಹೆಚ್ಚು ಪದವೀಧರನ್ನು ನೇಮಿಸಿಕೊಳ್ಳಬಹುದು ಎಂದು ಇದೇ ಸಂಸ್ಥೆ ಅಂದಾಜು ಮಾಡಿದೆ.
ಹೊಸಬರು ಎಐ ವ್ಯವಸ್ಥೆಗಳೊಂದಿಗೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಿದ್ಧರಾಗಿರಬೇಕು. ಅಂಥವರಿಗೆ ಅವಕಾಶಗಳು ಸೃಷ್ಟಿಯಾಗುತ್ತಿವೆ,’’ ಎಂದು ಟೀಮ್‌ಲೀಸ್ ಎಡ್‌ಟೆಕ್‌ನ ಸಿಒಒ ಜೈದೀಪ್ ಕೇವಲ್‌ರಮಾನಿ ಹೇಳಿದ್ದಾರೆ.ನೇಮಕಾತಿ ಪ್ರಕ್ರಿಯೆ ಆರಂಭವಾಗುವ ಲಕ್ಷಣಗಳು ಕಾಣಿಸುತ್ತಿದ್ದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಹಣಕಾಸು ವರ್ಷದಲ್ಲಿನೇಮಕಾತಿ ಪ್ರಮಾಣ ಕಡಿಮೆ ಇದ್ದು, ಜಾಗತಿಕ ಆರ್ಥಿಕತೆಯ ವೇಗ ಕುಂಠಿತಗೊಂಡಿದೆ.
ನಮ್ಮ ಇತ್ತೀಚಿನ ಸಮೀಕ್ಷೆಯು ಭಾರತದ ಬೆಳವಣಿಗೆಯ ಕತೆಯಲ್ಲಿಉದ್ಯೋಗದಾತರ ವಿಶ್ವಾಸ ಹೆಚ್ಚಿದೆ. ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಸಕಾರಾತ್ಮಕ ಅಂಶಗಳು ಕಾಣಿಸುತ್ತಿವೆ,’’ ಎಂದು ಟೀಮ್‌ಲೀಸ್ ಸಿಇಒ ಶಂತನು ರೂಜ್ ಹೇಳಿದ್ದಾರೆ.