This is the title of the web page
This is the title of the web page

Live Stream

January 2025
S M T W T F S
 1234
567891011
12131415161718
19202122232425
262728293031  

| Latest Version 9.4.1 |

Health & Fitness

ಆರೋಗ್ಯಕ್ಕೆ ಉತ್ತಮವಾಗಿದೆ ಕಹಿಬೇವಿನ ಎಲೆ, ಇದರ ಪ್ರಯೋಜನಗಳನ್ನು ವಿಕ್ಷಣೆ ಮಾಡಿ?

ಆರೋಗ್ಯಕ್ಕೆ ಉತ್ತಮವಾಗಿದೆ ಕಹಿಬೇವಿನ ಎಲೆ, ಇದರ ಪ್ರಯೋಜನಗಳನ್ನು ವಿಕ್ಷಣೆ ಮಾಡಿ?

ಬೇವಿನ ಸೊಪ್ಪಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವ ಕಾರಣ ಹಲವು ರೋಗಗಳಿಗೆ ಔಷಧಿಯಾಗಿ ಬಳಸಲಾಗುತ್ತದ್ದು, ಹಲವಾರು ಔಷಧೀಯ ಉತ್ಪನ್ನ ತಯಾರಿಕಾ ಕಂಪನಿಗಳು ಈ ಕಹಿಬೇವಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದು, ಕಹಿ ಬೇವು ಗುಣದಲ್ಲಿ ಕಹಿಯಾಗಿದ್ದರೂ ಆರೋಗ್ಯದ ವಿಚಾರದಲ್ಲಿ ಸಿಹಿಯಾಗಿದೆಚರ್ಮದ ರೋಗದಿಂದ ಬಳಲುತ್ತಿರುವವರು ಬೇವಿನ ಸೊಪ್ಪನ್ನು ಹಾಕಿ ಕಾಯಿಸಿದ ನೀರಿನಲ್ಲಿ ಸ್ನಾನ ಮಾಡಿದರೆ ಸಮಸ್ಯೆಗಳು ದೂರವಾಗುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ.

ಜಂತುಹುಳುವಿನ ಸಮಸ್ಯೆಯಿದ್ದವರು 10 ಗ್ರಾಮ್ ಬೇವಿನ ಚಿಗುರೆಲೆ ಹಾಗೂ 10 ಗ್ರಾಮ್ ಓಮವನ್ನು ಅರೆದು ಅದನ್ನು ಜೇನುತುಪ್ಪದಲ್ಲಿ ಬೆರೆಸಿ ತಿನ್ನುವುದು ಒಳ್ಳೆಯದು.ಬೇವು ಮತ್ತು ಅರಶಿನ ಹಾಕಿ ಕಾಯಿಸಿದ ನೀರಿನಲ್ಲಿ ಸಿಡುಬು ರೋಗಿಗಳು ಸ್ನಾನ ಮಾಡಿದರೆ ರೋಗವು ಗುಣಮುಖವಾಗುತ್ತಿದ್ದು, ಚರ್ಮದ ರೋಗದಿಂದ ಬಳಲುತ್ತಿರುವವರು ಬೇವಿನ ಸೊಪ್ಪನ್ನು ಹಾಕಿ ಕಾಯಿಸಿದ ನೀರಿನಲ್ಲಿ ಸ್ನಾನ ಮಾಡಿದರೆ ಸಮಸ್ಯೆಗಳು ದೂರವಾಗುತ್ತದೆ.ಕಣ್ಣಿನ ಉರಿ, ಕಣ್ಣು ಕೆಂಪಗಾಗುವ ಸಮಸ್ಯೆಯಿದ್ದರೆ ಕಹಿಬೇವಿನ ಎಲೆಯ ಕಷಾಯವನ್ನು ಮಾಡಿ ಸೇವಿಸಿದರೆ ಶಮನವಾಗುತ್ತದೆ.

ಬೇವು ಮತ್ತು ಅರಶಿನ ಹಾಕಿ ಕಾಯಿಸಿದ ನೀರಿನಲ್ಲಿ ಸಿಡುಬು ರೋಗಿಗಳು ಸ್ನಾನ ಮಾಡಿದರೆ ರೋಗವು ಗುಣಮುಖವಾಗುತ್ತಿದ್ದು, ಒಣಗಿದ ಬೇವಿನೆಲೆಯ ಪುಡಿ ಮತ್ತು ತುಳಸಿ ಎಲೆಯ ಪುಡಿಗಳನ್ನು ಸೇರಿಸಿ, ನೀರು ಹಾಕಿ ಪೇಸ್ಟ್ ತಯಾರಿಸಿಕೊಂಡು, ಈ ಮಿಶ್ರಣವನ್ನು ಕೂದಲಿನ ಬುಡಕ್ಕೆ ಹಚ್ಚಿ ಎರಡು ಗಂಟೆಯ ನಂತರ ಸ್ನಾನ ಮಾಡುವುದರಿಂದ ತಲೆ ಕೂದಲಿನ ಹೊಟ್ಟು ಕಡಿಮೆಯಾಗುತ್ತದೆ.

ಮೊಡವೆಯ ನಿವಾರಣೆಗಾಗಿ ಬೇವು, ಲೋದ್ರ, ಅರಿಶಿನ, ಕೆಂಪು ಶ್ರೀಗಂಧ, ಸುಗಂಧಿ ಬೇರು, ಅತಿಮಧುರ, ಬಜೆ, ಮಂಜಿಷ್ಟಗಳನ್ನು ತಲಾ 10 ಗ್ರಾಮಿನಂತೆ ತೆಗೆದುಕೊಂಡು, ನುಣ್ಣಗೆ ಪುಡಿ ಮಾಡಿ ಮೊಸರಿನಲ್ಲಿ ಕಲಸಿ ಮುಖಕ್ಕೆ ಹಚ್ಚಿಕೊಂಡು ಅರ್ಧಗಂಟೆಯ ನಂತರ ಮುಖ ತೊಳೆಯಬೇಕು.ಕಹಿಬೇವಿನ ಎಲೆ ಹಾಗೂ ಗೋರಂಟಿ ಎಲೆಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಸ್ವಲ್ಪ ನೀರಿನಲ್ಲಿ ಹಾಕಿ ನೀರೆಲ್ಲ ಇಂಗುವವರೆಗೆ ಕುದಿಸಬೇಕು. ಈ ನೀರಿಗೆ ಹೊಂಗೆ ಎಣ್ಣೆ ಹಾಕಿ ಇಸುಬಿಗೆ ಹಚ್ಚಿದರೆ ಇಸುಬುವಿನ ಸಮಸ್ಯೆಯೂ ನಿವಾರಣೆಯಾಗುತ್ತದೆ.

Nimma Suddi
";