This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

National NewsPolitics News

ಬಿಜೆಪಿ ತಪ್ಪಾಗಿ ದೇಣಿಗೆ ಪಡೆದು ತನ್ನ ಬೊಕ್ಕಸ ತುಂಬಿಕೊಂಡಿದ್ದು, ಸದ್ಯಕ್ಕೆ ಕಾಂಗ್ರೆಸ್​ನ ಬ್ಯಾಂಕ್ ಖಾತೆಗಳನ್ನು ರದ್ದುಪಡಿಸಿದೆ: ಕಾಂಗ್ರೆಸ್​ ಆರೋಪ

ಬಿಜೆಪಿ ತಪ್ಪಾಗಿ ದೇಣಿಗೆ ಪಡೆದು ತನ್ನ ಬೊಕ್ಕಸ ತುಂಬಿಕೊಂಡಿದ್ದು, ಸದ್ಯಕ್ಕೆ ಕಾಂಗ್ರೆಸ್​ನ ಬ್ಯಾಂಕ್ ಖಾತೆಗಳನ್ನು ರದ್ದುಪಡಿಸಿದೆ: ಕಾಂಗ್ರೆಸ್​ ಆರೋಪ

ಬಿಜೆಪಿ ತಪ್ಪಾಗಿ ದೇಣಿಗೆ ಪಡೆದು ತನ್ನ ಬೊಕ್ಕಸ ತುಂಬಿಕೊಂಡಿದ್ದು, ಸದ್ಯಕ್ಕೆ ಕಾಂಗ್ರೆಸ್​ನ ಬ್ಯಾಂಕ್ ಖಾತೆಗಳನ್ನು ರದ್ದುಪಡಿಸಿದೆ ಎಂದು ಕಾಂಗ್ರೆಸ್​ ಗಂಭೀರ ಆರೋಪ ಮಾಡಿರುವ ಮಾಹಿತಿ ಬೆಳಕಿಗೆ ಬಂದಿದೆ.

ಇವತ್ತು ಕಾಂಗ್ರೆಸ್ ಚುನಾವಣೆ ಎದುರಿಸುವ ಬಿಕ್ಕಟ್ಟು ಎದುರಿಸುತ್ತಿದೆ. ಪ್ರಚಾರಕ್ಕಾಗಿ ನಮ್ಮ ಬಳಿ ಹಣವಿಲ್ಲ. ಸೀತಾರಾಮ್ ಕೇಸರಿ ಅವರ ಕಾಲದ ನಿಧಿಗೆ ಸಂಬಂಧಿಸಿದಂತೆ ನಮಗೆ ನೋಟಿಸ್ ನೀಡಲಾಗುತ್ತಿದೆ ಎಂದು ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ದುರದೃಷ್ಟವಶಾತ್ ಇತ್ತೀಚೆಗೆ ಸುಪ್ರೀಂಕೋರ್ಟ್​ ಮಧ್ಯಪ್ರವೇಶಿಸಿದ ನಂತರ ಚುನಾವಣಾ ಬಾಂಡ್​ಗಳಿಗೆ ಸಂಬಂಧಿಸಿದಂತೆ ಹೊರಬಿದ್ದಿರುವ ಸಂಗತಿಗಳು ಆತಂಕಕಾರಿ ಹಾಗೂ ನಾಚಿಕೆಗೇಡಿನ ಅಂಗತಿಯಾಗಿದೆ ಎಂದು ಅವರು ಹೇಳಿದರು.

ಇದು ದೇಶದ ಪ್ರತಿಷ್ಠೆಗೆ ಧಕ್ಕೆ ತಂದಿದೆ, 70 ವರ್ಷಗಳಲ್ಲಿ ನಮ್ಮ ದೇಶದಲ್ಲಿ ನಿರ್ಮಿಸಲಾದ ನ್ಯಾಯಯುತ ಚುನಾವಣೆ ಹಾಗೂ ಆರೋಗ್ಯಕರ ಪ್ರಜಾಪ್ರಭುತ್ವದ ಚಿತ್ರವನ್ನು ಪ್ರಶ್ನೆ ಮಾಡಲಾಗುತ್ತಿದೆ.

ಕಾಂಗ್ರೆಸ್​ನ ಹಿರಿಯ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್​ ಪತ್ರಿಕಾಗೋಷ್ಠಿ ನಡೆಸಿತು. ಐಟಿಯಂತಹ ಸಾಂವಿಧಾನಿಕ ಹಾಗೂ ನ್ಯಾಯಾಂಗ ಸಂಸ್ಥೆಗಳ ಮೇಲೆ ಆಡಳಿತ ಪಕ್ಷವು ನೇರ ಅಥವಾ ಪರೋಕ್ಷ ನಿಯಂತ್ರಣವನ್ನು ಹೊಂದಿರಬಾರದು ಎಂದಿದ್ದಾರೆ.

Nimma Suddi
";