ಅಯೋಧ್ಯೆ: ಬಿಜೆಪಿಯ ಹಿರಿಯ ನಾಯಕಿ ಉಮಾಭಾರತಿ ಇಂದು ಅಯೋಧ್ಯೆಯಲ್ಲಿದ್ದಾರೆ. ಅವರು 32 ವರ್ಷ 46 ದಿನಗಳ ಹಿಂದೆ ಇದೇ ಜಾಗದಲ್ಲಿದ್ದರು. ಅಂದು ಬಾಬರಿ ಮಸೀದಿಯನ್ನು ಹಿಂದೂ ಕಾರ್ಯಕರ್ತರು ಧ್ವಂಸಗೊಳಿಸಿದ್ದರು ಎಂದು ಮಾಹಿತಿ ತಿಳಿದು ಬಂದಿದೆ.
ಇಂದು, ಅದೇ ಸ್ಥಳದಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣವಾಗಿದ್ದು, ಲಕ್ಷಾಂತರ ಹಿಂದೂಗಳು ಭಗವಾನ್ ರಾಮನ ಜನ್ಮಸ್ಥಳವೆಂದು ನಂಬುತ್ತಾರೆ. ದೇವಸ್ಥಾನದ ಆಂದೋಲನದ ಮುಂಚೂಣಿಯಲ್ಲಿದ್ದ ಬಿಜೆಪಿ ನಾಯಕಿ ಉಮಾಭಾರತಿ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಮಮಂದಿರದಲ್ಲಿ ರಾಮಲಲ್ಲಾ ‘ಪ್ರಾಣ ಪ್ರತಿಷ್ಠಾ’ದ ಕಾರ್ಯ ನಡೆಸುವ ಕೊನೆಯ ಕ್ಷಣದ ಸಿದ್ಧತೆಗಳ ನಡುವೆ, ಉಮಾಭಾರತಿ ಅವರು ದೇವಾಲಯದ ಆಂದೋಲನದ ಇನ್ನೊಬ್ಬ ಪ್ರಮುಖ ನಾಯಕಿ ಸಾಧ್ವಿ ಋತಂಭರಾ ಅವರನ್ನು ಅಪ್ಪಿಕೊಳ್ಳುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಡಿಸೆಂಬರ್ 6, 1992 ರಂದು ಕ್ಲಿಕ್ ಮಾಡಿದ ಚಿತ್ರದಲ್ಲಿ ಉಮಾ ಭಾರತಿ ಬಿಜೆಪಿಯ ಹಿರಿಯ ಮುರಳಿ ಮನೋಹರ್ ಜೋಶಿ ಅವರನ್ನು ತೋರಿಸಿದೆ. ಉಮಾ ಭಾರತಿ ಮತ್ತು ಜೋಶಿ ಇಬ್ಬರೂ ನಗುತ್ತಿರುವ ಚಿತ್ರವಾಗಿದೆ ಇದು.ಅಂದಹಾಗೆ 90ರ ಹರೆಯದ ಜೋಶಿ ಅವರು ಈ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ . ರಾಮಜನ್ಮಭೂಮಿ ಆಂದೋಲನದ ಮುಖ್ಯ ವಾಸ್ತುಶಿಲ್ಪಿ ಎಲ್‌ಕೆ ಅಡ್ವಾಣಿ ಕೂಡ ಪ್ರತಿಕೂಲ ಹವಾಮಾನದಿಂದಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ.
ಇಬ್ಬರ ಕಣ್ಣಲ್ಲೂ ಆನಂದ ಭಾಷ್ಪ. ಅವರ ರಾಜಕೀಯ ಹೋರಾಟ ಫಲಕೊಟ್ಟಿದ್ದು, ಈ ಖುಷಿ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು.ನಾನು ಅಯೋಧ್ಯೆಯ ರಾಮ ಮಂದಿರದ ಮುಂದೆ ಇದ್ದೇನೆ, ನಾವು ರಾಮ ಲಲ್ಲಾಗಾಗಿ ಕಾಯುತ್ತಿದ್ದೇವೆ ಎಂದು ಉಮಾಭಾರತಿ ಫೋಟೊವೊಂದನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ವೃದ್ಧಾಪ್ಯದ ಕಾರಣದಿಂದ ದೂರವಿರಲು ಹಿರಿಯ ನಾಯಕರಲ್ಲಿ ಕೇಳಿದ್ದೇವೆ ಎಂದು ದೇವಸ್ಥಾನದ ಟ್ರಸ್ಟ್ ಹೇಳಿದ ನಂತರ ರಾಜಕೀಯ ವಿವಾದ ಭುಗಿಲೆದ್ದಿತ್ತು.ನಂತರ, ಎರಡೂ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.