This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Health & Fitness

ಮಹಿಳೆಯರಲ್ಲಿ ಗರ್ಭಪಾತದ ಅಪಾಯವಾಗಲು ಕಾರಣ

ಮಹಿಳೆಯರಲ್ಲಿ ಗರ್ಭಪಾತದ ಅಪಾಯವಾಗಲು ಕಾರಣ

ತಾಯಿಯಾಗುವುದು ಪ್ರತಿಯೊಬ್ಬ ಮಹಿಳೆಗೂ ಅತ್ಯಂತ ವಿಶೇಷ ಭಾವನೆ. ಆದರೆ ಇಂದಿನ ದಿನಗಳಲ್ಲಿ ವೃತ್ತಿಜೀವನಕ್ಕೆ ಅನುಕೂಲವಾಗುವಂತೆ ಅಥವಾ ಇನ್ನಿತರ ಕಾರಣಗಳಿಂದ, ತಡವಾಗಿ ಮದುವೆಯಾಗುವುದು ಬಳಿಕ ಮಗು ಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುವುದು ಸಾಮಾನ್ಯವಾಗುತ್ತಿದೆ.

ಅದರಲ್ಲಿಯೂ ಮಹಿಳೆಯರು ತುಂಬಾ ವಯಸ್ಸಾದ ಮೇಲೆ ಮಗು ಮಾಡಿಕೊಳ್ಳಲು ಯೋಜಿಸುತ್ತಿದ್ದಾರೆ, ಇದರಿಂದಾಗಿ ಗರ್ಭಪಾತ ಪ್ರಕರಣಗಳು ಹೆಚ್ಚುತ್ತಿದೆ. ಇದರ ಹೊರತಾಗಿ ಮಹಿಳೆಯರಲ್ಲಿ ಗರ್ಭಪಾತದ ಅಪಾಯ ಹೆಚ್ಚಾಗಲು ಅನೇಕ ಕಾರಣಗಳಿವೆ. ಅವು ಯಾವವು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಗರ್ಭಧರಿಸಲು ಕಷ್ಟವಾಗುತ್ತದೆ ಜೊತೆಗೆ ಗರ್ಭ ಧರಿಸಿದರೆ ಗರ್ಭಪಾತದ ಸಮಸ್ಯೆ ಉಂಟಾಗಬಹುದು. ಆದ್ದರಿಂದ, 25 ರಿಂದ 30 ವರ್ಷ ವಯಸ್ಸು ಮಕ್ಕಳನ್ನು ಪಡೆಯಲು ಉತ್ತಮ ಸಮಯ ಎಂದು ಹೇಳಲಾಗುತ್ತದೆ.

ಇತ್ತೀಚಿನ ದಿನಗಳಲ್ಲಿ, ಧೂಮಪಾನ ಮತ್ತು ಮದ್ಯಪಾನ ಮಾಡುವ ಪ್ರವೃತ್ತಿ ಮಹಿಳೆಯರಲ್ಲಿ ಸಾಕಷ್ಟು ಹೆಚ್ಚಾಗಿದೆ. ಇದರಿಂದಾಗಿ ಮಹಿಳೆಯರ ಅಂಡಾಣುಗಳ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅಂತಹ ಮಹಿಳೆಯರು ಗರ್ಭಧರಿಸಲು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಾರೆ ಜೊತೆಗೆ ಅವರಲ್ಲಿ ಗರ್ಭಪಾತದ ಪ್ರಕರಣಗಳು ಸಹ ಹೆಚ್ಚಾಗಿ ಕಂಡುಬರುತ್ತವೆ.

ಸ್ತ್ರೀರೋಗ ತಜ್ಞ ಡಾ. ನೂಪುರ್ ಗುಪ್ತಾ ಅವರು ಹೇಳುವ ಪ್ರಕಾರ, ವಯಸ್ಸು ಹೆಚ್ಚಾದಂತೆ, ಮಹಿಳೆಯರಲ್ಲಿ ಅನೇಕ ಸಮಸ್ಯೆಗಳು ಕಂಡುಬರಲು ಪ್ರಾರಂಭಿಸುತ್ತವೆ, ಅವುಗಳಲ್ಲಿ ಒಂದು ಗರ್ಭಾಶಯದಲ್ಲಿ ಕಡಿಮೆ ಅಂಡಾಣುಗಳ ಉತ್ಪತ್ತಿ ಮತ್ತು ಕಳಪೆ ಗುಣಮಟ್ಟದ ಅಂಡಾಣುಗಳ ಸಮಸ್ಯೆಯೂ ಒಂದಾಗಿದ್ದು, 30 ರಿಂದ 35 ವರ್ಷದ ನಂತರ ಮಗು ಮಾಡಿಕೊಳ್ಳಲು ಯೋಚಿಸಿದಾಗ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.