This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

National News

ಆರೆಸ್ಸೆಸ್ ತರಬೇತಿ ವಿಷಯ, ಪಠ್ಯಕ್ರಮ ಹಾಗೂ ವಿಧಾನದಲ್ಲಿ ಬದಲಾವಣೆ

ಆರೆಸ್ಸೆಸ್ ತರಬೇತಿ ವಿಷಯ, ಪಠ್ಯಕ್ರಮ ಹಾಗೂ ವಿಧಾನದಲ್ಲಿ ಬದಲಾವಣೆ

ನಾಗಪುರ: ರಾಷ್ಟ್ರೀಯ ಸ್ವಯಂ ಸೇವಕ ಸಂಘ ತನ್ನ ವಾರ್ಷಿಕ ತರಬೇತಿ ಕಾರ್ಯಕ್ರಮಗಳ ವಿಷಯ ಹಾಗೂ ನಾಮಕರಣಗಳಲ್ಲಿ ಬದಲಾವಣೆಗಳನ್ನು ತಂದಿದ್ದು, ಈ ಪರಿಷ್ಕರಣೆಗಳು ಪ್ರಸಕ್ತ ವರ್ಷದಿಂದಲೇ ಜಾರಿಗೆ ಬರಲಿವೆ ಎಂದು ಆರೆಸ್ಸೆಸ್ ಜಂಟಿ ಪ್ರಧಾನ ಕಾರ್ಯದರ್ಶಿ ಮನಮೋಹನ್ ವೈದ್ಯ ಅವರು ಸೂಚಿಸಿದರು.

ಆರೆಸ್ಸೆಸ್‌ನ ವಾರ್ಷಿಕ ‘ಅಖಿಲ ಭಾರತೀಯ ಪ್ರತಿನಿಧಿ ಸಭಾ’ ಸಮಾವೇಶದ ವೇಳೆ ಸುದ್ದಿಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದ್ದು,
ಏಳು ದಿನಗಳ ‘ಪ್ರಾಥಮಿಕ ಶಿಕ್ಷಾ ವರ್ಗ’, 20 ದಿನಗಳ ‘ಸಂಘ ಶಿಕ್ಷಾ ವರ್ಗ- ಪ್ರಥಮ ವರ್ಷ’, 20 ದಿನಗಳ ‘ಸಂಘ ಶಿಕ್ಷಾ ವರ್ಗ- ದ್ವಿತೀಯ ವರ್ಷ’ ಮತ್ತು 25 ದಿನಗಳ ‘ಸಂಘ ಶಿಕ್ಷಾ ವರ್ಗ’- ತೃತೀಯ ವರ್ಷ’ದ ತರಬೇತಿ ಕಾರ್ಯಕ್ರಮಗಳಲ್ಲಿ ಕೊಂಚ ಬದಲಾವಣೆಗಳನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

‘ಪ್ರಾಥಮಿಕ ಶಿಕ್ಷಾ ವರ್ಗ’ದ ವೇಳೆ ಹೊಸ ನೇಮಕಾತಿಗಳನ್ನು ನಡೆಸಲಾಗುತ್ತಿದ್ದು, ಬಳಿಕ 15 ದಿನಗಳ ‘ಸಂಘ ಶಿಕ್ಷ ವರ್ಗ’ ನಡೆಯುತ್ತಿದ್ದು,ಇದಕ್ಕೆ ಈ ಹಿಂದೆ ‘ಸಂಘ ಶಿಕ್ಷಾ ವರ್ಗ- ಪ್ರಥಮ ವರ್ಷ’ ಎಂದು ಕರೆಯಲಾಗುತ್ತಿತ್ತು. ಇದು 20 ದಿನಗಳ ಕಾಲ ನಡೆಯುತ್ತಿತ್ತು.ಈ ಮುಂಚಿನ ‘ದ್ವಿತೀಯ ವರ್ಷ’ ಮತ್ತು ‘ತೃತೀಯ ವರ್ಷ’ದ ತರಬೇತಿ ತರಗತಿಗಳನ್ನು ಇನ್ನು ಮುಂದೆ ‘ಕಾರ್ಯಕರ್ತ ವಿಕಾಸ ವರ್ಗ- 1 ಮತ್ತು ‘ಕಾರ್ಯಕರ್ತ ವಿಕಾಸ ವರ್ಗ- 2’ ಎಂದು ಕರೆಯಲಾಗುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ.

";