This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

Politics News

ಪಡಿತರ ಅಕ್ಕಿ ಮಾರಿದರೆ ಕಠಿಣ ಕ್ರಮ : ಚರಂತಿಮಠ

ತಾಲೂಕಾ ಮಟ್ಟದ ಜಾಗೃತಿ ಸಮಿತಿ ಸಭೆ

ನಿಮ್ಮ ಸುದ್ದಿ ಬಾಗಲಕೋಟೆ

ಜಿಲ್ಲೆಯಲ್ಲಿ ಪಡಿತರ ಚೀಟಿದಾರರಿಗೆ ವಿತರಿಸಲಾದ ಅಕ್ಕಿಯನ್ನು ಬೇರೆಯವರಿಗೆ ಮಾರಾಟ ಮಾಡಿದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಕಠಿಣ ಕ್ರಮಕೈಗೊಳ್ಳುವಂತೆ ಶಾಸಕ ವೀರಣ್ಣ ಚರಂತಿಮಠ ಅಧಿಕಾರಿಗಳಿಗೆ ಸೂಚಿಸಿದರು.

ನವನಗರದ ತಹಶೀಲ್ದಾರ ಕಚೇರಿಯ ಸಭಾಂಗಣದಲ್ಲಿಂದು ಜರುಗಿದ ಬಾಗಲಕೋಟೆ ತಾಲೂಕಿನ ಜಾಗೃತಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ನೀಡಲಾಗುತ್ತಿರುವ ಅಕ್ಕಿಯನ್ನು ಮಾರಾಟಮಾಡುವಂತಿಲ್ಲ. ಮಾರಾಟ ಮಾಡುವ ಹಾಗೂ ತೆಗೆದುಕೊಳ್ಳುವವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು. ಈ ಬಗ್ಗೆ ಬಾಗಲಕೋಟೆ ನಗರದಲ್ಲಿ ಸ್ಥಾಪಿಸಲಾದ ಜಾಗೃತಿ ಸಮಿತಿ ಸದಸ್ಯರು ನಿಗಾವಹಿಸುವಂತೆ ತಿಳಿಸಿದರು.

ಜಿಲ್ಲೆಯಲ್ಲಿರುವ ಅನರ್ಹರು ಸಹ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ ಪಡೆದಿದ್ದು, ಅಂತರವರನ್ನು ಪತ್ತೆ ಹಚ್ಚುವ ಕಾರ್ಯವಾಗಬೇಕು. ವಿತರಣೆಯಾಗುವ ಆಹಾರಧಾನ್ಯಗಳ ಕಲಬರಕೆಯನ್ನು ತಡೆಗಟ್ಟಿ ಅಂತಹ ವ್ಯವಹಾರ ಕಂಡುಬಂದಲ್ಲಿ ಪ್ರಕರಣದ ದಾಖಲಿಸಿ ಕ್ರಮಕೈಗೊಳ್ಳಬೇಕು. ನಿಗದಿತ ಪ್ರಮಾಣದಲ್ಲಿ ಆಹಾರಧಾನ್ಯ ವಿತರಿಣೆಯಾಗಬೇಕು. ಈ ಬಗ್ಗೆ ದೂರುಗಳು ಬಂದಲ್ಲಿ ಪರಿಶೀಲಿಸಿ ಕ್ರಮಕೈಗೊಳ್ಳುವಂತೆ ಶಾಸಕರು ತಿಳಿಸಿದರು. ಜಾಗೃತಿ ಸಮಿತಿಯವರು ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು ತಿಳಿಸಿದರು.

ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯಹಾರಗಳ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀಶೈಲ ಕಂಕಣವಾಡಿ ಮಾತನಾಡಿ ಬಾಗಲಕೋಟೆ ನಗರ ವ್ಯಾಪ್ತಿಯಲ್ಲಿ ಒಟ್ಟು 22 ನ್ಯಾಯಬೆಲೆ ಅಂಗಡಿಗಳಿದ್ದು, ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಸಮರ್ಪಕವಾಗಿ ಪಡಿತರಧಾನ್ಯ ವಿತರಿಸಲಾಗುತ್ತಿದೆ. ಬಾಗಲಕೋಟೆ ತಾಲೂಕಿನಲ್ಲಿ ಒಟ್ಟು 64617 ಪಡಿತರ ಚೀಟಿಗಳಿದ್ದು, ಅದರಲ್ಲಿ 7917 ಎಎವೈ, 47588 ಬಿಪಿಎಲ್ ಹಾಗೂ 9115 ಎಪಿಎಲ್ ಕಾರ್ಡಗಳಿವೆ. ಈಗಾಗಲೇ ತಾಲೂಕಿನ 1832 ಅನರ್ಹ ಕಾರ್ಡಗಳನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದರು.

ಕೋವಿಡ್ ಹಿನ್ನಲೆಯಲ್ಲಿ ಅಗತ್ಯ ದಿನಸಿ ವಸ್ತುಗಳನ್ನು ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡುವ ಸಗಟು, ಚಿಲ್ಲರೆ ಕಿರಾಣಿ ವರ್ತಕರ ವಿರುದ್ದ ಜಿಲ್ಲಾ ಮತ್ತು ತಾಲೂಕಾ ಮಟ್ಟದಲ್ಲಿ ಸ್ಥಾಪಿಸಲಾದ ವಿಶೇಷ ತಂಡದ ಮೂಲಕ 32 ಕಡೆಗಳಲ್ಲಿ ದಾಳಿ ನಡೆಸಿ ದಂಡ ವಸೂಲಿ ಮಾಡಲಾಗಿದೆ. ಅಕ್ಕಿಯ ಜೊತೆ ಜೋಳ ವಿತರಣೆಗೆ ಕನಿಷ್ಠ ಬೆಂಬಲ ಯೋಜನೆಯಡಿ 2620 ರೂ.ಗಳಲ್ಲಿ ಹೈಬ್ರಿಡ್ ಜೋಳ ಹಾಗೂ 2640 ರೂ.ಗಳಲ್ಲಿ ಮಾಲ್ದಂಡಿ ಜೋಳ ಖರೀದಿಗಾಗಿ 31 ಖರೀದಿ ಕೇಂದ್ರದ ಮೂಲಕ 4621 ಕ್ವಿಂಟಲ್ ಬಿಳಿಜೋಳ ಖರೀದಿಸಲಾಗಿದೆ. ಜೂನ್ ಮತ್ತು ಜುಲೈ ಮಾಹೆಯಲ್ಲಿ ಜೋಳ ವಿತರಿಸಲಾಗಿದೆ ಎಂದು ತಿಳಿಸಿದರು.

ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಮೇ-2021 ರಿಂದ ನವೆಂಬರ ವರೆಗೆ ಕೋವಿಡ್ ಹಿನ್ನಲೆಯಲ್ಲಿ ಎಎವೈ ಮತ್ತು ಬಿಪಿಎಲ್ ಚೀಟಿದಾರರಿಗೆ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ವಿತರಿಸಲಾಗುತ್ತಿದೆ. ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿ 3 ತಿಂಗಳ ಉಚಿತ ಗ್ಯಾಸ್ ರಿಫಿಲ್ ನೀಡಲಾಗಿದೆ. ದಾಸೋಹ ಯೋಜನೆಯಡಿ ವೃದ್ದಾಶ್ರಮ, ಅಂಧ ಮಕ್ಕಳ ಶಾಲೆ, ಬಡ ಮಕ್ಕಳ ವಿದ್ಯಾರ್ಥಿ ನಿಲಯ, ಬಿಕ್ಷುಕರ ಪುನರ್ವಸತಿ ಕೇಂದ್ರ ಸೇರಿದಂತೆ 6 ಸಂಸ್ಥೆಗಳಲ್ಲಿರುವ 174 ಫಲಾನುಭವಿಗಳಿಗೆ ಮಾಹೆಯಾನ ಉಚಿತವಾಗಿ 10 ಕೆಜಿ ಅಕ್ಕಿ, 5 ಕೆಜಿ ಗೋದಿ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಜಾಗೃತಿ ಸಮಿತಿ ಸದಸ್ಯರ ಸಲಹೆಗಳನ್ನು ಪಡೆಯಲಾಯಿತು. ಸಭೆಯಲ್ಲಿ ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ ಸೇರಿದಂತೆ ಜಾಗೃತಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಛಾಯಾಚಿತ್ರ ಲಗತ್ತಿಸಿದೆ. 4 ಮತ್ತು 5

*ಪುಷ್ಪ ಕೃಷಿ ತರಬೇತಿ
ಬಾಗಲಕೋಟೆ

ಕೋವಿಡ್ ಹಿನ್ನಲೆಯಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಿಂದ ಆಗಸ್ಟ 3 ರಂದು ಬೆಳಿಗ್ಗೆ 11 ರಿಂದ 12 ರ ವರೆಗೆ ಗೂಗಲ್ ಮೀಟ್ ಮೂಲಕ ಪುಷ್ಪಕೃಷಿ ಕುರಿತು ಆನ್‍ಲೈನ್ ತರಬೇತಿ ಹಮ್ಮಿಕೊಳ್ಳಲಾಗಿದೆ. ಆಸಕ್ತರು https://meet.google.com/ihy-qhhq-zju ಗೂಗಲ್ ಲಿಂಕ್‍ನ ಮೂಲಕ ತರಬೇತಿಗೆ ಹಾಜರಾಗಿ ಇದರ ಸದುಪಯೋಗ ಪಡೆಯಬೇಕೆಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Nimma Suddi
";