ದೆಹಲಿ: ರಾಜ್ಯದಲ್ಲಿ ಪೊಲೀಸ್ ಕಾನ್ಸ್‌ಟೇಬಲ್‌ಗಳ ನೇಮಕಾತಿಗಾಗಿ ಇತ್ತೀಚೆಗೆ ನಡೆದ ಪರೀಕ್ಷೆಯನ್ನು ರದ್ದುಗೊಳಿಸುವುದಾಗಿ ಉತ್ತರ ಪ್ರದೇಶ ಸರ್ಕಾರ ಶನಿವಾರ ಹೇಳಿದೆ ಎಂದು ಮಾಹಿತಿ ತಿಳಿದು ಬಂದಿದೆ.
ಈ ಬಗ್ಗೆ ‘ಎಕ್ಸ್’ ಪೋಸ್ಟ್‌ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರು ತಿಂಗಳೊಳಗೆ ಮರು ಪರೀಕ್ಷೆ ನಡೆಸಲು ಆದೇಶ ಹೊರಡಿಸಲಾಗಿದೆ ಎಂದು ಹೇಳಿದರು. “ಪರೀಕ್ಷೆ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಯುವಕರ ಶ್ರಮ ಹಾಳಾಗುವಂತೆ ಮಾಡುವವರನ್ನು ಯಾವುದೇ ಸಂದರ್ಭದಲ್ಲೂ ಬಿಡುವುದಿಲ್ಲ.
ಇಂತಹ ಅಶಿಸ್ತಿನ ಅಂಶಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಖಚಿತ,” ಎಂದು ಅವರು ಹೇಳಿದ್ದಾರೆ. 2024 ಫೆಬ್ರವರಿ 17 ಮತ್ತು 18ರಂದು ಪರೀಕ್ಷೆ ನಡೆದಿತ್ತು.ವಿವಿಧ ವಿವಾದಗಳ ಹಿನ್ನೆಲೆಯಲ್ಲಿ ಪೊಲೀಸ್ ನೇಮಕಾತಿ ಪರೀಕ್ಷೆಗೆ ಆದೇಶ ಹೊರಡಿಸಲಾಗಿದೆ.
ಪ್ರಶ್ನೆ ಪತ್ರಿಕೆ ಸೋರಿಕೆಗಳು, ಒಬ್ಬರ ಬದಲು ಇನ್ನೊಬ್ಬರು ಪರೀಕ್ಷೆ ಬರೆಯುವುದು, ಪ್ರವೇಶ ಕಾರ್ಡ್‌ನಲ್ಲಿ ಅನುಚಿತವಾದ ಚಿತ್ರ, ಕಿಕ್ಕಿರಿದ ರೈಲುಗಳು ಮತ್ತು ಪರೀಕ್ಷಾ ಆವರಣದಲ್ಲಿ ಇತರ ತಪ್ಪು ವ್ಯವಸ್ಥೆಗಳು ವರದಿ ಆಗಿದ್ದವುಈ ಹಿಂದೆ, ಈ ವಿಷಯದ ತನಿಖೆಗಾಗಿ, ನೇಮಕಾತಿ ಮಂಡಳಿಯಿಂದ ಆಂತರಿಕ ಸಮಿತಿಯನ್ನು ರಚಿಸಲಾಗಿತ್ತು. ಪೇಪರ್ ಸೋರಿಕೆ ಪ್ರಕರಣದ ತನಿಖೆಯನ್ನು ಐಪಿಎಸ್ ರೇಣುಕಾ ಮಿಶ್ರಾ ಮತ್ತು ಐಪಿಎಸ್ ಸತ್ಯಾರ್ಥ್ ಪಂಕಜ್ ನಡೆಸುತ್ತಿದ್ದರು. ಫೆಬ್ರವರಿ 23, 2024 ರ ಹೊತ್ತಿಗೆ, ಪುರಾವೆಗಳೊಂದಿಗೆ ಸುಮಾರು 1496 ದೂರುಗಳನ್ನು ಸ್ವೀಕರಿಸಲಾಗಿದ್ದು ಈ ದೂರುಗಳ ಬಗ್ಗೆ ಸಮಿತಿಯು ತನಿಖೆ ನಡೆಸುತ್ತಿದೆ.