This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

National NewsPolitics News

ಕಾಂಗ್ರೆಸ್ ಮತ್ತು ಸಮಾಜವಾದಿ ಸಿದ್ಧಾಂತದವರೂ ನಕಲಿ ವೇಷ ಧರಿಸಿ ಮತ ಕೇಳಲು ಬರುತ್ತಿದ್ದಾರೆ:ಮಧ್ಯಪ್ರದೇಶ ಸಿಎಂ

ಕಾಂಗ್ರೆಸ್ ಮತ್ತು ಸಮಾಜವಾದಿ ಸಿದ್ಧಾಂತದವರೂ ನಕಲಿ ವೇಷ ಧರಿಸಿ ಮತ ಕೇಳಲು ಬರುತ್ತಿದ್ದಾರೆ:ಮಧ್ಯಪ್ರದೇಶ ಸಿಎಂ

ವಿರೋಧ ಪಕ್ಷದ ನಾಯಕರನ್ನು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ರಾವಣನ ಅನುಯಾಯಿಗಳು ಎಂದು ಬಣ್ಣಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಶ್ರೀರಾಮನನ್ನು ನಂಬಬೇಡಿ, ಕೃಷ್ಣನನ್ನು ನಂಬಬೇಡಿ ಎಂದು ಹೇಳುವವರು, ಭಗವದ್ಗೀತೆ, ಗೋವಿನ ಬಗ್ಗೆ ನಂಬಿಕೆ ಇಲ್ಲದವರು ರಾವಣನಂತೆ ಮಾರುವೇಷ ತೊಟ್ಟು ಸೀತೆಯನ್ನು ಅಪಹರಿಸಿದಂತೆ ಇಲ್ಲಿ ಮತವನ್ನು ಅಪಹರಿಸಲು ಬಂದಿದ್ದಾರೆ ಎಂದರು.

ಸನಾತನ ಧರ್ಮವನ್ನು ಅವಮಾನಿಸುತ್ತಿದೆ ಮತ್ತು ನಂಬಿಕೆಯೊಂದಿಗೆ ಆಟವಾಡುತ್ತಿದೆ ಎಂದು ಆರೋಪಿಸಿದ ಅವರು ಇಂಡಿಯಾ ಒಕ್ಕೂಟವನ್ನು ಟೀಕಿಸಿದರು ಮತ್ತು ಪ್ರಜಾಪ್ರಭುತ್ವವನ್ನು ದುರುಪಯೋಗಪಡಿಸಿಕೊಳ್ಳುವವರನ್ನು ಸೋಲಿಸಲು ಜನರಿಗೆ ಮನವಿ ಮಾಡಿದರು.

ಗಾಜಿಪುರದಲ್ಲಿ ಕಾರ್ಖಾನೆಯೇ ಇಲ್ಲ. ಇಲ್ಲಿ ಕೇವಲ ಒಂದು ಕುಟುಂಬದ ಲೂಟಿ ಉದ್ಯಮ ನಡೆಯುವುದರಿಂದ ಇಲ್ಲಿ ಕೈಗಾರಿಕೆ ನಡೆಯುತ್ತಿಲ್ಲ. ಭಯೋತ್ಪಾದನೆಯ ಅಬ್ಬರ ಸೃಷ್ಟಿಯಾಗಿದೆ. ನೆನಪಿರಲಿ, ಎಷ್ಟೇ ಅವ್ಯವಸ್ಥೆ ಮಾಡಿದರೂ ಈಗ ಪ್ರಧಾನಿ ಮೋದಿಯವರ ಸರ್ಕಾರದಲ್ಲಿ ಎಲ್ಲದಕ್ಕೂ ಲೆಕ್ಕ ಸಿಗುತ್ತದೆ ಎಂದು ಹೇಳಿದರು.

ರಾವಣ ನಕಲಿ ಸಾಧುವಿನ ವೇಷ ಧರಿಸಿ ಸೀತೆಯನ್ನು ಅಪಹರಿಸಿದಂತೆಯೇ ಕಾಂಗ್ರೆಸ್ ಮತ್ತು ಸಮಾಜವಾದಿ ಸಿದ್ಧಾಂತದವರೂ ನಕಲಿ ವೇಷ ಧರಿಸಿ ಮತ ಕೇಳಲು ಬರುತ್ತಿದ್ದಾರೆ.

ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ವರು ಬಲ್ಲಿಯಾ ಜಿಲ್ಲೆಯ ಶೇಖ್‌ಪುರ ಮತ್ತು ಬೈರಿಯಾದಲ್ಲಿ ಚುನಾವಣಾ ಸಭೆಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು ಎಂದು ಮಾಹಿತಿ ಕಂಡು ಬಂದಿದೆ.

 

Nimma Suddi
";