ಕೃಷಿಗಾಗಿ ನೀರಿನ ಸಂರಕ್ಷಣೆ ಹಾಗೂ ಸದ್ಬಳಕೆ
ಎಲ್ಲಾ ಸಂಪನ್ಮೂಲಗಳಲ್ಲಿ ನೀರು ಸಹ ಒಂದು ಅತೀ ಮುಖ್ಯ ನೈಸರ್ಗಿಕ ಸಂಪನ್ಮೂಲವಾಗಿದೆ. ರೈತ ಬಾಂಧವರು ಇದರ ಸದ್ಬಳಕೆ ಮಾಡಿಕೊಳ್ಳುವ ಕುರಿತು ಮಾಹಿತಿ.
” ನೀರು ಒಂದು ಅಮೂಲ್ಯ ವಸ್ತು. ಇದು ಕೃಷಿ ಮತ್ತು ಪರ್ಯಾವರಣ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗೆ ಮೂಲವಾಗಿದೆ.
” ಜಲಾನಯನ ಪ್ರದೇಶಗಳಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆಯ ಪದ್ದತಿಗಳು ಮೂಲ ಸ್ಥಂಬಗಳಿದ್ದಂತೆ.
” ಮಳೆಯ ನೀರನ್ನು ಸಂರಕ್ಷಿಸುವುದು, ಆಯಾ ಪ್ರದೇಶದ ಮಳೆ, ಮಣ್ಣು, ಸಸ್ಯಸಂಕುಲ ಮತ್ತು ೂಮಿಯ ಇಳಿಜಾರಿನ ಮೇಲೆ ಅವಲಂಬಿತವಾಗಿದೆ.
” ಇದು ಅತಿ ಹೆಚ್ಚಿನ ಪ್ರಮಾಣದ ನೀರನ್ನು ಸಂಗ್ರಹಿಸಿ ಭೂಸವಕಳಿಯನ್ನು ತಡೆಯಲು ಸಹಾಯಕವಾಗುತ್ತದೆ.
” ಭೂಮಿಯಲ್ಲಿಯೇ ತೇವಾಂಶವನ್ನು ಉಳಿಸಿಕೊಳ್ಳಲು ಮತ್ತು ಇಂಗಲು ಹೆಚ್ಚಿನ ಅವಕಾಶ ಕಲ್ಪಿಸುವುದಾಗಿದೆ.