This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Politics News

ಮಧ್ಯರಾತ್ರಿ ಅಪ್ಪಳಿಸಲಿದೆ ನಿವಾರ್ ಚಂಡಮಾರುತ

ನಿಮ್ಮ ಸುದ್ದಿ ಬೆಂಗಳೂರು

ತಮಿಳುನಾಡು ಮತ್ತು ಪುದುಚೆರಿಯಲ್ಲಿ ತೀವ್ರ ಸ್ವರೂಪದ ಚಂಡಮಾರುತದ ಬಿರುಗಾಳಿಯು ಬೀಸುತ್ತಿದ್ದು, ಮುಂದಿನ ೧೨ ಗಂಟೆಗಳಲ್ಲಿ ಇದು ಮತ್ತಷ್ಟು ಪ್ರಬಲಗೊಳ್ಳಲಿದೆ.

ತಮಿಳುನಾಡು ಮತ್ತು ಪುದುಚೆರಿಯ ಕರಾವಳಿಯ ಭೂಭಾಗಗಳಲ್ಲಿ ನಡುವೆ ಬುಧವಾರ ಮಧ್ಯರಾತ್ರಿ ಅಥವಾ ಗುರುವಾರ ಬೆಳಗಿನ ವೇಳೆಗೆ ಚಂಡಮಾರುತ ಹಾದು ಹೋಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮಧ್ಯರಾತ್ರಿ ಅಥವಾ ನಸುಕಿನ ವೇಳೆಗೆ ಕಾರೈಕಲ್ ಮತ್ತು ಮಾಮಲ್ಲಪುರಂ ಮಧ್ಯೆ ಚಂಡಮಾರುತ ಧರೆಗೆ ಅಪ್ಪಳಿಸಲಿದ್ದು, ಭಾರಿ ಬಿರುಗಾಳಿ ಮಳೆ ನಿರೀಕ್ಷಿಸಲಾಗಿದೆ. ಚೆನ್ನೈ ನಗರದ ಪ್ರಮುಖ ಕುಡಿಯುವ ನೀರಿನ ಮೂಲಗಳಲ್ಲಿ ಒಂದಾದ ಚೆಂಬಾರಂಬಕ್ಕಮ್ ಜಲಾಶಯದಿಂದ ಬುಧವಾರ ಮಧ್ಯಾಹ್ನ ಸುಮಾರು ೧,೦೦೦ ಕ್ಯೂಸೆಕ್ಸ್ ನೀರನ್ನು ಅಡ್ಯಾರ್ ನದಿಗೆ ಬಿಡುಗಡೆ ಮಾಡಲಾಗಿದೆ.

ನದಿ ತೀರದಲ್ಲಿ ವಾಸಿಸುತ್ತಿರುವ ನೂರಾರು ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಮಂಗಳವಾರದಿಂದಲೇ ಸುರಿಯುತ್ತಿರುವ ಭಾರಿ ಮಳೆಯಿಂದ ಚೆನ್ನೈ ಹಾಗೂ ನೆರೆಯ ಜಿಲ್ಲೆಗಳಲ್ಲಿನ ಪ್ರಮುಖ ರಸ್ತೆಗಳು ಜಲಾವೃತವಾಗಿವೆ. ಜನರು ಮೊಣಕಾಲಿನವರೆಗೂ ತುಂಬಿದ್ದ ನೀರಿನ ನಡುವೆಯೇ ಸಾಗಿದರು. ಕೆಳಮಟ್ಟದ ಪ್ರದೇಶಗಳಲ್ಲಿರುವ ಅನೇಕ ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ.

ಚೆನ್ನೈ ಸೇರಿದಂತೆ ೧೩ ಜಿಲ್ಲೆಗಳಿಗೆ ಗುರುವಾರ ರಜೆ ಘೋಷಿಸಲಾಗಿದೆ. ಚೆನ್ನೈನಿಂದ ೩೦ ಕಿಮೀ ದೂರದಲ್ಲಿರುವ ಚೆಂಬಾರಂಬಕ್ಕಮ್ ಜಲಾಶಯದಲ್ಲಿ ಪರಿಶೀಲನೆ ನಡೆಸಿದ ಬಳಿಕ ಮುಖ್ಯಮಂತ್ರಿ ಇ.ಪಳನಿಸ್ವಾಮಿ ಈ ಆದೇಶ ಹೊರಡಿಸಿದ್ದಾರೆ. ೨೦೧೫ರಲ್ಲಿ ಚೆಂಬಾರAಬಕ್ಕಮ್ ಜಲಾಶಯದಿಂದ ಅಡ್ಯಾರ್ ನದಿಗೆ ಏಕಾಏಕಿ ನೀರುಬಿಟ್ಟಿದ್ದು ಚೆನ್ನೈ ಮತ್ತು ನೆರೆಯ ಜಿಲ್ಲೆಗಳಲ್ಲಿ ಪ್ರವಾಹಕ್ಕೆ ಕಾರಣವಾಗಿತ್ತು. ಹೀಗಾಗಿ ಈ ಬಾರಿ ಮುನ್ನೆಚ್ಚರಿಕೆಯಿಂದ ಮೊದಲೇ ನೀರನ್ನು ಬಿಡುಗಡೆ ಮಾಡಲಾಗಿದೆ.

ಎನ್‌ಡಿಆರ್‌ಎಫ್ ಪಡೆಗಳು ಈಗಾಗಲೇ ೧೩ ಜಿಲ್ಲೆಗಳಿಂದ ೩,೯೪೮ ಮಕ್ಕಳು ಸೇರಿದಂತೆ ೨೪,೧೬೬ ಜನರನ್ನು ೩೧೫ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಿವೆ. ಚೆನ್ನೈ ಮತ್ತು ನೆರೆಯ ಜಿಲ್ಲೆಗಳಲ್ಲಿ ಗಂಟೆಗೆ ೮೦-೯೦ ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ೧೦೦ ಕಿಮೀ ವೇಗದಲ್ಲಿ ಸುಳಿರ್ಗಾಳಿ ಸುತ್ತುತ್ತಿದೆ. ಪುದುಚೆರಿ, ಕುಡ್ಡಲೋರ್, ಮೈಲಾದುರೈ, ಕಾರೈಕಲ್, ವಿಳ್ಳುಪುರಂ ಮತ್ತು ಚೆಂಗಲ್ಪೇಟ್‌ಗಳಲ್ಲಿ ಚಂಡಮಾರುತ ಹಾದುಹೋಗುವಾಗ ಗಂಟೆಗೆ ೧೩೦-೧೪೫ ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನಿವಾರ್ ಚಂಡಮಾರುತ:ಬೆಂಗಳೂರು-ಚೆನ್ನೈ ರೈಲು ಮಾರ್ಗ ಬದಲು

ನಿವಾರ್ ಚಂಡಮಾರುತದ ಕಾರಣದಿಂದಾಗಿ ಚೆನ್ನೈ ಸೇರಿದಂತೆ ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಭಾರತೀಯ ರೈಲ್ವೆ ಹಲವು ರೈಲುಗಳ ಮಾರ್ಗವನ್ನು ಬದಲಾವಣೆ ಮಾಡಿದೆ.

ನೈಋತ್ಯ ರೈಲ್ವೆ ಚೆನ್ನೈ ಮೂಲಕ ಬೆಂಗಳೂರಿಗೆ ಆಗಮಿಸುವ ಹಲವು ರೈಲುಗಳ ಮಾರ್ಗವನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಚೆನ್ನೈ ಸೇರಿದಂತೆ ತಮಿಳುನಾಡಿನ ವಿವಿಧ ಜಿಲ್ಲೆಗಳಿಗೆ ಆಗಮಿಸಬೇಕಿದ್ದ ರೈಲುಗಳ ಮಾರ್ಗ ಬದಲಾವಣೆಯಾಗಿದೆ.

ದಾನ್‌ಪುರ್‌ನಿಂದ ಹೊರಡುವ ೦೨೨೯೬ ರೈಲು ನವೆಂಬರ್ ೨೬ರಂದು ಚೆನ್ನೈಗೆ ಆಗಮಿಸುವುದಿಲ್ಲ. ರೇಣುಗುಂಟ, ಜೋರಾರಪಟ್ಟಿ ಮಾರ್ಗವಾಗಿ ಬೆಂಗಳೂರಿಗೆ ಆಗಮಿಸಲಿದೆ.

ರೈಲು ನಂಬರ್ ೦೨೫೧೦ ಗೌಹಾತಿ-ಬೆಂಗಳೂರು ಕಂಟೈನ್ಮೆAಟ್ ವಿಶೇಷ ರೈಲು ನವೆಂಬರ್ ೨೬ರಂದು ಪೆರಂಬೂರು ನಿಲ್ದಾಣಕ್ಕೆ ಹೋಗುವುದಿಲ್ಲ. ರೈಲು ನಂಬರ್ ೦೨೫೭೭ ದರ್ಬಾಂಗ್-ಮೈಸೂರು ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು ನಿಲ್ದಾಣಕ್ಕೆ ನವೆಂಬರ್ ೨೬ರಂದು ಆಗಮಿಸುವುದಿಲ್ಲ.

ನವೆಂಬರ್ ೨೬ರಂದು ಬೆಂಗಳೂರಿನಿಂದ ಹೊರಡುವ ೦೨೨೯೫ ಬೆಂಗಳೂರು-ದಾನ್‌ಪುರ್ ರೈಲು ಚೆನ್ನೈ ನಿಲ್ದಾಣಕ್ಕೆ ಹೋಗದಂತೆ ಮಾರ್ಗ ಬದಲಾವಣೆ ಮಾಡಲಾಗಿದೆ. ಯಶವಂತಪುರದಿಂದ ಹೊರಡುವ ದಾನಾಪುರ್ ವಿಶೇಷ ಎಕ್ಸ್ಪ್ರೆಸ್ ಸಹ ಚೆನ್ನೈಗೆ ಹೋಗುವುದಿಲ್ಲ.

ನಿವಾರ್ ಚಂಡಮಾರುತದ ಪರಿಣಾಮ ಚೆನ್ನೈನಲ್ಲಿ ಬುಧವಾರದಿಂದಲೇ ಭಾರಿ ಮಳೆಯಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರೈಲುಗಳ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ.

Nimma Suddi
";